ಬಿಜೆಪಿ ಭರವಸೆಗಳೆಲ್ಲವೂ ಸುಳ್ಳಿನ ಕಂತೆ: ಕಾಂಗ್ರೆಸ್

ಬೆಂಗಳೂರು: ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದಂತೆ ವಿರೋಧ ಪಕ್ಷಗಳಿಗೆ ಅಸ್ತ್ರ ಸಿಕ್ಕಿದೆ. ಅದ್ರಲ್ಲೂ ಇಷ್ಟುದಿನ ವಿರೋಧ ಪಕ್ಷಗಳ ಉಚಿತ ಉಡುಗೊರೆ ಟೀಕಿಸುತ್ತಿದ್ದ ಬಿಜೆಪಿ, ಅದೇ ಉಚಿತ ಉಡುಗೊರೆ ಮೂಲಕ ಮತ ಪಡೆಯಲು ಹೊರಟಿದೆ ಎಂಬ ಆರೋಪವನ್ನ ವಿಪಕ್ಷಗಳು ಮಾಡುತ್ತಿವೆ. ಕಾಂಗ್ರೆಸ್ ಈ ಬಗ್ಗೆ ಟ್ವೀಟ್ ಮಾಡಿ, ಬಿಜೆಪಿ ಭರವಸೆಗಳೆಲ್ಲ ಸುಳ್ಳಿನ ಕಂತೆ ಎಂದಿದೆ.

'ರೈತರ ಸಾಲ ಮನ್ನಾ ಆಗಿಲ್ಲ'

ಬಿಜೆಪಿ ಪ್ರಣಾಳಿಕೆ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, '"ರೈತರ ಸಾಲ ಮನ್ನಾ ಮಾಡುತ್ತೇವೆ" ಇದು ಬಿಜೆಪಿಯ 2018ರ ಪ್ರಣಾಳಿಕೆಯ ಭರವಸೆಯಾಗಿತ್ತು. ಇಬ್ಬರು ಮುಖ್ಯಮಂತ್ರಿಗಳಾದರು, ಡಬಲ್ ಇಂಜಿನ್ ಸರ್ಕಾರವಿತ್ತು, 4 ವರ್ಷದ ಆಡಳಿತವಿತ್ತು. ರೈತರ ಸಾಲದಲ್ಲಿ ಒಂದೇ ಒಂದು ರೂಪಾಯಿಯನ್ನೂ ಮನ್ನಾ ಮಾಡಲಿಲ್ಲ ಏಕೆ @BJP4Karnataka? ಬಿಜೆಪಿಯ ಭರವಸೆಗಳೆಲ್ಲವೂ ಸುಳ್ಳಿನ ಕಂತೆ ಎನ್ನಲು ಬೇರೆ ಉದಾಹರಣೆ ಬೇಕೇ?' ಎಂದು ಟ್ವೀಟ್ಟರ್ ಪೋಸ್ಟ್‌ನಲ್ಲಿ ಪ್ರಶ್ನೆ ಕೇಳಿದೆ.

'ಗುಜರಿ ವ್ಯಾಪಾರಿಗಳೂ ಖರೀದಿಸಲ್ಲ'

ಹಾಗೇ ಮತ್ತೊಂದು ಟ್ವೀಟ್‌ನಲ್ಲಿ ಕಾಂಗ್ರೆಸ್, '2018ರ ಪ್ರಣಾಳಿಕೆಯಲ್ಲಿ "ಸ್ತ್ರೀ ಉನ್ನತಿ ನಿಧಿ" ಎಂಬ ಘೋಷಣೆಯ ನೆನಪಿದೆಯೇ @BJP4Karnataka? ನೆನಪಿಲ್ಲ ಎಂದರೆ ಹಿಂದಿನ ಪ್ರಣಾಳಿಕೆಯನ್ನು ತೆರೆದು ನೋಡಿ. ಬಿಜೆಪಿ ಮೊದಲು ತಮ್ಮ ಹಿಂದಿನ ಪ್ರಣಾಳಿಕೆಯ ರಿಪೋರ್ಟ್ ಕಾರ್ಡ್ ನೀಡಿ ಹೊಸ ಭರವಸೆಗಳ ಬಗ್ಗೆ ಮಾತಾಡಲಿ. ಬಿಜೆಪಿಯ ಸುಳ್ಳಿನ ಪ್ರಣಾಳಿಕೆಯನ್ನು ಗುಜರಿ ವ್ಯಾಪಾರಿಗಳೂ ಖರೀದಿಸುವುದಿಲ್ಲ!' ಎಂದು ಬಿಜೆಪಿ ನಾಯಕರನ್ನ ಕೆಣಕಿದೆ.

'ಖಾಲಿ ಸಿಲಿಂಡರ್‌ಗಳನ್ನೂ ಕೊಟ್ಟಿಲ್ಲ ಬಿಜೆಪಿ!'

ಮತ್ತೊಂದು ಕಡೆ ಬಿಜೆಪಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಬಗ್ಗೆಯೂ ಕಾಂಗ್ರೆಸ್ ಟ್ವೀಟ್ ಮೂಲಕ ಅಸ್ತ್ರ ಪ್ರಯೋಗಿಸಿದೆ. 'ಯುಪಿ, ಗೋವಾಗಳಲ್ಲೂ ಬಿಜೆಪಿ 3 ಉಚಿತ ಸಿಲಿಂಡರ್ ನೀಡುವ ಭರವಸೆಯನ್ನು ನೀಡಿತ್ತು. ಆದರೆ ಅಧಿಕಾರಕ್ಕೇರಿದ ನಂತರ ಆ ರಾಜ್ಯಗಳಲ್ಲಿ ಗ್ಯಾಸ್ ಇರುವ ಸಿಲಿಂಡರ್ ಇರಲಿ, ಕನಿಷ್ಠ ಖಾಲಿ ಸಿಲಿಂಡರ್‌ಗಳನ್ನೂ ಕೊಟ್ಟಿಲ್ಲ ಬಿಜೆಪಿ! ಅದೇ ನಾಟಕವನ್ನು ಕರ್ನಾಟಕದಲ್ಲಿ ಪ್ರದರ್ಶನ ಹಮ್ಮಿಕೊಂಡಿದೆ ಅಷ್ಟೇ! ಇದೂ ಕೂಡ ಗ್ಯಾಸ್ ಸಬ್ಸಿಡಿ ಎಂಬ ಜುಮ್ಲಾದಂತೆಯೇ!' ಎಂದು ಬಿಜೆಪಿ ವಿರುದ್ಧ ಆರೋಪಿಸಿದೆ ಕಾಂಗ್ರೆಸ್.

'ಕಿವಿ ಮೇಲೆ ಪ್ಲಾಸ್ಟಿಕ್ ಹೂವು'

ಮತ್ತೊಂದು ಕಡೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿರುವ ವಸತಿ ಯೋಜನೆ ಬಗ್ಗೆಯೂ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. 'ವಸತಿ ರಹಿತರಿಗೆ 10 ಲಕ್ಷ ಮನೆ ಎನ್ನುವುದು ಬಿಜೆಪಿಯ ಮತ್ತೊಂದು ಕಿವಿ ಮೇಲೆ ಇಡಲು ತಯಾರಾದ ಪ್ಲಾಸ್ಟಿಕ್ ಹೂವು! ಹಿಂದಿನ ಪ್ರಣಾಳಿಕೆಯಲ್ಲೂ ಇದನ್ನೇ ಹೇಳಿದ್ದರು, ಈಗಲೂ ಇದನ್ನೇ ಹೇಳಿದ್ದಾರೆ. ಆದರೆ 4 ವರ್ಷದ ಅಧಿಕಾರದಲ್ಲಿ ಕೊನೆ ಪಕ್ಷ 4 ಮನೆಗಳನ್ನೂ ಮಂಜೂರು ಮಾಡಲಿಲ್ಲ. ವಸತಿ ಯೋಜನೆಗೆ ಕೇಂದ್ರದ ಅನುದಾನವನ್ನೂ ತರಲಿಲ್ಲ.' ಎಂದು ಆರೋಪಿಸಿದೆ.

Congress alleged that BJP will not complete election manifesto promises

ಬಡವರಿಗೆ 'ನಂದಿನಿ' ಉಚಿತ!

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಈ ಬಾರಿ ಸಾಕಷ್ಟು ಉಚಿತ ಉಡುಗೊರೆ ನೀಡುವುದಾಗಿ ಆಶ್ವಾಸನೆ ನೀಡಿದೆ. ಈ ಬಾರಿ ಪ್ರಣಾಳಿಕೆಯಲ್ಲಿ ಬಿಜೆಪಿ, ಬಿಪಿಎಲ್ ಕುಟುಂಬಕ್ಕೆ ವರ್ಷಕ್ಕೆ 3 ಉಚಿತ ಅಡುಗೆ ಅನಿಲ ಸಿಲಿಂಡರ್ ನೀಡುವ ಭರವಸೆ ನೀಡಿದೆ. ಜೊತೆಗೆ BPL ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲು ಉಚಿತ, 5 ಕೆಜಿ ತಿಂಗಳಿಗೆ ಸಿರಿಧಾನ್ಯ ನೀಡುವುದಾಗಿ ಘೋಷಣೆ ಮಾಡಿದೆ. ಆದರೆ ಅರ್ಧ ಲೀಟರ್ ನಂದಿನಿ ಹಾಲು ಉಚಿತವಾಗಿ ನೀಡುವ ವಿಚಾರದ ಸುತ್ತ ಬಿಸಿಬಿಸಿ ಚರ್ಚೆ ಆರಂಭವಾಗಿದೆ.

ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿರುವ ಸಂದರ್ಭದಲ್ಲೇ ಬಿಜೆಪಿ ಪ್ರಣಾಳಿಕೆ ರಿಲೀಸ್ ಮಾಡಿದೆ. ಇನ್ನು ಕಾಂಗ್ರೆಸ್ ಈ ಪ್ರಣಾಳಿಕೆಗೆ ಕೌಂಟರ್ ಕೊಡುತ್ತಿದೆ. ಚುನಾವಣೆಯಲ್ಲಿ ಇದೆಲ್ಲಾ ಯಾವ ರೀತಿ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಕೂಡ ಪ್ರಕಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+