ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದುಪ್ಪಟ್ಟು ವಿದ್ಯುತ್ ಬಿಲ್; ದೂರು ಕೊಡಲು ಬೆಸ್ಕಾಂ ಸಹಾಯವಾಣಿ ಆರಂಭ

|
Google Oneindia Kannada News

ಬೆಂಗಳೂರು, ಮೇ 14 : ಲಾಕ್ ಡೌನ್ ಪರಿಣಾಮ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಮೀಟರ್ ರೀಡಿಂಗ್ ನಡೆದಿಲ್ಲ. ಎರಡೂ ತಿಂಗಳಿನ ಸರಾಸರಿ ವಿದ್ಯುತ್ ಬಿಲ್‌ ಗ್ರಾಹಕರಿಗೆ ಈಗ ತಲುಪಿದ್ದು ವಿವಾದಕ್ಕೆ ಕಾರಣವಾಗಿದೆ.

Recommended Video

Can Diabetic people eat EGG? Here is your answer | Oneindia Kannada

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾ) ವಿದ್ಯುತ್ ಬಿಲ್ ಬಗ್ಗೆ ಜನರ ದೂರನ್ನು ಆಲಿಸಲು ಸಹಾಯವಾಣಿಯನ್ನು ಆರಂಭಿಸಿದೆ. 1912 ನಂಬರ್‌ಗೆ ಕರೆ ಮಾಡಿ ಜನರು ಬಿಲ್‌ಗಳ ಬಗ್ಗೆ ದೂರನ್ನು ಕೊಡಬಹುದು.

ಬೆಂಗಳೂರಿಗರಿಗೆ ಲಾಕ್‌ಡೌನ್‌ ಮಧ್ಯೆ ವಿದ್ಯುತ್ ಬಿಲ್ ಬರೆ ಕೊಟ್ಟ ಬೆಸ್ಕಾಂ!ಬೆಂಗಳೂರಿಗರಿಗೆ ಲಾಕ್‌ಡೌನ್‌ ಮಧ್ಯೆ ವಿದ್ಯುತ್ ಬಿಲ್ ಬರೆ ಕೊಟ್ಟ ಬೆಸ್ಕಾಂ!

77 ಲಕ್ಷ ಗ್ರಾಹಕರಿಗೆ ಈಗಾಗಲೇ ಎರಡು ತಿಂಗಳ ಬಿಲ್ ಒಟ್ಟಿಗೆ ತಲುಪಿದೆ. ಇದರಿಂದಾಗಿ ಹಲವು ಗೊಂದಲ ಉಂಟಾಗಿದೆ. ಯಾವುದೇ ಗ್ರಾಹಕರು ಬಿಲ್ ಕಟ್ಟದಿದ್ದರೂ ಜೂನ್ 30ರ ತನಕ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಿಲ್ಲ ಎಂದು ಬೆಸ್ಕಾಂ ಹೇಳಿದೆ.

ಕೊರೊನಾ ಲಾಕ್‌ಡೌನ್: ಭಾರತದಲ್ಲಿ ಶೇ.23ರಷ್ಟು ತಗ್ಗಿದ ವಿದ್ಯುತ್ ಬಳಕೆ ಕೊರೊನಾ ಲಾಕ್‌ಡೌನ್: ಭಾರತದಲ್ಲಿ ಶೇ.23ರಷ್ಟು ತಗ್ಗಿದ ವಿದ್ಯುತ್ ಬಳಕೆ

Confusion On Issuing Bill BESCOM Set Up Helpline

"ಎರಡು ತಿಂಗಳ ಬಿಲ್ ಒಟ್ಟಿಗೆ ನೀಡಿದ್ದರಿಂದ ಗೊಂದಲವಾಗಿದೆ. ಬಿಲ್ ಬಗ್ಗೆ ಸ್ಪಷ್ಟನೆ ಬೇಕಿದ್ದರೆ ಸಮೀಪದ ಸಬ್ ಡಿವಿಷನ್ ಕಚೇರಿಗೆ ಭೇಟಿ ಕೊಡಿ. ಇಲ್ಲವಾದಲ್ಲಿ ಸಹಾಯವಾಣಿಗೆ ಕರೆ ಮಾಡಿ" ಎಂದು ಬೆಸ್ಕಾಂ ಎಂಡಿ ರಾಜೇಶ್ ಗೌಡ ಹೇಳಿದ್ದಾರೆ.

ವಿದ್ಯುತ್ ಶುಲ್ಕ ಪಾವತಿಗೆ ವಿನಾಯಿತಿ ನೀಡುವಂತೆ ಕೇಂದ್ರ ಸೂಚನೆ ವಿದ್ಯುತ್ ಶುಲ್ಕ ಪಾವತಿಗೆ ವಿನಾಯಿತಿ ನೀಡುವಂತೆ ಕೇಂದ್ರ ಸೂಚನೆ

ಗ್ರಾಹಕರ ಬಳಕೆ ಮತ್ತು ಸ್ಲ್ಯಾಬ್ ದರಗಳನ್ನು ಮಾಸಿಕ ಬಿಲ್‌ಗೆ ಅನ್ವಯಿಸುವಂತೆ ಕರಾರುವಕ್ಕಾಗಿ ಹಾಗೂ ಯಾವುದೇ ಹೆಚ್ಚುವರಿ ಆಗದಂತೆ ಎರಡು ತಿಂಗಳಿಗೂ ಸಮಾನವಾಗಿ ಯೂನಿಟ್ ಬಳಕೆಯನ್ನು ಸ್ಲ್ಯಾಬ್‌ಗಳನ್ನು ದುಪ್ಪಟ್ಟುಗೊಳಿಸಿ ಕನಿಷ್ಠ ಸ್ಲ್ಯಾಬ್‌ನಿಂದ ಅನ್ವಯಿಸುವಂತೆ ಬಿಲ್‌ನಲ್ಲಿ ತೋರಿಸಲಾಗಿದೆ ಎಂದು ಬೆಸ್ಕಾಂ ಹೇಳಿದೆ.

ಲಾಕ್ ಡೌನ್ ಸಮಯದಲ್ಲಿ ಬಹುತೇಕ ಜನರು ಮನೆಯಲ್ಲಿಯೇ ಇದ್ದು ಮನೆಯಿಂದಲೆ ಕೆಲಸ ನಿರ್ವಹಣೆ ಮಾಡಿರುತ್ತಾರೆ. ಬೇಸಿಗೆ ಆಗಿದ್ದರಿಂದ ಮನೆಯಲ್ಲಿ ಫ್ಯಾನ್, ಎಸಿ ಮತ್ತು ವಿದ್ಯುತ್ ಉಪಕರಣಗಳ ಬಳಕೆ ಹೆಚ್ಚಾಗಿದ್ದು, ಬಳಕೆ ಹೆಚ್ಚಾದಂತೆ ಹೆಚ್ಚಿನ ಸ್ಲ್ಯಾಬ್ ದರಗಳು ಅನ್ವಯವಾಗಿ ಬಿಲ್ ಹೆಚ್ಚಾಗಿರಬಹುದು ಎಂದು ಬೆಸ್ಕಾಂ ಸ್ಪಷ್ಟನೆ ನೀಡಿದೆ.

English summary
The BESCOM requested the consumers to dial helpline number 1912 for clarity on bills. It is also decided not to disconnect the power supply for non-payment of electricity bills till June 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X