Munirathna: ಮುನಿರತ್ನ ಹಗರಣ, ಕುಕೃತ್ಯಗಳಿಗೆ RSS ಶಾಖೆಯಲ್ಲಿ ಟ್ರೈನಿಂಗ್?: ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು, ಸೆಪ್ಟಂಬರ್ 19: ಕರ್ನಾಟಕ ರಾಜ್ಯದಲ್ಲಿ ರಾಜಕೀಯ ನಾಯಕರ ತೆರೆ ಹಿಂದಿನ ಹಗರಣಗಳು ಒಂದೊಂದಾಗೇ ಹೊರ ಬರುತ್ತಿವೆ. ಇದೀಗ ಬಿಜೆಪಿ ಶಾಸಕ ಮುನಿರತ್ನ ಅವರ ಸರದಿ ಎಂಬಂತೆ ಅವರ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಮುನಿರತ್ನ ಹಾಗೂ ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಕಾಂಗ್ರೆಸ್ ಲೇವಡಿ ಮಾಡಿದೆ.

ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಕರ್ನಾಟಕ ಕಾಂಗ್ರೆಸ್ ಹಗರಣಗಳು ಕುಕೃತ್ಯಗಳ ಬಂಡಾರ ಬಗೆದಷ್ಟೂ ಹೊರಬರುತ್ತಿವೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವಿಟ್ ಮೂಲಕ ವಾಗ್ದಾಳಿ ನಡೆಸಿದೆ. ಬಿಜೆಪಿ ನಾಯಕನ ಈ ದುಶ್ಕೃತ್ಯಗಳಿಗೆ ಆರ್‌ಎಸ್‌ಎಸ್‌ನಿಂದ ತರಬೇತಿ ನೀಡುತ್ತಿದೆಯೇ ಎಂದು ಕಾಂಗ್ರೆಸ್ ಕೇಳಿದೆ.

Congress Questions BJP on MLA Muniratna s Alleged RSS Training for Misdeeds

ಮಹಿಳೆಯರನ್ನು ಮಂಚಕ್ಕೆ ಕಳಿಸಿ ಎಂದಿದ್ದಲ್ಲದೆ ಶಾಸಕ ಮುನಿರತ್ನ ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಮಹಿಳೆಯರನ್ನು ಬ್ಲಾಕ್‌ಮೇಲ್ ಮಾಡಿ ಹೆದರಿಸಿ ಮಾಡಿ ಹನಿಟ್ರಾಪ್ ಗೆ ಬಳಸಿಕೊಳ್ಳಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ರಾಜಕೀಯ ವಿರೋಧಿಗಳಿಗೆ ಏಡ್ಸ್ ರೋಗಿಯ ರಕ್ತ ಇಂಜೆಕ್ಟ್ ಮಾಡಲು ಶಾಸಕ ಮುನಿರತ್ನ ಪ್ಲಾನ್ ಮಾಡಲು ಪ್ಲಾನ್ ಮಾಡಿಕೊಂಡಿದ್ದರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ವಿರೋಧಿಗಳಿಗೆ ಏಡ್ಸ್ ಹಬ್ಬಿಸಲು ಯತ್ನಿಸಿದ್ದಾರೆ. ಅವರ ಹಗರಣ ಊಹಿಸಲು ಸಾಧ್ಯವಿಲ್ಲ ಎಂದು ದೂರಿದೆ.

ವಿಕೃತ ವಿದ್ಯೆಗಳಿಗೆ RSS ಶಾಖೆಯಲ್ಲಿ ತರಬೇತಿ?: ಕಾಂಗ್ರೆಸ್‌

ಇವಷ್ಟೇ ಅಲ್ಲ ಮುನಿರತ್ನ ಅವರು ಎಂತೆಂತಹ ವಿಕಾರ, ವಿಕೃತ ಕೃತ್ಯಗಳನ್ನು ಎಸಗಿದ್ದಾರೆ ಎಂದು ಜನಸಾಮಾನ್ಯರು ಊಹಿಸಲೂ ಆಗದು. ಈ ಈ ಎಲ್ಲಾ ವಿಕೃತ ವಿದ್ಯೆಗಳು ಆರ್ಎಸ್ಎಸ್ ಶಾಖೆಯಲ್ಲಿ ಟ್ರೈನಿಂಗ್ ಕೊಡಲಾಗುತ್ತಿದೆಯೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಅಲ್ಲದೇ ಬಿಜೆಪಿ ಕರ್ನಾಟಕಕ್ಕೆ ಟ್ಯಾಗ್ ಮಾಡಿ ಪ್ರಶ್ನೆ ಮಾಡಿದೆ. ಸದ್ ಈ ಬಗ್ಗೆ ಬಿಜೆಪಿ ನಾಯಕರು ಏನು ಉತ್ತರಿಸಲಿದ್ದಾರೆ ಎಂದು ಗೊತ್ತಾಗಬೇಕಿದೆ.

ಗುತ್ತಿಗೆದಾರರಿಗೆ ಬಿಲ್ ಪಾಸ್ ಮಾಡಲು ಕಮಿಷನ್ ಕೇಳಿದ್ದ ಮುನಿರತ್ನ ಗುತ್ತಿಗೆದಾರರನ ಮೇಲೆ ಜಾತಿ ನಿಂದನೆ ಆರೋಪದಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ವಿಚಾರಣೆ ಹಂತದಲ್ಲಿದೆ. ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರದಲ್ಲಿ ಇಡಲಾಗಿದೆ.

ಮುನಿರತ್ನ ವಿರುದ್ಧ ಒಂದೊಂದೆ ಪ್ರಕರಣ ಬೆಳಕಿಗೆ

ಇದರ ಬೆನ್ನಲ್ಲೆ ಶಾಸಕ ಮುನಿರತ್ನ ತನ್ನ ರಾಜಕೀಯ ವಿರೋಧಿಗಳಿಗೆ ಏಡ್ಸ್ ರೋಗಿಯ ರಕ್ತ ಇಂಜೆಕ್ಟ್ ಮಾಡಲು ಮುಂದಾಗಿದ್ದರು ಎಂಬ ಭಯಾನಕ ಅಂಶ ಬೆಳಕಿಗೆ ಬಂದಿದೆ. ಸಾರ್ವಜನಿಕ ಜೀವನದಲ್ಲಿರುವ, ಜನಪ್ರತಿನಿಧಿಯೊಬ್ಬರು ಇಂತಹ ಮಟ್ಟಕ್ಕೆ ಇಳಿಯುತ್ತಾರೆಯೇ? ಎಂಬ ಪ್ರಶ್ನೆ ಉದ್ಭವವಾಗಿದೆ.

ಇದು ಸಾಲದೆಂಬಂತೆ ತನ್ನ ಮೇಲೆ ಮುನಿರತ್ನ ಅವರು ಅತ್ಯಾಚಾರ ಮಾಡಿದ್ದಾರೆ ಎಂದು ರಾಮನಗರ ಜಿಲ್ಲೆಯ ಕಗ್ಗಲಿಪುರ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ. ಇತ್ತ ಜಾತಿ ನಿಂದನೆ ಪ್ರಕರಣದಲ್ಲಿ ಜಾಮೀನಿಗೆ ಮುನಿರತ್ನ ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ಜಾಮೀನು ಸಿಕ್ಕರೆ, ಶಾಸಕರನ್ನು ಅತ್ಯಾಚಾರ ಪ್ರಕರಣದಲ್ಲಿ ರಾಮನಗರ ಪೊಲೀಸರು ಬಂಧಿಸಲು ಸಜ್ಜಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+