ಭಾರತ್ ಬಂದ್‌ಗೆ ಬೆಂಬಲ ಕೋರಿ ಕಾಂಗ್ರೆಸ್ ನಿಂದ ಬೃಹತ್ ಬೈಕ್ ಜಾಥಾ

ಬೆಂಗಳೂರು, ಸೆಪ್ಟೆಂಬರ್ 8: ಸೆಪ್ಟೆಂಬರ್ 10 ರಂದು ಕರೆ ನೀಡಿರುವ ಭಾರತ್ ಬಂದ್ ಗೆ ಬೆಂಬಲ ಕೋರಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಆನಂದ್ ರಾವ್ ವೃತ್ತದ ಬಳಿ ಬೃಹತ್ ಬೈಕ್ ಜಾಥಾ ನಡೆಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಬೈಕ್ ಜಾಥಾ ನಡೆಯಿತು. ದೇಶದ ಹಿತಕ್ಕಾಗಿ ಭಾರತ್ ಬಂದ್ ಗೆ ದಾರ್ವಜನಿಕರು ಬೆಂಬಲಿಸಿ ಮತ್ತು ಮೋದಿ ಸರ್ಕಾರವನ್ನು ಕೊನೆಗಾಣಿಸಿ ಎನ್ನುವ ಘೋಷಣೆ ಕೂಗುತ್ತಾ ಮುಂದೆ ಸಾಗಿದರು.

ದಿನೇಶ್ ಗುಂಡೂರಾವ್ ಮಾತನಾಡಿ, ಕಳೆದ ನಾಲ್ಕುವರೆ ವರ್ಷದಲ್ಲಿ ಬಿ.ಜೆ.ಪಿ.ಕೇಂದ್ರ ಸರ್ಕಾರದ ನರೇಂದ್ರ ಮೋದಿರವರು ಅಚ್ಛೇದಿನ್ ಎಂದು ಹೇಳಿ ಜನರಿಗೆ ಸುಳ್ಳು ಭರವಸೆ ನೀಡಿದ್ದಾರೆ.ಜನರ ಮೇಲೆ ತೆರಿಗೆ ಹೆಚ್ಚಳದಿಂದ ಜನ ಸಂಕಷ್ಟದಲ್ಲಿ ಇದ್ದಾರೆ .

Congress seek support for Bharath bandh holding bike rally in Bengaluru

ಪ್ರೆಟ್ರೋಲ್ ಮತ್ತು ಡೀಸೆಲ್ ,ಸಿಲಿಂಡರ್ ಮೇಲೆ ಪ್ರತಿದಿನ ಬೆಲೆ ಏರಿಕೆಯಾಗುತ್ತದೆ ,ನಿಯಂತ್ರಣಕ್ಕೆ ಬರುತ್ತಿಲ್ಲ ,ಇದೆಕ್ಕೆಲ್ಲ ಕಾರಣ ಕೇಂದ್ರದ ದುರಾಡಳಿತ ಸರ್ಕಾರ, ಇದರ ವಿರುದ್ಧ ಹೋರಾಟ ಮಾಡಲು ಸೋಮವಾರ ಭಾರತ್ ಬಂದ್ ಕರೆ ನೀಡಲಾಗಿದೆ ಎಂದರು.

ಎಡಪಕ್ಷಗಳು ಹಲವಾರು ಪಕ್ಷಗಳು ಬೆಂಬಲ ನೀಡಿದೆ ,ಬೆಂಗಳೂರು ಕೇಂದ್ರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಇಂದು ಬೈಕ್ ಮೂಲಕ 28ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ದುರಾಡಳಿತ ಹಾಗೂ ಬೆಲೆ ಏರಿಕೆ ಸಾರ್ವಜನಿಕರಿಗೆ ಜನಜಾಗೃತಿ ಹಾಗೂ ಭಾರತ್ ಬಂದ್ ಗೆ ಸಾರ್ವಜನಿಕರು ಸ್ವಯಂಪೇರಿತರಾಗಿ ಬಂದ್ ಮಾಡುವಂತೆ ಮನವಿ ಮಾಡಲು ತೆರಳುವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ.ವಿ.ಕಾ.ಮಾಜಿ ಅಧ್ಯಕ್ಷರಾದ ಎಸ್.ಮನೋಹರ್ ,ಬೆಂಗಳೂರು ಕೇಂದ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಜನಾರ್ಧನ್ ಮತ್ತು ಸಲೀಮ್ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯರು ,ಕಾಂಗ್ರೆಸ್ ಮುಖಂಡರಾದ ಪರಿಸರ ರಾಮಕೃಷ್ಣ ,ಆನಂದ್,ಅದಿತ್ಯ ಮಾರನ್ ಶೇಖರ್ ,ಬಾಬು ರವರು ಭಾಗವಹಿಸಿದ್ದರು .500ಕ್ಕೂ ಹೆಚ್ಚು ಬೈಕ್ ಮೂಲಕ ಭಾರತ್ ಬಂದ್ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಷೋಷಣೆಗಳ ಮುಖಾಂತರ ರ್ಯಾಲಿ ಚಾಲನೆಯಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+