ಕಿರುಕುಳ ಆರೋಪ: ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷನ ವಿರುದ್ಧ ಮಹಿಳೆ ದೂರು
ಚೆನ್ನೈ, ಜುಲೈ 25: ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳದಲ್ಲಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ 65 ವರ್ಷದ ಮಹಿಳೆಯೊಬ್ಬರು ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷ ಡಾ ಸುಬ್ಬಯ್ಯ ಷಣ್ಮುಗಂ ವಿರುದ್ಧ ದೂರು ದಾಖಲಿಸಿದ್ದಾರೆ.
Recommended Video
ಸುಬ್ಬಯ್ಯ ಷಣ್ಮುಗಂ ಅವರ ತಮ್ಮ ಮನೆ ಬಾಗಿಲ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಲ್ಲದೆ, ಬಳಕೆಯಾಗಿರುವ ಮಾಸ್ಕ್‌ಗಳನ್ನು ಎಸೆದಿದ್ದಾರೆ ಎಂದು ಮಹಿಳೆ ದೂರಿದ್ದಾಳೆ.
ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷರು ಮೂತ್ರ ವಿಸರ್ಜನೆ ಮಾಡಿದ್ದಾರೆ ಎನ್ನಲಾದ ಆರೋಪಕ್ಕೆ ಸಿಸಿಟಿವಿ ದೃಶ್ಯ ಹಾಗೂ ಕೆಲವು ಫೋಟೋಗಳನ್ನು ಮಹಿಳೆ ಪೊಲೀಸರಿಗೆ ನೀಡಿದ್ದು, ಆಡಂಬಕ್ಕಂ ಪೊಲೀಸ್ ಠಾಣೆಯಲ್ಲಿ ಜುಲೈ 11 ರಂದು ದೂರು ದಾಖಲಾಗಿದೆ.

ಮಹಿಳೆಗೆ ಸೇರಿದ ಪಾರ್ಕಿಂಗ್ ಸ್ಥಳವನ್ನು ಬಳಸಿಕೊಳ್ಳಲು ಡಾ ಸುಬ್ಬಯ್ಯ ಷಣ್ಮುಗಂ ಅನುಮತಿ ಕೇಳಿದ್ದರು. 1500 ಬಾಡಿಗೆ ನೀಡಿ ಬಳಸಿಕೊಳ್ಳಿ ಎಂದು ಮಹಿಳೆ ಹೇಳಿದ್ದರು. ಇದರಿಂದ ಕೋಪಗೊಂಡ ಎಬಿವಿಪಿ ಅಧ್ಯಕ್ಷ ಬಳಸಿದ ಮಾಸ್ಕ್, ಕಹಿಬೇವಿನ ಎಲೆಗಳನ್ನು ಎಸೆಯುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳೆ ದೂರನ್ನು ನಿರಾಕರಿಸಿರುವ ಎಬಿವಿಪಿ ಘಟಕವೂ, ಸಿಸಿಟಿವಿ ದೃಶ್ಯವೂ ನಕಲಿ, ಇದು ಕಾಂಗ್ರೆಸ್ ಸಂಘಟನೆಯ ಎನ್‌ಎಸ್‌ಯುಐ ಘಟಕ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಮತ್ತೊಂದೆಡೆ ಡಿಎಂಕೆ ಪಕ್ಷದ ಕನಿಮೋಳಿ ಪ್ರತಿಕ್ರಿಯಿಸಿ ಬಲಪಂಥೀಯದವರ ವಿರುದ್ಧ ದೂರು ಬಂದರೆ ಪೊಲೀಸರು ಗಂಭೀರವಾಗಿ ಪರಿಗಣಿಸದಿರುವುದು ಸಾಮಾನ್ಯವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಂದ್ಹಾಗೆ, ಸುಬ್ಬಯ್ಯ ಅವರು ಎಬಿವಿಪಿ ಅಧ್ಯಕ್ಷರು ಮಾತ್ರವಲ್ಲ, ಕಿಲಿಪಾಕ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕ್ಯಾನ್ಸರ್ ವಿಭಾಗದಲ್ಲಿ ಮುಖ್ಯಸ್ಥರು ಆಗಿದ್ದಾರೆ.












Click it and Unblock the Notifications