ಈ 5 ಕಾರಣಕ್ಕೆ ಬೆಂಗಳೂರು ಬೇಡ ಎನ್ನುತ್ತಿರುವ ಕಂಪನಿಗಳು!, ಬೇರೆ ರಾಜ್ಯಗಳಿಗೆ ಹೋಗುತ್ತಿವೆಯೇ ಕಂಪನಿಗಳು ?!
ಬೆಂಗಳೂರಿನಿಂದ ಕಂಪನಿಗಳು ನೆರೆಯ ರಾಜ್ಯಗಳಿಗೆ ಹೋಗುವುದಕ್ಕೆ ಸಿದ್ಧವಾಗುತ್ತಿವೆ ಎನ್ನುವ ಪ್ರಮುಖ ವಿಷಯವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಇದರಲ್ಲಿ ಮುಖ್ಯವಾಗಿ ಆಂಧ್ರಪ್ರದೇಶದ ಹೊಸ ರಾಜಧಾನಿ ಅಮರಾವತಿ, ತೆಲಂಗಾಣದ ಹೈದರಾಬಾದ್ ಹಾಗೂ ಮಹಾರಾಷ್ಟ್ರದ ಪುಣೆ ಮತ್ತು ಮುಂಬೈ ನಗರಗಳಿಗೆ ಸ್ಥಳಾಂತರವಾಗುವ ಆತಂಕ ಶುರುವಾಗಿದೆ. ಈ ಪೈಪೋಟಿಯಲ್ಲಿ ಚೆನ್ನೈ ಸಹ ಹಿಂದುಳಿದಿಲ್ಲ. ಮೂಲಸೌಕರ್ಯ ಕೊರತೆ ಹಾಗೂ ಐಟಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಮೂಲಸೌಕರ್ಯ ಕೊರತೆ ಹಾಗೂ ಬದಲಾವಣೆಗೆ ತಕ್ಕಂತೆ ಹೊಸ ಆಲೋಚನೆಗಳು ಮೂಡದೆ ಇರುವುದು. ರಾಜಕೀಯ ಇಚ್ಛಾಶಕ್ತಿ ಸೇರಿದಂತೆ ಹಲವು ಕಾರಣಗಳಿಗೆ ಬೆಂಗಳೂರಿನ ಕಂಪನಿಗಳು ಬೇರೆ ರಾಜ್ಯದ ನಗರಗಳಿಗೆ ಸ್ಥಳಾಂತರವಾಗಲು ಶುರು ಮಾಡಿವೆ.
ಹೌದು ಈಗೊಂದು ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ. 1990ರ ದಶಕದಲ್ಲಿ ಬೆಂಗಳೂರು ಹಾಗೂ ಹೈದರಾಬಾದ್‌ನ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಆಗ ಅವಿಭಜಿತ ಆಂಧ್ರಪ್ರದೇಶವಿತ್ತು. ಆದರೆ ಇದೀಗ ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳಿಂದಲೂ ಬೆಂಗಳೂರು ಪೈಪೋಟಿ ಎದುರಿಸುವಂತೆ ಆಗಿದೆ. ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು, 15 ವರ್ಷಗಳ ಹಿಂದೆ ಬೈ ಬೈ ಬೆಂಗಳೂರು, ಹಲೋ ಹೈದರಾಬಾದ್ ಎನ್ನುವ ಘೋಷಾವಾಕ್ಯದೊಂದಿಗೆ ಅಭಿಯಾನವೊಂದನ್ನು ಪ್ರಾರಂಭಿಸಿದ್ದರು.

ತೆಲಂಗಾಣ ರಾಜಧಾನಿ ಸತತ ಆರು ವರ್ಷಗಳಿಂದ ಮರ್ಸರ್‌ನ ವಾರ್ಷಿಕ ಶ್ರೇಯಾಂಕದಲ್ಲಿ ಭಾರತದ ಅತ್ಯಂತ ವಾಸಯೋಗ್ಯ ನಗರ ಎಂದು ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷದ ಹುರುನ್ ಇಂಡಿಯಾ ಶ್ರೀಮಂತ ಪಟ್ಟಿಯಲ್ಲಿ ಬೆಂಗಳೂರನ್ನು ಹಿಂದಿಕ್ಕಿದೆ. ಐಟಿ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯಂತಹ ನಿರ್ಣಾಯಕ ಆಯ್ಕೆಗಳಲ್ಲಿ ಈಗ ಹೈದರಾಬಾದ್ ಸಹ ಒಂದಾಗಿದೆ.
ಈ ಅಭಿಯಾನದ ಮುಂದುವರಿದ ಭಾಗವಾಗಿ ಅಥವಾ ಐಟಿ ಪೈಪೋಟಿಯಲ್ಲಿ ಗೆಲುವು ಸಾಧಿಸಿದ್ದು ಮಾತ್ರ ಬೆಂಗಳೂರು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಬೆಂಗಳೂರಿಗೆ ನೆರೆಯ ರಾಜ್ಯಗಳ ಹಲವು ನಗರಗಳು ಪೈಪೋಟಿ ನೀಡುವುದಕ್ಕೆ ಪ್ರಾರಂಭಿಸಿವೆ. ಅದರಲ್ಲಿ ಮುಖ್ಯವಾದ ಮೂರು ವಿಷಯಗಳು ಇಲ್ಲಿವೆ.
ಮೂಲಸೌಕರ್ಯ ಸಮಸ್ಯೆ: ಬೆಂಗಳೂರಿನಲ್ಲಿ ಮೂಲಸೌಕರ್ಯ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ರಸ್ತೆ ಗುಂಡಿಗಳ ಸಂಖ್ಯೆ ವಿಪರೀತವಾಗಿದೆ. ರಸ್ತೆ ಗುಂಡಿಗಳಿಂದ ಬೆಂಗಳೂರಿನಲ್ಲಿ ಸಂಚಾರ ಸಮಸ್ಯೆ ಆಗುತ್ತಿದೆ. ಸಣ್ಣ ಮಳೆಗೂ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲುತ್ತಿದೆ. ಈ ಸಮಸ್ಯೆಗಳು ಹಲವು ತಿಂಗಳುಗಳಿಂದ ಇದೆಯಾದರೂ, ಇತ್ತೀಚಿನ ವರ್ಷಗಳಲ್ಲಿ ವಿಪರೀತವಾಗಿದೆ.
ಅನ್ಯ ನಗರಗಳ ಭೂಮಿ & ಲೈಸೆನ್ಸ್ ನೀತಿ: ಬೆಂಗಳೂರಿಗೆ ಪೈಪೋಟಿ ಕೊಡುವುದಕ್ಕೆ ಅನ್ಯ ನಗರಗಳು ವಿವಿಧ ಕಂಪನಿಗಳಿಗೆ ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡುತ್ತಿವೆ. ಅಲ್ಲದೇ ಕಂಪನಿಗಳ ಪ್ರಾರಂಭ ಮತ್ತು ಲೈಸೆನ್ಸ್ ನೀತಿಯನ್ನು ಅನ್ಯ ನಗರಗಳು ಭಾರೀ ದೊಡ್ಡ ಮಟ್ಟದಲ್ಲಿ ಸರಳೀಕರಣ ಮಾಡಿವೆ.
ಬೆಂಗಳೂರು ಆಡಳಿತ: ಕಳೆದ ಆರು ವರ್ಷಕ್ಕೂ ಹೆಚ್ಚು ಅವಧಿಯಿಂದ ಬೆಂಗಳೂರಿನ ಆಡಳಿತ ತುಕ್ಕುಹಿಡಿದಿದೆ. ನಗರಕ್ಕೆ ಮೇಯರ್ ಹಾಗೂ ಉಪ ಮೇಯರ್ ಸೇರಿದಂತೆ ಸ್ಥಳೀಯ ಆಡಳಿತವೇ ಇಲ್ಲ. ಎಲ್ಲಾ ಸಮಸ್ಯೆಗಳ ಪರಿಹಾರಕ್ಕೂ ಶಾಸಕರನ್ನೇ ಅವಲಂಬಿಸುವಂತೆ ಆಗಿದೆ. ಇದರಿಂದ ಪರಿಹಾರ ಸಾಧ್ಯವಾಗುತ್ತಿಲ್ಲ.
ಟ್ರಾಫಿಕ್ ಜಾಮ್ ಸಮಸ್ಯೆ: ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಮೊದಲಿಗಿಂತಲೂ ಈಗ ವಿಪರೀತ ಟ್ರಾಫಿಕ್ ಜಾಮ್ ಆಗುತ್ತಿದ್ದು. ಇದರಿಂದ ವಾರ್ಷಿಕವಾಗಿ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಸಾಮಾಜಿಕ ವೆಚ್ಚವು ವರ್ಷಕ್ಕೆ 38,000 ಕೋಟಿ ರೂ. ಎಂದು ಹೇಳಲಾಗಿದೆ. ಒಂದು ಗಂಟೆ ವಿಮಾನದಲ್ಲಿ ಹೈದರಾಬಾದ್‌ಗೆ ಹೋಗಬಹುದು ಎನ್ನುವ ಲೆಕ್ಕಾಚಾರಗಳು ಜೋರಾಗಿವೆ.
ಭಾಷಾ ಸಮಸ್ಯೆ: ಬೆಂಗಳೂರಿನಲ್ಲಿ ಹಿಂದಿ ಹಾಗೂ ಅನ್ಯಭಾಷಿಕರ ಹಾವಳಿ ಹೆಚ್ಚಾಗಿದೆ. ಇದರ ನಡುವೆ ಭಾಷಾ ವಿವಾದ ಹೆಚ್ಚಾಗಿದೆ. ಈ ವಿಚಾರದಲ್ಲಿ ಕನ್ನಡಿಗರದ್ದು ನ್ಯಾಯವಿದ್ದರೂ. ಹಿಂದಿ ಹಾಗೂ ಕೆಲವು ರಾಷ್ಟ್ರೀಯ ಮಾಧ್ಯಮಗಳು ಬೆಂಗಳೂರಿನ ಬಗ್ಗೆ ಅಪಪ್ರಚಾರದಲ್ಲಿ ತೊಡಗಿವೆ ಇದರಿಂದ ಬೆಂಗಳೂರಿನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತಿದೆ.
ಬೆಂಗಳೂರಿನ ಸಮಸ್ಯೆಯ ಲಾಭವನ್ನು ನೆರೆಯ ರಾಜ್ಯದ ನಗರಗಳು ತೆಗೆದುಕೊಳ್ಳುತ್ತಿದ್ದು ಇದನ್ನು ತಪ್ಪಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.












Click it and Unblock the Notifications