ಕಾಮಿಡಿಯನ್ ಕಪಿಲ್ ಶರ್ಮ ಲೈವ್ ಇನ್ ಬೆಂಗಳೂರು
ಬೆಂಗಳೂರು, ಡಿ.5: ರಸಲ್ ಪೀಟರ್ಸ್ ನಂತರ ಬೆಂಗಳೂರಿನ ಜನತೆಯನ್ನು ನಕ್ಕು ನಲಿಸಲು ಭಾರತದ ಜನಪ್ರಿಯ ಹಾಸ್ಯಗಾರ ಕಪಿಲ್ ಶರ್ಮ ಬರುತ್ತಿದ್ದಾರೆ.
ಕಲರ್ಸ್ ವಾಹಿನಿಯ 'ಕಾಮಿಡಿ ನೈಟ್ಸ್ ವಿಥ್ ಕಪಿಲ್' ಕಾರ್ಯಕ್ರಮದಲ್ಲಿ ಮೂಲಕ ಪಂಚಿಂಗ್ ಡೈಲಾಗ್ ಹೊಡೆಯುವ ಕಪಿಲ್ ರನ್ನು ಬೆಂಗಳೂರಿಗರು ನೇರವಾಗಿ ಕಂಡು ಹಾಸ್ಯದ ಹೊನಲಿನಲ್ಲಿ ತೇಲಬಹುದಾಗಿದೆ. ಬೆಂಗಳೂರಿನ ಜಯಮಹಲ್ ಹೋಟೆಲಿನಲ್ಲಿ ಶನಿವಾರ ಸಂಜೆ ಲೈವ್ ಕಾಮಿಡಿ ಶೋ ನಡೆಯಲಿದೆ. ಆಸಕ್ತರು ಟಿಕೆಟ್ ಬುಕ್ ಮಾಡಿಕೊಳ್ಳಿ.
ಶನಿವಾರ, ಡಿ.7, 2013
ಸಮಯ: ರಾತ್ರಿ 7.30-9.45
ಟಿಕೆಟ್ ಬೆಲೆ : 1,099-2,650 ರು
ಕರೆ ಮಾಡಿ: (+91) 80 66560444, (+91) 80 41535718, (+91) 80 41535717, (+91) 80 41535716, (+91) 80 41535715
ಬುಕ್ ಮಾಡಲು ಬುಕ್ ಮೈ ಶೋ ತಾಣಕ್ಕೆ ಭೇಟಿ ಕೊಡಿ

ಕಪಿಲ್ ಶರ್ಮ, ನವಜೋತ್ ಸಿಂಗ್ ಸಿಧು ಸೇರಿದಂತೆ ಪ್ರತಿಭಾವಂತರ ಸಮಾಗಮದಲ್ಲಿ ನಡೆಯುವ ಕಾಮಿಡಿ ನೈಟ್ಸ್ ವಿತ್ ಕಪಿಲ್ ಶೋ ಕಲರ್ಸ್ ವಾಹಿನಿಯಲ್ಲಿ ಪ್ರತಿ ಭಾನುವಾರ ರಾತ್ರಿ ಹತ್ತುಗಂಟೆಗೆ ಪ್ರಸಾರವಾಗುತ್ತಿದ್ದು ಕಿರುತೆರೆ ಟಿಆರ್ ಪಿ ವಾರ್ ನಲ್ಲಿ ಮುಂಚೂಣಿಯಲ್ಲಿದೆ.
ಕಪಿಲ್ ಜತೆಗೆ ಗಮನ ಸೆಳೆದ ಗುತ್ತಿ ಮತ್ತು ಪಾಲಕ್ ಅನ್ನುವ ಎರಡು ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗಿವೆ. ಆದರೆ, ಸ್ತ್ರೀ ವೇಷಧಾರಿ ಕಮ್ ಪಾತ್ರಧಾರಿ ಗುತ್ತಿ ಅಲಿಯಾಸ್ ಸುನಿಲ್ ಗ್ರೋವರ್ ಈಗ ಶೋ ಬಿಟ್ಟಿದ್ದಾರೆ. ಶೋನ ನಿರ್ಮಾಪಕ ನಿರೂಪಕ ಕಪಿಲ್ ಶರ್ಮ ಅವರು ಗುತ್ತಿ ಹೊಂದಿದ್ದ ಗುತ್ತಿಗೆ ಅವಧಿ ವಿಸ್ತರಿಸಲು ಒಪ್ಪಿಲ್ಲ. ಹೆಚ್ಚಿನ ಸಂಬಳ ನೀಡಲು ಮನಸ್ಸು ಮಾಡಿಲ್ಲ ಎನ್ನಲಾಗಿದೆ.
ಕಪಿಲ್ ಗುತ್ತಿಯನ್ನು ಸಮಾಧಾನ ಮಾಡಿ ಕರೆದುಕೊಂಡು ಬರುತ್ತಾರಾ? ಕಾರ್ಯಕ್ರಮದ ಕ್ರಿಯೇಟಿವ್ ನಿರ್ದೇಶಕಿ ಪ್ರೀತಿ ಸಿಮೊಸ್ ಅವರ ಮನಗೆದ್ದಿರುವ ಕಪಿಲ್ ತಮ್ಮ ಮದುವೆ ಬಗ್ಗೆ ಕೂಡಾ ಬೆಂಗಳೂರಿನ ಶೋನಲ್ಲಿ ಬಾಯ್ಬಿಡುವ ಸಾಧ್ಯತೆ ಇದೆ. ಮಾತಿನ ಮಲ್ಲ ಕಪಿಲ್ ಅವರ ಕಾರ್ಯಕ್ರಮಕ್ಕೆ ಆಸಕ್ತರು ತಪ್ಪದೇ ಹೋಗಿ ಆನಂದಿಸಿ












Click it and Unblock the Notifications