ಬೆಂಗಳೂರಿನ ಎಲ್ಲ ವಾರ್ಡ್ ಗಳಲ್ಲಿ ಕಾಂಪೋಸ್ಟ್ ಖರೀದಿ ಕೇಂದ್ರ: ಸಿದ್ದರಾಮಯ್ಯ
ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ ಗಳಲ್ಲಿ ಸಾರ್ವಜನಿಕರು ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಂದ ಕಾಂಪೋಸ್ಟ್ ಖರೀದಿಸಲು ಕೇಂದ್ರ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು, ಮಾರ್ಚ್ 28: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್ ಗಳಲ್ಲಿ ಕಾಂಪೋಸ್ಟ್ ಖರೀದಿ ಕೇಂದ್ರಗಳನ್ನು ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅಂದಹಾಗೆ ಸಾರ್ವಜನಿಕರು, ಸ್ವಯಂ ಸೇವಾ ಸಂಸ್ಥೆಗಳಿಂದ ತಯಾರಿಸುವ ಕಾಂಪೋಸ್ಟ್ ಅನ್ನು ಖರೀದಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬಿಬಿಎಂಪಿ ಜತೆ ಸೇರಿ ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮವು ಬೆಂಗಳೂರಿನ ವಿಧಾನಸೌಧದ ಮುಂದೆ ಆಯೋಜಿಸಿದ್ದ ರೈತರಿಗೆ ಕಾಂಪೋಸ್ಟ್ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ನಗ್ರಾವನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಕರ್ತವ್ಯ. ಆದ್ದರಿಂದ ಹಸಿ-ಒಣ ಕಸ ಎಂದು ವಿಂಗಡಿಸಿದರೆ ಅನುಕೂಲವಾಗುತ್ತದೆ ಎಂದರು.[ಬಿಬಿಎಂಪಿ ಬಜೆಟ್ : ಸ್ವಚ್ಛ, ಹಸಿರು ಬೆಂಗಳೂರಿನತ್ತ ಒಂದು ಹೆಜ್ಜೆ!]

ತ್ಯಾಜ್ಯ ವಿಲೇವಾರಿ ಮಾಡುವ ಸಲುವಾಗಿಯೇ ರಾಜ್ಯ ಸರಕಾರದಿಂದ ಬಿಬಿಎಂಪಿಗೆ 450 ಕೋಟಿ ರುಪಾಯಿ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಶೇ 50ರಷ್ಟು ಕಸ ವಿಂಗಡಣೆ ಆಗುತ್ತಿದೆ. ಈ ವಿಚಾರದಲ್ಲಿ ನಮ್ಮ ನಗರ ದೇಶಕ್ಕೆ ಮಾದರಿ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಒಂದು ಟನ್ ಕಾಂಪೋಸ್ಟ್ ಗೊಬ್ಬರಕ್ಕೆ 800 ರುಪಾಯಿಯಂತೆ ಬೆಲೆಯನ್ನು ಗೊತ್ತು ಮಾಡಿ, ರೈತರಿಗೆ ಕೊಡಲಾಗುವುದು. ಒಂದು ವೇಳೆ ತಾವೇ ಸಾಗಣೆ ವೆಚ್ಚ ಹಾಕಿಕೊಳ್ತೀವಿ ಎಂದರೆ ಇನ್ನೂರು ರುಪಾಯಿಯಂತೆಯೇ ಕೊಡ್ತೀವಿ ಎಂದು ಅವರು ಹೇಳಿದರು.












Click it and Unblock the Notifications