Foot Over Bridge: ಬೆಂಗಳೂರಿನ ಬಹುನಿರೀಕ್ಷೆಯ ಈ 'ಸೌಲಭ್ಯ' ಸಿಗುವುದು ಯಾವಾಗ?, ಇಲ್ಲಿದೆ ಮಾಹಿತಿ

ಬೆಂಗಳೂರು, ಜೂನ್ 19: ಹಲವು ಸವಾಲು, ವಿಳಂಬಗಳ ಹೊರತಾಗಿಯು 'ನಮ್ಮ ಮೆಟ್ರೋ' ನಿಲ್ದಾಣ ಮತ್ತು 'ರೈಲ್ವೆ ನಿಲ್ದಾಣ'ಕ್ಕೆ ಸಂಪರ್ಕ ಸಾಧಿಸುವ ಉಕ್ಕಿನ 'ಪಾದಾಚಾರಿ ಮೇಲ್ಸೇತುವೆ' (Food Over Bridge- FOB) ನಿಗದಿತ ಗಡುವಿನೊಳಗೆ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಲು ಸಜ್ಜಾಗಿದ್ದಾರೆ.

ನಮ್ಮ ಮೆಟ್ರೋ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಮತ್ತು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಕೆ.ಆರ್‌ಪುರಂ ನಿವಾಸಿಗಳು ಸೇರಿದಂತೆ ಮೆಟ್ರೋ-ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.

Completion soon of Foot Over Bridge Connecting KR Puram Metro Station and Railway Station

ಜನರ ಬಳಕೆಗೆ ತೆರೆಯುವುದು ಯಾವಾಗ?

ಬೆಂಗಳೂರಿನ ಕೆಆರ್ ಪುರಂ ರೈಲು ನಿಲ್ದಾಣದಲ್ಲಿ ಬಳಿಕ ನಿರ್ಮಿಸಲಾಗುತ್ತಿರುವ ಬಹು ನಿರೀಕ್ಷೆಯ ಪಾದಾಚಾರಿ ಮೇಲ್ಸೇತುವೆ (ಎಫ್‌ಒಬಿ) ಮುಂದಿನ ಒಂದೂವರೆಗೆ ತಿಂಗಳಲ್ಲಿ (45 ದಿನಗಳಲ್ಲಿ) ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಮೂರು ಭಾರಿ ಗಡುವು ಪಡೆದು ಮೀರಿದ್ದ ಈ ಕಾಮಗಾರಿ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಆದಷ್ಟು ಶೀಘ್ರವೇ ಸಾರ್ವಜನಿಕರಿಗೆ ತೆರಯಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆಆರ್‌ ಪುರಂ- ಕೆಂಪೇಗೌಡ ಏರ್‌ಪೋರ್ಟ್ ವರೆಗಿನ ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಇಲ್ಲಿನ ಕೆಆರ್ ಪುರಂ ಮೆಟ್ರೋ ನಿಲ್ದಾಣಕ್ಕಾಗಿ ಕಾನ್ಕೋರ್ಸ್ ಮಟ್ಟದಲ್ಲಿ ಡೆಕ್ ಸ್ಲ್ಯಾಬ್ ಅನ್ನು ಪೂರ್ಣಗೊಳಿಸುವ ಯೋಜನೆ ಕೈಗೊಳ್ಳಲಾಗಿತ್ತು.

ಲಿಫ್ಟ್ ನಿರ್ಮಾಣ ಕೆಲಸ, ತ್ವರತ ಕಾರ್ಯಕ್ಕೆ BMRCL ಸೂಚನೆ

ಎಫ್‌ಒಬಿ ಯೋಜನೆಯು ಹಲವು ಕಾರಣಾಂತರಗಳಿಂದ ನಿಧಾನಗತಿಯಲ್ಲಿ ಸಾಗಿತ್ತು. ಇದೀಗ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಬಾಕಿ ಉಳಿದ ಅಂತಿಮ ಕೆಲಸವನ್ನು ತ್ವರಿತಗೊಳಿಸಲು ಸೂಚಿಸಿದೆ. ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಲಿಫ್ಟ್‌ಗಳನ್ನು ಇಲ್ಲಿ ನಿರ್ಮಿಸುವ ಕೆಲಸ ನಡೆಯುತ್ತಿದೆ.

Completion soon of Foot Over Bridge Connecting KR Puram Metro Station and Railway Station

ಕೆಆರ್ ಪುರಂ ರೈಲು ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳ ಮಧ್ಯೆ ಸಾರ್ವಜನಿಕರಿಗೆ ಸಂಪರ್ಕ ಸಾಧಿಸುವಲ್ಲಿ ಈ ಎಫ್‌ಒಪಿ ಮೂಲಸೌಕರ್ಯವು ನಿರ್ಣಾಯಕ ಕಾರ್ಯ ಮಾಡಲಿದೆ. ಜನರಿಗೆ ತಡೆರಹಿತ ಇಂಟರ್‌ಮೋಡಲ್ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೆಟ್ರೋ-SWR ನಿಲ್ದಾಣಕ್ಕೆ ಸಂಪರ್ಕ

ಉಕ್ಕಿನಿಂದ ಎಫ್‌ಓಪಿ ನಿರ್ಮಾಣ ಮಾಡಲಾಗಿದೆ. ಜೋಡಣೆ ಪೂರ್ಣಗೊಂಡಿದ್ದು, ಲಿಫ್ಟ್ ಸ್ಥಾಪನೆಯ ಕೆಲಸ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಇದು ಕೆಆರ್ ಪುರಂನ ನೈಋತ್ಯ ರೈಲ್ವೆ (SWR)ನಿಲ್ದಾಣದ ಒಂದು ಬದಿಯಿಂದ ಈ ಎಫ್‌ಓಪಿ ಸಂಪರ್ಕಿಸುತ್ತದೆ. ಮೆಟ್ರೋ ನಿಲ್ದಾಣದಿಂದ SWR ನಿಲ್ದಾಣದ 1, 2 ಮತ್ತು 3 ಪ್ಲಾಟ್‌ಫಾರ್ಮ್‌ ಅನ್ನು ಸಂಪರ್ಕಿಸುತ್ತದೆ.

ಸಾರ್ವಜನಿಕರು ಕೆಆರ್ ಪುರಂ ರೈಲ್ವೆ ನಿಲ್ದಾಣದಿಂದ ಮೆಟ್ರೋ ನಿಲ್ದಾಣಕ್ಕೆ ಹೊರಡಲು ಪ್ಲಾಟ್‌ಫಾರ್ಮ್‌ 1ಅನ್ನು ಬಳಸಬೇಕಿದೆ. ಇದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ. ಕೆ.ಆರ್‌ ಪುರಂ ಪ್ರದೇಶ, ನಿಲ್ದಾಣಗಳು ಜನನಿಬಿಡ ಪ್ರದೇಶವಾಗಿದ್ದರಿಂದ ಈ ಎಫ್‌ಒಪಿ ಅಗತ್ಯ ಇದೆ.

ಈ ಪಾದಾಚಾರಿ ಮೇಲ್ಸೇತುವೆ ಕುರಿತು ಈಗಾಗಲೇ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸೇತುವೆಗಾಗಿ ನಾವು ಬಹಳ ಸಮಯದಿಂದ ಕಾಯುತ್ತಿದ್ದೇವೆ. ಸಂಚಾರ ದಟ್ಟಣೆ ಕಡಿಮೆ ಮಾಡುವ ಈ ಸೌಲಭ್ಯದ ನಿರ್ಮಾಣ ಕೆಲಸ ಯಾವಾಗ ಮುಗಿಯುತ್ತದೆ, ಮುಕ್ತವಾಗುತ್ತದೆ ಎಂದು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+