'ರಾಜ್ಯ ಸರಕಾರಕ್ಕೆ ಯೋಜನೆ ಜಾರಿಗಿಂತ ಕಿಕ್ ಬ್ಯಾಕ್ ನಲ್ಲೇ ಆಸಕ್ತಿ'
ಮಾಜಿ ಸಚಿವ ಕುಮಾರ ಬಂಗಾರಪ್ಪ ಶುಕ್ರವಾರ ಕಾಂಗ್ರೆಸ್ ತೊರೆದಿದ್ದಾರೆ. ಇನ್ನೇನು ಬಿಜೆಪಿಗೆ ಸೇರ್ಪಡೆಯಷ್ಟೇ ಬಾಕಿ. ಈ ಸನ್ನಿವೇಶದಲ್ಲಿ ಒನ್ಇಂಡಿಯಾ ಕನ್ನಡ ಜತೆಗೆ ಕಾಂಗ್ರೆಸ್, ಸ್ಟೀಲ್ ಬ್ರಿಡ್ಜ್, ಕಾಗೋಡು ತಿಮ್ಮಪ್ಪ ಬಗ್ಗೆ ಮಾತನಾಡಿದ್ದಾರೆ
ಬೆಂಗಳೂರು, ಮಾರ್ಚ್ 4: ಕಾಂಗ್ರೆಸ್ ಪಕ್ಷ ತೊರೆದಿರುವುದಾಗಿ ಶುಕ್ರವಾರ (ಮಾರ್ಚ್ 3) ಘೋಷಿಸಿದ ಮಾಜಿ ಸಚಿವ ಕುಮಾರ ಬಂಗಾರಪ್ಪ, ಇನ್ನೇನು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗುವುದಷ್ಟೇ ಬಾಕಿ ಇದೆ. ಪಕ್ಷ ತೊರೆದ ನಂತರ ಒನ್ ಇಂಡಿಯಾ ಕನ್ನಡದ ಜತೆ ಅವರು ಮಾತನಾಡಿದ್ದಾರೆ ಅದರ ಪ್ರಮುಖಾಂಶಗಳನ್ನು ಇಲ್ಲಿ ಕೊಡಲಾಗಿದೆ.
"ರಾಜ್ಯ ಸರಕಾರ ಬೇಡದ ವಿಚಾರಗಳಿಗೆ ವಿಪರೀತ ಪ್ರಾತಿನಿಧ್ಯ ಕೊಡುತ್ತಿದೆ. ರಾಜ್ಯದಲ್ಲಿ ಬರಗಾಲ ಇದೆ. ಇಂಥ ಸನ್ನಿವೇಶದಲ್ಲಿ ಯಾವುದೋ ವಿಚಾರಕ್ಕೆ ತಲೆ ಕೆಡಿಸಿಕೊಂಡಿದೆ. ಸ್ಟೀಲ್ ಬ್ರಿಡ್ಜ್ ವಿಚಾರದಲ್ಲಿ ಯಾವಾಗ ಭ್ರಷ್ಟಾಚಾರ ನಡೆದಿರುವುದು ಜನರಿಗೆ ಗೊತ್ತಾಯಿತೋ ಆಗ ಯೋಜನೆ ಕೈಬಿಟ್ಟರು. ಸರಕಾರಕ್ಕೆ ಸೇತುವೆ ಯೋಜನೆ ಜಾರಿ ಅಗಬೇಕು ಎಂಬುದಕ್ಕಿಂತ ಕಿಕ್ ಬ್ಯಾಕ್ ಬಗ್ಗೆಯೇ ಹೆಚ್ಚಿನ ಆಸಕ್ತಿ ಇತ್ತು"[ಕಾಂಗ್ರೆಸ್ ತೊರೆದ ಮಾಜಿ ಸಚಿವ ಕುಮಾರ ಬಂಗಾರಪ್ಪ]

"ಅಭಯಚಂದ್ರ ಜೈನ್ ಅಂಥವರಿಗೆ ಮೀನುಗಾರಿಕೆ ಇಲಾಖೆ ಜವಾಬ್ದಾರಿ ಕೊಟ್ಟಿತು ಸರಕಾರ. ಅವರ ಧಾರ್ಮಿಕ ನಂಬಿಕೆಗಳಿಗೆ ಪೆಟ್ಟು ಕೊಟ್ಟಂತಾಯಿತು. ಅದನ್ನು ಹೇಳಿಕೊಂಡರೆ ಸಚಿವ ಸ್ಥಾನದಿಂದಲೇ ತೆಗೆದುಹಾಕಿಬಿಟ್ಟರು. ಈ ಸರಕಾರದಲ್ಲಿ ಬಾಯಿ ಮಾಡಿದವರಿಗಷ್ಟೇ ಸಚಿವ ಸ್ಥಾನ ಅಂತ ಕಾಗೋಡು ತಿಮ್ಮಪ್ಪ, ಕೆಆರ್ ರಮೇಶ್ ಕುಮಾರ್ ಅವರ ವಿಚಾರದಲ್ಲಿ ಸಾಬೀತಾಯಿತು".

"ಕಾಗೋಡು ತಿಮ್ಮಪ್ಪನವರು ಕಂದಾಯ ಖಾತೆಯನ್ನು ಸರಿಯಾಗಿ ನಿರ್ವಹಿಸುವುದಕ್ಕೆ ಆಗುತ್ತಿಲ್ಲ. ಬರೀ ಸುಳ್ಳು ಹೇಳಿಕೊಂಡು ತಿರುಗ್ತಾರೆ. ಇಡೀ ರಾಜ್ಯದಲ್ಲಿ ಬಗರ್ ಹುಕುಂ ಸಮಿತಿ ಇದೆ. ಆದರೆ ಸೊರಬದಲ್ಲಿರುವ ಸಮಿತಿ ಮಾತ್ರ ಬಹಳ ಚಟುವಟಿಕೆಯಿಂದ ಇದೆ. ಅಲ್ಲಿ ತಿಮ್ಮಪ್ಪನವರ ಚೇಲಾ ಇದ್ದು, ಮೂರೂವರೆ ವರ್ಷದಿಂದ ನಿಯಮ ಮೀರಿ ಅರಣ್ಯ ಇಲಾಖೆಯಲ್ಲಿ ಒಂದೇ ಕಡೆ ಕೆಲಸ ಮಾಡ್ತಿದ್ದಾರೆ. ಬಗರ್ ಹುಕುಂ ಅನ್ನೋದು ಇವರಿಗೆ ಹಣ ಮಾಡುವ ದಂಧೆ ಆಗಿದೆ. ಹತ್ತು ಎಕರೆ-ಇಪ್ಪತ್ತು ಎಕರೆ ಜಾಗಗಳಿಗೆ ಮೂರು-ಐದು ಲಕ್ಷ ಹಣ ತೆಗೆದುಕೊಂಡು ಸಾಗುವಳಿ ಪತ್ರ ಕೊಡುತ್ತಿದ್ದಾರೆ. ಆ ನಂತರ ಆ ಜಾಗವನ್ನು ಮಾರಿಕೊಳ್ತಾರೆ. ಹೀಗೇ ಮುಂದುವರಿದರೆ ನಮ್ಮ ಮುಂದಿನ ಪೀಳಿಗೆಗೆ ಅರಣ್ಯವನ್ನು ಕೂಡ ಇವರು ಉಳಿಸಲ್ಲ".[ಕುಮಾರ್ ಅಂಬುಲೆನ್ಸ್, ವೈದ್ಯರ ಜೊತೆ ಬಿಜೆಪಿಗೆ ಸೇರಲಿ, ಮಧು ಬಂಗಾರಪ್ಪ]

"ನನ್ನ ತಂದೆ ಹೆಸರು ಬಳಸದೆ ರಾಜಕಾರಣ ಮಾಡಲಿ ನೋಡೋಣ ಅಂತಾರೆ ಕಾಗೋಡು ತಿಮ್ಮಪ್ಪ. ಅವರು ಕಾಗೋಡು ಅಂತ ಊರಿನ ಹೆಸರನ್ನು ಬಿಟ್ಟು ಅವರ ತಂದೆ ಹೆಸರಿನಲ್ಲಿ ರಾಜಕಾರಣ ಮಾಡಲಿ ನೋಡೋಣ. ನನ್ನ ತಂದೆ ಬಂಗಾರಪ್ಪ ಅವರ ಹೆಸರಲ್ಲಿ ರಾಜಕಾರಣ ಮಾಡೋದು ನನ್ನ ಹಕ್ಕು. ಅದನ್ನು ಕೇಳೋದಿಕ್ಕೆ ಇವರು ಯಾರು? ಜನ ನನ್ನನ್ನು ನೋಡಿದ ತಕ್ಷಣ ಬಂಗಾರಪ್ಪ, ಬಂಗಾರಪ್ಪ ಅಂತ ಕೂಗ್ತಾರೆ. ಅದು ನನ್ನ ಹಾಗೂ ನನ್ನ ತಂದೆ ಬಗ್ಗೆ ಜನರು ಇಟ್ಟಿರುವ ಪ್ರೀತಿ"
"ಬಿಜೆಪಿಯಲ್ಲಿ ನನಗೆ ಇಂಥದ್ದೇ ಸ್ಥಾನ-ಮಾನ ಎಂಬ ಭರವಸೆ ಏನೂ ನೀಡಿಲ್ಲ. ಆದರೆ ನನ್ನನ್ನು ಹೇಗೆ ಬಳಸಿಕೊಳ್ಳಬೇಕು, ಯಾವ ಸ್ಥಾನ ನೀಡಬೇಕು ಎಂಬುದನ್ನು ಪಕ್ಷವೇ ನಿರ್ಧರಿಸುತ್ತದೆ. ಆದರೆ ನಾನು ಯಾವುದೇ ಷರತ್ತು ಅಥವಾ ಬೇಡಿಕೆ ಇಟ್ಟಿಲ್ಲ."[ಕುಮಾರ ಬಂಗಾರಪ್ಪ ಜತೆ ಒನ್ಇಂಡಿಯಾ ಕನ್ನಡ ವಿಶೇಷ ಸಂದರ್ಶನ]

"ನೋಟು ನಿಷೇಧದ ಸುಮ್ಮನೆ ಬಾಯಿಗೆ ಬಂದಂತೆ ಹೇಳಿಕೊಂಡು ತಿರುಗುವುದು ಕೂಡ ಸರಿಯಲ್ಲಿ ಮಾರ್ಚ್ ಮುಗಿದ ಮೇಲೆ ಅದರ ಪರಿಣಾಮ ಏನು ಅಂತ ಗೊತ್ತಾಗುತ್ತೆ. ಇನ್ನು ರಾಜಕೀಯ ಪಕ್ಷಗಳ ದೇಣಿಗೆ ವಿಚಾರದಲ್ಲಿ ಕೈಗೊಂಡ ನಿರ್ಧಾರ ಕೂಡ ಅತ್ಯುತ್ತಮವಾಗಿದೆ. ಇನ್ನೇನು ಜಿಎಸ್ ಟಿ ಜಾರಿಗೆ ಬರಲಿದೆ. ಇವೆಲ್ಲ ಸಕಾರಾತ್ಮಕ ಹೆಜ್ಜೆಗಳು. ಇನ್ನು ಚುನಾವಣೆ ವಿಧಾನದಲ್ಲಿ ಸುಧಾರಣೆ ಆಗಬೇಕಿದೆ. ಚುನಾವಣೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ. ರಾಜ್ಯ ಸರಕಾರಕ್ಕಂತೂ ದೂರದೃಷ್ಟಿಯ ಕೊರತೆ ಇದೆ".
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ












Click it and Unblock the Notifications