ಮುಂಬೈನಿಂದ ಬೆಂಗಳೂರಿಗೆ ಬಂದ ಕಾಂಗ್ರೆಸ್‌ನ ನಾಲ್ವರು ಅತೃಪ್ತ ಶಾಸಕರು

ಬೆಂಗಳೂರು, ಫೆಬ್ರವರಿ 13: ಮುಂಬೈನಲ್ಲಿದ್ದ ಕಾಂಗ್ರೆಸ್‌ನ ನಾಲ್ವರು ಶಾಸಕರು ಮಂಗಳವಾರ ಮಧ್ಯರಾತ್ರಿ ಬೆಂಗಳೂರಿಗೆ ಬಂದಿಳಿದಿದ್ದಾರೆ.

ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ತರಾತುರಿಯಲ್ಲಿದ್ದ ಶಾಸಕರು ಬಿಜೆಪಿಯಿಂದ ಬಂಧಿಯಾಗಿದ್ದರು ಎನ್ನುವ ಮಾತುಗಳು ಕೇಳಿಬಂದಿತ್ತು, ಇದೀಗ ರಮೇಶ್ ಜಾರಕಿಹೊಳಿ, ಕೆಆರ್ ಪೇಟೆ ಶಾಸಕ ನಾರಾಯಣಗೌಡ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ನಾನು ಆಪರೇಷನ್ ಕಮಲಕ್ಕೆ ಒಳಗಾಗಿದ್ದೇನೆ ಎನ್ನುವುದೆಲ್ಲಾ ಸುಳ್ಳು, ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ ನಾನು ಸಿಎಂ ಹಾಗೂ ಸಚಿವ ಸಾರಾ ಮಹೇಶ್ ಸಂಪರ್ಕದಲ್ಲಿದ್ದೇನೆ. ನಾನು ಮುಂಬೈ ಆಸ್ಪತ್ರೆಗೆ ಹೋಗಿದ್ದೆ ಎಂದು ನಾರಾಯಣಗೌಡ ತಿಳಿಸಿದ್ದಾರೆ.

Congress MLA Ramesh Jarkiholi arrived in Bengaluru tuesday mid night

ನಂತರ ಕಾಂಗ್ರೆಸ್​ನ ಬಂಡಾಯಗಾರ ಶಾಸಕರ ನಾಯಕ ರಮೇಶ್​ ಜಾರಕಿಹೊಳಿ ಅವರೂ ಬಂದಿಳಿದರು. ಆದರೆ, ಅವರು ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರು.

Congress MLA Ramesh Jarkiholi arrived in Bengaluru tuesday mid night

ಈ ವೇಳೆ ಮಾತನಾಡಿದ ಸಚಿವ ಸಾ.ರಾ. ಮಹೇಶ್, ಮುಂಬೈನಲ್ಲಿದ್ದ ಎಲ್ಲ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ. ಆದರೆ ಅವರನ್ನು ಸಂಪರ್ಕಿಸಲು ಇನ್ನೂ ಆಗಿಲ್ಲ. ಶಾಸಕ ನಾರಾಯಣಗೌಡರನ್ನು ಕರೆತಂದಿದ್ದೇವೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+