ಟೆಕ್ಕಿ ಹತ್ಯೆ:ಭಾನುವಾರ ಬೆಂಗಳೂರಿನಲ್ಲಿ ಪ್ರತಿಭಟನೆ

ಬೆಂಗಳೂರು, ಜೂ.7: ಪುಣೆ ಟೆಕ್ಕಿಯನ್ನು ಹತ್ಯೆ ಮಾಡಿದ್ದನ್ನು ಬೆಂಗಳೂರಿನ ಐಟಿ/ಐಟಿಇಎಸ್‌‌ ಎಂಪ್ಲಾಯಿಸ್‌‌ ಸೆಂಟರ್‌‌ ಖಂಡಿಸಿದ್ದು ಜೂ.8. ಭಾನುವಾರ ಬೆಂಗಳೂರಿನಲ್ಲಿ ಕ್ಯಾಂಡಲ್‌ ಹಚ್ಚಿ ಪ್ರತಿಭಟನೆ ನಡೆಸಲಿದ್ದಾರೆ.

ಬಿಟಿಎಂ 2ನೇ ಹಂತದ, ಕೆಫೆ ಕಾಫಿ ಡೇ ಸಮೀಪ ಐದು ಗಂಟೆಗೆ ಈ ಪ್ರತಿಭಟನೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವ‌ಜನಿಕರು ಪಾಲ್ಗೊಂಡು ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಐಟಿ/ಐಟಿಇಎಸ್‌‌ ಎಂಪ್ಲಾಯಿಸ್‌‌ ಸೆಂಟರ್‌ ವಿನಂತಿಸಿಕೊಂಡಿದೆ.[ಮಂಡೂರು ಗ್ರಾಮಸ್ಥರ ನಿಜವಾದ ಸಮಸ್ಯೆ ಏನು?]

pune techie protest

ಏನಿದು ಕೊಲೆ ಪ್ರಕರಣ:
ಪುಣೆ ಉಪನಗರ ಹದಪ್ಸಾ ನಿವಾಸಿ 24 ವರ್ಷದ ಶೇಖ್ ಮೊಹಿಸಿನ್ ಸಾದಿಕ್‌ ಸೋಮವಾರ ರಾತ್ರಿ ಮನೆಗೆ ಹಿಂದಿರುಗುತ್ತಿದ್ದಾಗ ದುಷ್ಕರ್ಮಿಗಳು ಹಾಕಿ ಸ್ಟಿಕ್‌ಗಳಿಂದ ಬಡಿದು ಹತ್ಯೆ ಗೈದಿದ್ದರು. ಫೇಸ್‌ಬುಕ್‌ನಲ್ಲಿ ಛತ್ರಪತಿ ಶಿವಾಜಿ ಮತ್ತು ಬಾಳಾ ಸಾಹೇಬ್‌ ಠಾಕ್ರೆ ಅವರನ್ನು ಅವಹೇಳನ ಮಾಡುವ ಫೋಟೋಗಳನ್ನು ಅಪ್‌ಲೋಡ್‌ ಮಾಡಿದ ಹಿನ್ನಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಮಂದಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಹಿಂದೂ ಸಂಘಟನೆಯೊಂದಿಗೆ ನಂಟು ಹೊಂದಿರುವವರೆಂದು ಶಂಕಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+