ಜಾರಕಿಹೊಳಿ ಮನೆಗೆ ಅತೃಪ್ತ ಶಾಸಕರ ದೌಡು, ರಾಜೀನಾಮೆ ಮುನ್ಸೂಚನೆಯೇ?

Recommended Video

      ರಮೇಶ್ ಜಾರಕಿಹೊಳಿ ಮನೆಗೆ ದೌಡಾಯಿಸಿದ ಮೂವರು ಅತೃಪ್ತ ಶಾಸಕರು | Oneindia Kannada

      ಬೆಂಗಳೂರು, ಮಾರ್ಚ್ 5: ಕಾಂಗ್ರೆಸ್‌ನ ಅತೃಪ್ತ ಶಾಸಕರು ಎನ್ನಲಾದ ಬಳ್ಳಾರಿ ಶಾಸಕ ನಾಗೇಂದ್ರ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಇದೀಗ ರಮೇಶ್ ಜಾರಕಿಹೊಳಿ ಮನೆಗೆ ತೆರಳಿದ್ದು ಕಾಂಗ್ರೆಸ್‌ಗೆ ತಲೆ ನೋವು ಆರಂಭವಾಗಿದೆ.

      ಕಳೆದ ಒಂದೆರೆಡು ತಿಂಗಳಿನಿಂದ ಕಾಂಗ್ರೆಸ್‌ನ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಇದು ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿದೆ ಇನ್ನೊಂದೆಡೆ ಜೆಡಿಎಸ್ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನಿಶ್ಚಿಂತೆಯಿಂದಿದೆ.

      ಇದೀಗ ಕಾಂಗ್ರೆಸ್‌ನ ಅತೃಪ್ತ ಶಾಸಕರುಗಳ ಪೈಕಿ ಒಬ್ಬರಾದ ಡಾ. ಉಮೇಶ್ ಜಾಧವ್ ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಮಾರ್ಚ್ 6ರಂದು ಬಿಜೆಪಿ ಸೇರಲಿದ್ದಾರೆ ಎನ್ನುವ ವಿಷಯ ಉನ್ನತ ಮೂಲಗಳಿಂದ ಕೇಳಿಬಂದಿದೆ.

      Congress dissident MLAs met Ramesh Jarkiholi

      ಈ ಹಿನ್ನೆಲೆಯಲ್ಲೇ ಕಾಂಗ್ರೆಸ್‌ನ ಉಳಿದ ಶಾಸಕರೂ ಕೂಡ ಕಾಂಗ್ರೆಸ್ ತೊರೆಯಲು ಚಿಂತನೆ ನಡೆಸಿದಂತಿದೆ. ಹೀಗಾಗಿ ಮೂರು ಶಾಸಕರು ಸಭೆ ನಡೆಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

      ಕಾಂಗ್ರೆಸ್‌ ತನ್ನ 5-6 ಶಾಸಕರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಕಾಂಗ್ರೆಸ್ ತಲೆ ಕೆಡಿಸಿಕೊಂಡು ಕುಳಿತಿದ್ದರೆ ಜೆಡಿಎಸ್ ತನಗೇನು ಸಂಬಂಧವೇ ಇಲ್ಲ ಎನ್ನುವ ಹಾಗೆ ನಿಮ್ಮ ಶಾಸಕರನ್ನು ನೀವೇ ನೋಡಿಕೊಳ್ಳಿ ಎನ್ನುವಂತೆ ಸುಮ್ಮನಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+