'ರಾಧಿಕಾ ಕುಮಾರಸ್ವಾಮಿ ಕರಿಯಾ ಅಂದ್ರೆ ಓಕೆ..ಜಮೀರ್ ಕರೆದ್ರೆ ನಾಟ್ ಓಕೆ': ಮತ್ತೆ ವಿವಾದ ಎಬ್ಬಿಸಿದ್ರಾ ತೇಜಸ್ವಿನಿ ಗೌಡ!

ಬೆಂಗಳೂರು, ನವೆಂಬರ್ 19: ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ರಾಜ್ಯ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕರಿಯಾ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದರು. ಅಪಾಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇನ್ನೇನು ವಿವಾದ ತಣ್ಣಗಾಯಿತು ಎನ್ನುವಷ್ಟರಲ್ಲಿ ಕಾಂಗ್ರೆಸ್ ನಾಯಕಿ ತೇಜಸ್ವಿನಿ ಗೌಡ ಅವರು ಎಚ್‌ಡಿಕೆ ಕುರಿತು ಮಾತನಾಡಿದ್ದಾರೆ. ಈ ವಿಷಯದಲ್ಲಿ ರಾಧಿಕಾ ಕುಮಾರಸ್ವಾಮಿ ಅವರನ್ನು ಎಳೆದು ತಂದು ವಿವಾದ ಸೃಷ್ಟಿಸಿದ್ದಾರೆ ಎನ್ನಲಾಗುತ್ತಿದೆ.

ಹೌದು, ಮಂಗಳವಾರ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತೇಜಸ್ವಿನಿ ಗೌಡ ಅವರು ಮಾತನಾಡಿದ್ದಾರೆ. ರಾಧಿಕಾ ಕರಿಯ ಅಂತ ಕರೆದ್ರೆ ಓಕೆ, ಅದೇ ಜಮೀರ್ ಕರೆದ್ರೆ ಯಾಕೆ? ಅಂತ ಕೇಳಿದ್ದಾರೆ ಎನ್ನುವ ಮೂಲಕ ವಿವಾದಕ್ಕೆ ತುಪ್ಪ ಸುರಿದಿದ್ದಾರೆ.

Congress Tejaswini Gowda Gave Controversial Statement About Zameer Ahmed Kariya Statement

ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಮಾತನಾಡುವ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ನಟಿ ರಾಧಿಕಾ ಅವರನ್ನು ಎಳೆದು ತಂದಿದ್ದಾರೆ. ಈ ಹಿಂದೆ ಸಂದರ್ಶನದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ 'ನಿಮ್ಮನ್ನು ಕುಮಾರಸ್ವಾಮಿಯವರು ಏನೆಂದು ಕರೆಯುತ್ತಾರೆ ಎಂದರೆ, ಅದಕ್ಕೆ ಚಿನ್ನು ಅನ್ನುತ್ತಾರೆ ಎಂದು ಹೇಳುತ್ತಾರೆ. ನೀವು ಏನೆಂದು ಕರೆಯುತ್ತೀರಿ ಎಂದಾಗ ಕರಿಯಾ ಎಂದು ಕರೆಯುತ್ತೇನೆ ಎಂದು ರಾಧಿಕಾ ಹೇಳುತ್ತಾರೆ.

ಇದೇ ವಿಷಯ ಪ್ರಸ್ತಾಪಿಸಿದ ತೇಜಸ್ವಿನಿ ಗೌಡ ಅವರು, ರಾಧಿಕಾ ಕರಿಯ ಅಂತ ಕರೆದ್ರೆ ಓಕೆ, ಅದೇ ಜಮೀರ್ ಕರೆದ್ರೆ ಯಾಕೆ? ಎಂದು ಟೀಕಿಸಿದ್ದಾರೆ. ಕರ್ನಾಟಕ ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಬರುವ ಮುನ್ನವೇ ಮತ್ತೊಂದು ಭಾರಿ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾಂಗ್ರೆಸ್ ನಾಯಕರೇ ಜಮೀರ್ ವಿರುದ್ಧ ಕಿಡಿ

ಸದ್ಯ ಕರಿಯಾ ಎಂದು ಕರೆದಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಆಕ್ರೋಶ ವ್ಯಕ್ತವಾದ ನಂತರ ಅವರು ಕ್ಷಮೆ ಕೇಳಿದರು. ನನ್ನನ್ನು ಕುಮಾರಸ್ವಾಮಿ ಅವರು ಕುಳ್ಳ ಎಂದು ಕರೆಯುತ್ತಾರೆ, ನಾನು ಅವರನ್ನು ಹಾಗೆ ಕರೆಯುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು. ಉಪ ಚುನಾವಣೆ ಹೊತ್ತಿನಲ್ಲಿ ಅವರ ಹೇಳಿಕೆಗೆ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ಷಮೆ ಕೇಳಿದರು.

ಕೇವಲ ಬಿಜೆಪಿ, ಜೆಡಿಎಸ್ ನಾಯಕರು ಕಾರ್ಯಕರ್ತರು ಮಾತ್ರವಲ್ಲದೇ, ಸ್ವತಃ ಕಾಂಗ್ರೆಸ್ ನಾಯಕರೇ ಜಮೀರ್ ಅಹ್ಮದ್ ಖಾನ್ ವಿರುದ್ಧ ಆಕ್ರೋಶ ಹೊರ ಹಾಕಿದರು. ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು. ಕೇಂದ್ರ ಹೈಕಮಾಂಡ್‌ಗೆ ದೂರು ನೀಡಿದ್ದಾರೆ. ಜೆಡಿಎಸ್ ನಾಯಕರು ಚನ್ನಪಟ್ಟಣಕ್ಕೆ ಕಾಲಿಡುವಂತೆ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದರು.

ಇನ್ನೇನು ಎಲ್ಲವು ತಣ್ಣಗಾಯಿತು ಎನ್ನುವಷ್ಟರಲ್ಲಿಯೇ ಕಾಂಗ್ರೆಸ್ ನಾಯಕಿ ತೇಜಸ್ವಿನಿ ಗೌಡ ಅವರು ಅದೇ ಕರಿಯಾ ವಿಚಾರವಾಗಿ ಮಾತನಾಡಿದ್ದಾರೆ. ವಿವಾದ ಸೃಷ್ಟಿಸಿದರಾ? ಇದು ಮತ್ತೆ ಕಾಂಗ್ರೆಸ್‌ಗೆ ಮುಳುವಾಗಲಿದೆಯಾ?. ಈ ಬಗ್ಗೆ ಕುಮಾರಸ್ವಾಮಿಯವರಾಗಲಿ, ಇತರ ನಾಯಕರ ಪ್ರತಿಕ್ರಿಯೆ ಏನು ಎಂದು ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+