ಕೊಡಗು ಅವಘಡ ತನಿಖೆಗೆ ಆಯೋಗ: ಪಿಐಎಲ್ ತಿರಸ್ಕರಿಸಿದ ಹೈಕೋರ್ಟ್

ಬೆಂಗಳೂರು, ಸೆಪ್ಟೆಂಬರ್ 14: ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ವರದಿ ಹಾಗೂ ಶಿಫಾರಸ್ಸು ಸಲ್ಲಿಸುವ ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ವರದಿ ಹಾಗೂ ಶಿಫಾರಸ್ಸು ಸಲ್ಲಿಸುವ ನ್ಯಾಯಾಂಗ ತನಿಖಾ ಆಯೋಗವನ್ನು ರಚಿಸಬೇಕೆಂದು ಕೋರಿ ಕೊಡಗು ಜಿಲ್ಲೆಯ ಜೆ,ಎಸ್. ವಿರೂಪಾಕ್ಷ ಅವರು ಪಿಐಎಲ್ ಹಾಕಿದ್ದರು. ಮಳೆಯಿಂದಾಗಿ ಕೊಡಗು ಜಿಲ್ಲೆಯ 32ಕ್ಕೂ ಹೆಚ್ಚು ಗ್ರಾಮಗಳಲ್ಲಿನ ಮನೆಗಳು, ಭೂಮಿ, ರಸ್ತೆಗಳು ಕೊಚ್ಚಿಕೊಂಡು ಹೋಗಿವೆ.

ಹೀಗಾಗಿ, ಕೊಡಗು ಜಿಲ್ಲೆಯ‌ ನೆರೆ ಪರಸ್ಥಿತಿ ಸಂಪೂರ್ಣವಾಗಿ ಅಧ್ಯಯನ ಮಾಡಿ ವರದಿ ಹಾಗೂ ಶಿಫಾರಸು ಸಲ್ಲಿಸಲು ನ್ಯಾಯಾಂ ತನಿಖಾ ಆಯೋಗವನ್ನು ರಚಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಮುಖ್ಯ ನ್ಯಾಯಮೂರ್ತಿ ದಿನೇಶ ಮಹೇಶ್ವರಿ ನೇತೇತ್ವದ ವಿಭಾಗೀಯ ಪೀಠ ಅರ್ಜಿ ವಜಾಗೊಳಿಸಿದೆ. ಪ್ರವಾಹಕ್ಕೆ ಕಾರಣವಾದ ಅಂಶ ಮತ್ತು ಪರಿಹಾರ ಕ್ರಮಗಳು ಕುರಿತಂತೆ ನ್ಯಾಯಾಂಗ ರಚಿಸುವಂತೆ ಹೈಕೋರ್ಟ್ ಗೆ ಕೋರಿದ್ದರು.

Commission for Kodagu: HC rejects PIL

ಕೊಡಗಿನಲ್ಲಿ ಮುಂಗಾರು ಮಳೆ ತೀವ್ರತೆ ಹೆಚ್ಚಳವಾಗಿ ಪ್ರವಾಹ ಸೃಷ್ಟಿಯಾಗಿದ್ದು, ಲಕ್ಷಾಂತರ ಕುಟುಂಬಗಳು ಬೀದಿಪಾಲಾಗಿದ್ದವು, ಸಾವಿರಾರು ಎಕರೆ ಜಮೀನು ಪ್ರವಾಹಕ್ಕೆ ತುತ್ತಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+