ಶಕ್ತಿಸೌಧದ ಮುಂದೆ ಸಿ.ಟಿ. ರವಿ ಹುಟ್ಟಹಬ್ಬದ ಬ್ಯಾನರ್ ಹರಿದ ಕಾಂಗ್ರೆಸ್ ಕಾರ್ಯಕರ್ತೆ ಬಿಂದುಗೌಡ
ಬೆಂಗಳೂರು, ಜುಲೈ 18: ವಿಧಾನಸೌಧದ ಮುಂದೆ ಶಾಸಕ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಜನ್ಮದಿನಕ್ಕೆ ಶುಭವನ್ನು ಕೋರಿ ಹಾಕಲಾಗಿದ್ದ ಬ್ಯಾನರ್ ಕಾಂಗ್ರೆಸ್ ಕಾರ್ಯಕರ್ತೆ ಹರಿದು ಆಕ್ರೋಶವನ್ನು ಹೊರಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಗುರುತಿಸಿಕೊಂಡಿರುವ ಬಿಂದು ಗೌಡ ಸಿ.ಟಿ. ರವಿ ಅವರ ಪೋಸ್ಟರ್ ಅನ್ನು ಕಿತ್ತೆಸೆದಿದ್ದಾರೆ.
ಸಿಟಿ ರವಿಯವರ ಹುಟ್ಟುಹಬ್ಬಕ್ಕೆ ವಿಧಾನಸೌಧದ ಸುತ್ತಮುತ್ತ ಅನಧಿಕೃತವಾಗಿ ಬ್ಯಾನರ್ ಮತ್ತು ಫ್ಲೆಕ್ಸ್‌ಗಳನ್ನು ಹಾಕಲಾಗಿತ್ತು. ಶಕ್ತಿ ಸೌಧದ ಮುಂದೆ ಈ ರೀತಿ ಬ್ಯಾನರ್ ಮತ್ತು ಫ್ಲೆಕ್ಸ್ ಹಾಕಲು ಬಿಬಿಎಂಪಿಯು ಅನುಮತಿಯನ್ನು ನೀಡುವುದಿಲ್ಲ. ಆದರೂ, ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಇದರಿಂದ ಆಕ್ರೋಶಗೊಂಡು ಬಿಂದುಗೌಡ ಫ್ಲೆಕ್ಸ್‌ಗಳನ್ನು ಹರಿದು ಹಾಕಿದ್ದಾರೆ.
ಪೂರ್ವ ನಿಯೋಜಿನೆಯಂತೆ ಭಾಸವಾಗುತ್ತಿರುವ ಈ ವಿಡಿಯೋದಲ್ಲಿ ಬಿಂದು ಗೌಡ ಕೃತ್ಯವನ್ನು ಮತ್ತೊಬ್ಬರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಬ್ಯಾನರ್ ಹಾಕುವುದನ್ನು ಬ್ಯಾನ್ ಮಾಡಿದ್ದರೂ ಸಹ ವಿಧಾನಸೌಧದ ಮುಂದೆ ಕಟ್ಟೋದಿಕ್ಕೆ ಧಮ್ ಬೇಕಲೇ. ಸಿಟಿ ರವಿ ಶೇಮ್ ಆನ್ ಯೂ ಎಂದು ಬಿಂದುಗೌಡ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ.ರವಿಯವನ್ನು ಮೆಚ್ಚಿಸುವ ಸಲುವಾಗಿ ವಿಧಾನಸೌಧದ ಸುತ್ತಮುತ್ತಲು ಹುಟ್ಟುಹಬ್ಬದ ಶುಭವನ್ನು ಕೋರಿ ಬ್ಯಾನರ್ ಹಾಕಿದ್ದರು. ಆದರೆ ಬ್ಯಾನರ್ ಹಾಕಲು ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ ಎನ್ನಲಾಗುತ್ತಿದೆ. ಇದರಿಂದಾಗಿ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸವನ್ನು ಮಾಡುವ ಬಿಂದು ಗೌಡ ಫ್ಲೆಕ್ಸ್ ಹರಿದು ಹಾಕಿರುವುದಕ್ಕೆ ಶಬ್ಬಾಷ್ ಎನ್ನಲಾಗುತ್ತಿದೆ. ವಿಧಾನಸೌಧದ ಮುಂದೆ ಫ್ಲೆಕ್ಸ್‌ಗೆ ಅನುಮತಿಯನ್ನು ನೀಡಿದ್ದೇ ಆದರೆ ದಿನಕ್ಕೆ ಇಂಥ ನೂರಾರು ಫ್ಲೆಕ್ಸ್‌ಗಳು ತಲೆಎತ್ತಲಿವೆ.












Click it and Unblock the Notifications