ಉರಿಗೌಡ, ನಂಜೇಗೌಡಗೆ ತಂದೆ ಸಿಟಿ ರವಿ, ತಾಯಿ ಅಶ್ವತ್ಥ ನಾರಾಯಣ: ಆಧಾರ್, ವೋಟರ್ ಐಡಿ ಬಿಡುಗಡೆ ಮಾಡಿದ ಕಾಂಗ್ರೆಸ್!
ಉರಿಗೌಡ ಮತ್ತು ದೊಡ್ಡ ನಂಜೇಗೌಡ ಅವರ ಆಧಾರ್ ಕಾರ್ಡ್‌ಗಳು ಎಂದು ಎರಡು ಪೋಸ್ಟರ್ ಹಂಚಿಕೊಂಡಿದ್ದು ಅದರಲ್ಲಿ ಸಿ.ಟಿ. ರವಿ ಮತ್ತು ಸಚಿವ ಅಶ್ವತ್ಥ ನಾರಾಯಣ ಅವರನ್ನು ತಂದೆ ತಾಯಿ ಎಂದು ವ್ಯಂಗ್ಯವಾಡಿದೆ.
ಬೆಂಗಳೂರು, ಮಾರ್ಚ್ 20: ಕರ್ನಾಟಕ ಚುನಾವಣೆ ಪ್ರಚಾರದಲ್ಲಿ ಈ ಬಾರಿ ಹೆಚ್ಚು ವಿವಾದಕ್ಕೆ ಒಳಗಾಗಿರುವ ಹೆಸರುಗಳು ಉರಿಗೌಡ ಮತ್ತು ದೊಡ್ಡ ನಂಜೇಗೌಡ ಎಂಬುವು. ಇಬ್ಬರು ವ್ಯಕ್ತಿಗಳು ಟಿಪ್ಪು ಸುಲ್ತಾನ್ ಅವರನ್ನು ಕೊಂದರು ಎಂದು ಬಿಜೆಪಿ ಪ್ರಚಾರ ನೀಡುತ್ತಿದೆ. ಆದರೆ, ಇದನ್ನು ಅಲ್ಲಗೆಳೆದಿರುವ ಕಾಂಗ್ರೆಸ್ ವಿಭಿನ್ನ ಪೋಸ್ಟರ್ ಮೂಲಕ ಬಿಜೆಪಿ ಕಾಲೆಳೆದಿದೆ.
ಕೋಲಾರ ನಮ್ಮೂರು ಸಿದ್ದರಾಮಯ್ಯ ನಮ್ಮೋರು - Kolara Nammuru Siddaramaiah Nammoru ಎಂಬ ಹೆಸರಿನ ಪೇಜ್ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಂಗ್ಯವಾಗಿ ಹಲವು ಪೋಸ್ಟರ್‌ಗಳನ್ನು ಹಂಚಿಕೊಂಡಿದೆ. ಉರಿಗೌಡ ಮತ್ತು ದೊಡ್ಡ ನಂಜೇಗೌಡ ಅವರ ಆಧಾರ್ ಕಾರ್ಡ್‌ಗಳು ಎಂದು ಎರಡು ಪೋಸ್ಟರ್ ಹಂಚಿಕೊಂಡಿದ್ದು ಅದರಲ್ಲಿ ಸಿ.ಟಿ. ರವಿ ಮತ್ತು ಸಚಿವ ಅಶ್ವತ್ಥ ನಾರಾಯಣ ಅವರನ್ನು ತಂದೆ ತಾಯಿ ಎಂದು ವ್ಯಂಗ್ಯವಾಡಿದೆ.

ಉರಿಗೌಡ, ನಂಜೇಗೌಡ ಹೆಸರಿನ ವಿವಾದ ವಿಚಾರವಾಗಿ ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವಿನ ಗುದ್ದಾಟ ಇನ್ನೂ ನಿಂತಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಈ ಬಗ್ಗೆ ಬಿಜೆಪಿ ವಿರುದ್ಧ ಕಿಡಿಕಾರಿವೆ. ಇದರಲ್ಲಿ ಒಂದು ಹೆಜ್ಜೆ ಮುಮದೆ ಹೋಗಿರುವ ಕಾಂಗ್ರೆಸ್ ಉರಿಗೌಡ, ನಂಜೇಗೌಡ ಹೆಸರಲ್ಲಿ ಅಣಕು ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಬಿಡುಗಡೆ ಮಾಡಿ ಬಿಜೆಪಿ ಕಾಲೆಳೆದಿದೆ.
*ಆಧಾರ್ ಕಾರ್ಡ್‌ನಲ್ಲಿ ಏನಿದೆ...?*
ಕೆಲವೇ ದಿನಗಳಲ್ಲಿ ಉರಿಗೌಡ ಮತ್ತು ನಂಜೇಗೌಡರನ್ನು ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದು. ಅನೇಕ ಸಂಸೋಧನೆ ಬಳಿಕ ಸಿಕ್ಕಿದೆ ಎಂದು ಹೇಳಲಾಗಿದೆ.
೧. ಹೆಸರು: ನಂಜೇಗೌಡ
ತಾಯಿ: ಅಶ್ವತ್ಥ ನಾರಾಯಣ
ತಂದೆ: ಸಿ.ಟಿ.ರವಿ
ಹುಟ್ಟಿದ್ದು ಚುನಾವಣೆ ಹತ್ತಿರ ಬಂದಾಗ
ಜನ್ಮಸ್ಥಳ: ಬಿಜೆಪಿ ಕಚೇರಿ, ಮಲ್ಲೇಶ್ವರಂ, ಬೆಂಗಳೂರು

೨. ಹೆಸರು: ಉರೀಗೌಡ
ತಾಯಿ: ಅಶ್ವತ್ಥ ನಾರಾಯಣ
ತಂದೆ: ಸಿ.ಟಿ.ರವಿ
ಹುಟ್ಟಿದ್ದು ಚುನಾವಣೆ ಹತ್ತಿರ ಬಂದಾಗ
ಜನ್ಮಸ್ಥಳ: ಬಿಜೆಪಿ ಕಚೇರಿ, ಮಲ್ಲೇಶ್ವರಂ, ಬೆಂಗಳೂರು
ಮತ್ತೊಂದು ಸ್ಫೋಟಕ ದಾಖಲೆ ಬಿಡುಗಡೆ ಎಂದು ವೋಟರ್ ಐಡಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ಬೆಂಬಲಿಗರು ಇದರಲ್ಲಿಯೂ ಉರಿಗೌಡ ಮತ್ತು ನಂಜೇಗೌಡರಿಗೆ ಅಶ್ವಥ್ ನಾರಾಯಣ್ ತಾಯಿ ಹಾಗೂ ಸಿ.ಟಿ.ರವಿ ತಂದೆ. ಇವರಿಬ್ಬರೂ ಹುಟ್ಟಿದ್ದು ಚುನಾವಣೆ ಹತ್ತಿರ ಬಂದಾಗ. ಇವರ ಜನ್ಮಸ್ಥಳ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಎಂದು ಹೇಳಿದ್ದಾರೆ. ಈ ಪೋಸ್ಟರ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ಇನ್ನು, ಉರಿಗೌಡ, ದೊಡ್ಡ ನಂಜೇಗೌಡ ಕುರಿತು ಸಿನಿಮಾ ಮಾಡಲು ಹೊರಟಿದ್ದ ಸಚಿವ ಮುನಿರತ್ನ ಅವರಿಗೆ ಆದಿಚುಂಚನಗಿರಿ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಉರಿಗೌಡ ಹಾಗೂ ನಂಜೇಗೌಡ ಸಿನಿಮಾಗೆ ಬಂಡವಾಳ ಹೂಡಲು ನಿರ್ಧರಿಸಿದ್ದ ಮುನಿರತ್ನ ಆ ಸಿನಿಮಾ ಯೋಜನೆಯನ್ನು ಕೈಬಿಡಲು ನಿರ್ಧರಿಸಿದ್ದಾರೆ. ಸೋಮವಾರ ನಿರ್ಮಲಾನಂದ ನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುನಿರತ್ನ, ನಿರ್ದಿಷ್ಟ ವರ್ಗದ ಭಾವನೆಗಳಿಗೆ ಧಕ್ಕೆ ತರುವಂತಹ ಸಿನಿಮಾ ಮಾಡಲು ನಾನು ಬಯಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಇನ್ನು ಟಿಪ್ಪು ಸುಲ್ತಾನ್ ಅವರನ್ನು ಉರಿಗೌಡ, ನಂಜೇಗೌಡ ಕೊಂದಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಅವರ ಜತೆ ಚರ್ಚೆ ನಡೆಸಿ ರಾಜಿ ಮಾಡಿಕೊಳ್ಳಬೇಡಿ ಎಂದು ಮಂಡ್ಯದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನವಿ ಮಾಡಿದ್ದಾರೆ.












Click it and Unblock the Notifications