ಶಾಸಕ ಸಿಪಿ ಯೋಗೇಶ್ವರ್ ಅವರ ಬ್ಯಾಂಕ್ ಖಾತೆಗೆ ಕನ್ನ
ಚನ್ನಪಟ್ಟಣದ ಕಾಂಗ್ರೆಸ್ ಶಾಸಕ ಸಿಪಿ ಯೋಗೇಶ್ವರ್ ಅವರ ಬ್ಯಾಂಕ್ ಖಾತೆಗೆ ದುಷ್ಕರ್ಮಿಗಳು ಕನ್ನ ಹಾಕಿದ್ದಾರೆ. ಮಾರ್ಚ್ 18ರಂದು ಈ ಕೃತ್ಯ ನಡೆದಿದ್ದು, ಈ ಕುರಿತಂತೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರು, ಮಾರ್ಚ್ 24: ಚನ್ನಪಟ್ಟಣದ ಕಾಂಗ್ರೆಸ್ ಶಾಸಕ ಸಿಪಿ ಯೋಗೇಶ್ವರ್ ಅವರ ಬ್ಯಾಂಕ್ ಖಾತೆಗೆ ದುಷ್ಕರ್ಮಿಗಳು ಕನ್ನ ಹಾಕಿದ್ದಾರೆ. ಮಾರ್ಚ್ 18ರಂದು ಈ ಕೃತ್ಯ ನಡೆದಿದ್ದು, ಈ ಕುರಿತಂತೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಜೆ.ಸಿ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಳಿತಾಯ ಖಾತೆಗೆ ಕನ್ನ ಹಾಕಲಾಗಿದೆ.

ಖಾತೆಯಲ್ಲಿದ್ದ 1.9 ಲಕ್ಷ ರುಪಾಯಿಗಳನ್ನು ಕದ್ದಿರುವ ಶಂಕೆ ವ್ಯಕ್ತವಾಗಿದೆ. ಮಾರ್ಚ್ 18ರಂದು ಮುಂಬೈ, ಪುಣೆಯಲ್ಲಿ ದುಡ್ಡು ಡ್ರಾ ಮಾಡಿರುವ ಮಾಹಿತಿ ಲಭ್ಯವಾಗಿದೆ.











Click it and Unblock the Notifications