Get Updates
Get notified of breaking news, exclusive insights, and must-see stories!

ಪ್ರಭಾವಿ 17 ಸಚಿವರ ಸ್ವಕ್ಷೇತ್ರದಲ್ಲೇ ಕಾಂಗ್ರೆಸ್‌ಗೆ ಭಾರೀ ಹಿನ್ನಡೆ: ಪಕ್ಷದಿಂದ ಕ್ರಮ?

ಬೆಂಗಳೂರು, ಜೂನ್ 09: ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಸದರಿ ಲೋಕಸಭಾ ಚುನಾವಣೆ 2024ರಲ್ಲಿ ಭಾರೀ ಹಿನ್ನಡೆ ಆಗಿದೆ. ವಿಶೇಷವೆಂದರೆ ಕಾಂಗ್ರೆಸ್‌ನ ಪ್ರಭಾವಿ ಶಾಸಕರು, ಸಚಿವರು ಎನ್ನಿಸಿಕೊಂಡವರ ಸ್ವಕ್ಷೇತ್ರದಲ್ಲಿ ಪಕ್ಷ ಮಂಡಿಯೂರಿದೆ. ವಿಪಕ್ಷಕ್ಕೆ ಹೆಚ್ಚು ಬಹುಮತಗಳು ಲಭಿಸಿವೆ. ತಮ್ಮ ಕ್ಷೇತ್ರದಲ್ಲಿ 17 ಪ್ರಭಾವಿ ನಾಯಕರು 'ಕೈ' ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ವಿಫಲವಾಗಿದ್ದಾರೆ. ಇವರೆಲ್ಲ ರಾಹುಲ್ ಗಾಂಧಿಯವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎನ್ನಲಾಗಿದೆ.

ತಮ್ಮ ಮಕ್ಕಳು, ಕುಟುಂಬಸ್ಥರಿಗೆ ಲೋಕಸಭಾ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್ ರಾಜ್ಯ ಪ್ರಭಾವಿ ಸಚಿವರು ಅವರನ್ನು ಗೆಲ್ಲಿಸಿಕೊಂಡು ಬರುವಲ್ಲಿ ಎಡವಿದ್ದಾರೆ. ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಲೀಡ್ ಸಿಗದೇ ವಿಪಕ್ಷ ಬಿಜೆಪಿಗೆ ಬಹುಮತ ಬರಲು ಕಾರಣವಾಗಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿದೆ.

Congress Faced Major Setback at 17 ministers constituency in Karnataka Lok Sabha Elections 2024

ದಾವಣಗೆರೆ ಉತ್ತರದ ಶಾಸಕ, ತೋಟಗಾರಿಕೆ ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ್ ಅವರ ಕ್ಷೇತ್ರದಲ್ಲಿ ತಮ್ಮ ಪತ್ನಿಯನ್ನು ಗೆಲ್ಲಿಸಿಕೊಂಡು ಬರಲಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಲೀಡ್ ಕೊಡಿಸಲು ಆಗದೇ ಸೋಲೊಪ್ಪಿಕೊಂಡರು. ಇಲ್ಲಿ ಬಿಜೆಪಿಗೆ ಸುಮಾರು 25000 ಲೀಡ್ ದೊರೆತಿದೆ.

ಸಚಿವರ ಸ್ವಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮಾಡಿದ್ದ ಪ್ರಭಾವಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಳ್ ಹೆಬ್ಬಾಳ್ಕರ್ ಅವರು ಬಿಜೆಪಿ ಜಗದೀಶ್ ಶೆಟ್ಟರ್ ಅವರ ಮುಂದೆ ಸೋಲು ಕಂಡಿದ್ದಾರೆ. ಇಲ್ಲಿ ಬಿಜೆಪಿಗೆ 50,000 ಮತಗಳ ಲೀಡ್ ದೊರೆತಿದೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಗಾಗ ಗುಡುಗುತ್ತಲೇ ಇದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಸ್ವಕ್ಷೇತ್ರ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲೇ ಬಿಜೆಪಿಗೆ ಅಭ್ಯರ್ಥಿ ಪ್ರಹ್ಲಾದ್ ಜೋಶಿಗೆ 32,000 ಲೀಡ್ ಸಿಕ್ಕಿದೆ.

Congress Faced Major Setback at 17 ministers constituency in Karnataka Lok Sabha Elections 2024

ಅದೇ ರೀತಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಸೌಮ್ಯಾ ರೆಡ್ಡಿ ಅವರಿಗೆ ಲೀಡ್ ಸಿಗಲಿಲ್ಲ. ಅವರ ತಂದೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಭಾವಿ ನಾಯಕರಾಗಿದ್ದಾರೆ. ಆದರೂ ಅವರಿಂದ ಪಕ್ಷವನ್ನು ಗೆಲ್ಲಿಸಲು ಆಗಿಲ್ಲ.

ಮಧು ಬಂಗಾರಪ್ಪ ಅವರು ಕುಮಾರ್ ಬಂಗಾರಪ್ಪ ಅವರ ಪುತ್ರ, ಅವರ ಸಹೋದರಿ ಗೀತಾ ಶಿವರಾಜ್ ಕುಮಾರ್ ಅವಗೆ ಲೀಡ್ ಕೊಡಿಸುವಲ್ಲಿ ವಿಫಲವಾದರು. ಇಲ್ಲಿ ಕಾಂಗ್ರೆಸ್‌ಗಿಂತ ಹೆಚ್ಚು ಬಿಜೆಪಿಗೆ ಮತಗಳು ಬಂದಿವೆ.

ವಿಜಯಪುರ, ತುಮಕೂರು ಜಿಲ್ಲೆಯಲ್ಲಿ ಹಿನ್ನಡೆ

ಇನ್ನೂ ವಿಜಯಪುರ ಶಾಸಕ ಹಾಗೂ ರಾಜ್ಯ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರ ಕ್ಷೇತ್ರ ಬಬಲೇಶ್ವರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಅಲಗೂರು ಅವರಿಗೆ ಅಲ್ಪಮಟ್ಟಿನ ಹಿನ್ನಡೆ ಆಗಿದೆ.

ರಾಜ್ಯ ಹಾಲಿ ರಾಜ್ಯ ಗೃಹ ಮಂತ್ರಿಗಳಾದ ಜಿ.ಪರಮೇಶ್ವರ ಅವರು ತುಮಕೂರು ಜಿಲ್ಲೆ ಸಚಿವರಾಗಿದ್ದಾರೆ. ಇತ್ತ ಕಾಂಗ್ರೆಸ್‌ನ ಕೆಎನ್ ರಾಜಣ್ಣ ಇವರಿಬ್ಬರ ಕ್ಷೇತ್ರದಲ್ಲೂ ಬಿಜೆಪಿಗೆ ಅಧಿಕ ಮತಗಳನ್ನು ಪಡೆಯುವ ಮೂಲಕ ಲೀಡ್ ಪಡೆದು ಗೆದ್ದಿದೆ. ಈ ಮೂಲಕ ಸ್ಥಳೀಯ ನಾಯಕರಿಗೆ ಠಕ್ಕರ್ ಕೊಟ್ಟಿದೆ.

ಈ ಹಿಂದೆ ಕಾಂಗ್ರೆಸ್ ಪಕ್ಷವು ಕೈ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸಚಿವರಿಗೆ ಎಚ್ಚರಿಕೆ ನೀಡಿತ್ತು. ಇದರ ಹೊರತಾಗಿಯೂ ಚುನಾವಣೆಯಲ್ಲಿ ಇಂತಹ ಬೆಳವಣಿಗೆ ನಡೆದಿದೆ. ಯಾರ, ಯಾವ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಆಗಿದೆ ಎಂಬ ಪಟ್ಟಿ ಇಲ್ಲಿದೆ.

17 ನಾಯಕರು ಮತ್ತವರ ಕ್ಷೇತ್ರಗಳ ಪಟ್ಟಿ

ಸಚಿವರಾದ ಎಸ್‌.ಎಸ್‌ ಮಲ್ಲಿಕಾರ್ಜುನ್- ದಾವಣಗೆರೆ ಕ್ಷೇತ್ರ, ಕೃಷ್ಣ ಬೈರೇಗೌಡ- ಬ್ಯಾಟರಾಯನಪುರ, ರಾಮಲಿಂಗಾ ರೆಡ್ಡಿ- ಬಿಟಿಎಂ ಲೇಔಟ್, ಲಕ್ಷ್ಮೀ ಹೆಬ್ಬಾಳ್ಕರ್- ಬೆಳಗಾವಿ ಗ್ರಾಮೀನ, ದಿನೇಶ್ ಗುಂಡೂರಾವ್- ಗಾಂಧಿನಗರ, ಮಧು ಬಂಗಾರಪ್ಪ- ಶಿವಮೊಗ್ಗ,

ಚೆಲುವರಾಯ ಸ್ವಾಮಿ, ಸಂತೋಷ್ ಲಾಡ್- ಕಲಘಟಗಿ, ಎಂಬಿ ಪಾಟೀಲ್-ಬಬಲೇಶ್ವರ, ಡಾ.ಜಿ.ಪರಮೇಶ್ವರ-ಕೊರಟಗೇರೆ, ಮಾಂಕಾಳ ವೈಧ್ಯ- ಭಟ್ಕಳ್, ಡಿ.ಸುಧಾಕರ್- ಹಿಡಿಯೂರು, ಎಂಬಿ ಪಾಟೀಲ್- ಬಬಲೇಶ್ವರ, ಎಂ.ಸಿ ಸುಧಾಕರ್- ಚಿಂತಾಮಣಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಿನ್ನಡೆ ಆಗಿದೆ.

ಇದರೊಂದಿಗೆ ಕೆ.ಎಚ್.ಮುನಿಯಪ್ಪ, ಎಚ್‌.ಕೆ ಪಾಟೀಲ್, ಶಿವಾನಂದ್ ಪಾಟೀಲ್, ಕೆಎನ್ ರಾಜಣ್ಣ ಅವರ ಕ್ಷೇತ್ರದಲ್ಲೂ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+