Breaking: ಕಾಂಗ್ರೆಸ್‌ನಿಂದ ದೇಶ ಲೂಟಿ: ರಮೇಶ್ ಕುಮಾರ್ ಹೇಳಿಕೆಯೇ ಸಾಕ್ಷಿ
ಬೆಂಗಳೂರು ಜುಲೈ 21: ಕಾಂಗ್ರೆಸ್ ಪಕ್ಷ ದೇಶವನ್ನು ಹೇಗೆ ಕೊಳ್ಳೆ ಹೊಡೆದಿದೆ ಎಂಬ ನಿಜವನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರೇ ಹೇಳಿದ್ದಾರೆ ಎಂದು ರಾಜ್ಯ ಬಿಜೆಪಿ ಲೇವಡಿ ಮಾಡಿದೆ.
ಬೆಂಗಳೂರಿನಲ್ಲಿ ಗುರುವಾರ ಕೆಪಿಸಿಸಿ ವತಿಯಿಂದ ನಡೆದ ಪ್ರತಿಭಟನೆ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಕಾಂಗ್ರೆಸ್ ನಿಂದ ಸಾಕಷ್ಟು ಮಾಡಿಕೊಂಡಿದ್ದೇವೆ ಎಂದು ಹೇಳಿದ್ದರು. ಆ ಕುರಿತು ವಿಡಿಯೋವನ್ನು ಜವಳಿ ಖಾತೆ ಸಚಿವ ಶಂಕರ್ ಪಾಟೀಲ್ ಮುನೇನ್ ಕೊಪ್ಪ ಅವರು ಮಾಡಿರುವ ಟ್ವಿಟ್ ಅನ್ನು ರಾಜ್ಯ ಬಿಜೆಪಿ ಮರ ಟ್ವಿಟ್ ಮಾಡಿ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದೆ. ದೇಶದಲ್ಲಿ ಕಾಂಗ್ರೆಸ್ ಲೂಟಿ ಹೊಡಿದಿದ್ದಕ್ಕೆ ರಮೇಶ್ ಕುಮಾರ್ ಅವರ ಈ ಹೇಳಿಕೆಯೆ ಸಾಕ್ಷಿ ಎಂದು ಬಿಜೆಪಿ ತಿಳಿಸಿದೆ.
ಪ್ರಧಾನಿಯಾಗಿದ್ದ ಜವಾಹರ್ ಲಾಲ್ ನೆಹರು ಅವರ ಕಾಲದಿಂದಲೂ ಭಾರತೀಯ ಕಾಂಗ್ರೆಸ್ ಪಕ್ಷ (ಐಎನ್‌ಸಿ) ದೇಶವನ್ನು ಅಪಾರ ಪ್ರಮಾಣದಲ್ಲಿ ಕೊಳ್ಳೆ ಹೊಡೆದಿದೆ. ವರ್ಷಗಳಿಂದಲೂ ದೇಶದ ಜನರ ಸಂಪತ್ತನ್ನು ಹೇಗೆ ದೋಚಲಾಗಿದೆ ಎಂದು ರಮೇಶ್ ಕುಮಾರ್ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ. ಕಾಂಗ್ರೆಸ್ ಈ ಹಗಲು ದರೋಡೆ ಕಾರಣದಿಂದಲೇ ಕಾಂಗ್ರೆಸ್ ಮುಕ್ತ ಭಾರತ ಮಾಡುವ ಪರಿಸ್ಥಿತಿ ಬಂದೊಗಿದೆ. ಅದೇ ಆಗಿತ್ತಿದೆ ಎಂದು ಬಿಜೆಪಿ ಹೇಳಿದೆ.

ಕಾಂಗ್ರೆಸ್ ಪಕ್ಷ ದೇಶದಲ್ಲಿ ಹೊಡೆದ ಲೂಟಿಯ ಲೆಕ್ಕ ಕೊಟ್ಟ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಎಂದು ಶಿರ್ಷಿಕೆ ಮತ್ತು ರಮೇಶ್ ಕುಮಾರ್ ಫೋಟೊ ಸಹಿತಿ ಟ್ವಿಟ್ ಮಾಡಲಾಗಿದೆ.
ಹೌದು. @KRRameshKumar1 ಅವರು ನಿಜವನ್ನೇ ಹೇಳಿದ್ದಾರೆ. ದೇಶವನ್ನು ನೆಹರೂ ಕಾಲದಿಂದ ಸತತವಾಗಿ @INCKarnataka ಪಕ್ಷ ಹೇಗೆ ಕೊಳ್ಳೆ ಹೊಡೆದಿದೆ, ಜನರ ಸಂಪತ್ತನ್ನು ಹೇಗೆ ದೋಚಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ಹಗಲು ದರೋಡೆಯ ಕಾರಣದಿಂದಲೇ ಇಂದು ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಗುವ ಪರಿಸ್ಥಿತಿ ಬಂದಿದೆ. pic.twitter.com/ltpkEQmmgR
— Shankar Patil Munenakoppa (@munenakoppa_mla) July 21, 2022
ನ್ಯಾಷನಲ್ ಹೆರಾಲ್ಡ್ ಹಗರಣ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಇಡಿ ಅಧಿಕಾರಿಗಳ ವಿಚಾರಣೆ ಎದುರಿಸಿದ್ದರು. ಈ ವೇಳೆ ಸೋನಿಯಾ ಗಾಂಧಿ ಬೆಂಬಲಿಸಿ ಹಮ್ಮಿಕೊಂಡಿದ್ದ ಕೆಪಿಸಿಸಿ ನೇತೃತ್ವದ ಪ್ರತಿಭಟನೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಮಾತನಾಡುವ ಭರದಲ್ಲಿ ಯಡವಟ್ಟು ಹೇಳಿಕೆ ನೀಡಿದರು. ಕಾಂಗ್ರೆಸ್ ನಾಯಕರಾದ ನಾವು ಇಷ್ಟು ವರ್ಷ ಕಾಂಗ್ರೆಸ್ ಹೆಸರಿನಲ್ಲಿ ಸಾಕಷ್ಟು ಹಣ, ಆಸ್ತಿ ಮಾಡಿಕೊಂಡಿದ್ದೇವೆ. ಇದೀಗ ಗಾಂಧಿ ಕುಟುಂಬದ ಋಣ ತೀರಿಸುವ ಕಾಲ ಬಂದಿದೆ ಎಂದು ಹೇಳಿದ್ದರು. ಇದನ್ನು ಈಗ ಬಿಜೆಪಿಯವರು ಅಸ್ತ್ರವಾಗಿ ಬಳಸಿಕೊಂಡು ಕಾಂಗ್ರೆಸ್ ಕಾಲೆಳೆಯುತ್ತಿದ್ದಾರೆ.












Click it and Unblock the Notifications