ಅಪಾರ್ಟ್‌ಮೆಂಟ್‌ನಿಂದ ಬಿದ್ದು ಯುವತಿ ಅನುಮಾನಾಸ್ಪದ ಸಾವು

ಬೆಂಗಳೂರು, ಡಿಸೆಂಬರ್ 10: ಅಪಾರ್ಟ್‌ಮೆಂಟ್‌ನಿಂದ ಯುವತಿಯೊಬ್ಬಳು ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಆಕೆ ಕುಡಿದ ಮತ್ತಿನಲ್ಲಿ ಆಯತಪ್ಪಿ ಬಿದ್ದಿದ್ದಾಳೆ ಎಂದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ಮೂರನೇ ಮಹಡಿಯಿಂದ ಬಿದ್ದು ದಕ್ಷಿಣ ಅಮೇರಿಕಾ ಮೂಲದ ಯುವತಿ ಮೃತಪಟ್ಟಿರುವ ಘಟನೆ ಜೀವನ್ ಭೀಮಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕರೇನ್ ಡೇನಿಯಲ್(25) ಮೃತ ಯುವತಿ, ಮೂಲತಃ ದಕ್ಷಿಣ ಮೂಲದವರಾಗಿದ್ದು ಕಳೆದ ನಾಲ್ಕೂವರೆ ವರ್ಷದಿಂದ ವೈಲ್ಡ್ ಫ್ಲವರ್ ಹಾಲ್ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತೆ ಮರಿಯಾ ಎಂಬುವವರ ಜೊತೆ ನೆಲೆಸಿದ್ದರು.

Colombian ‘falls’ to death from balcony

ಗಾಳಿ ಸೇವನೆಗೆಂದು ಬಾಲ್ಕನಿಗೆ ಹೋಗಿದ್ದಳು: ಪಾರ್ಟಿ ಮುಗಿಸಿಕೊಂಡು ಬಂದು ಹಾಲ್‌ನಲ್ಲಿ ಕುಳಿತಿದ್ದಳು, ಈ ವೇಳೆ ಡೇನಿಯಲ್ ತಾಜಾ ಗಾಳಿ ಸೇವನೆಗೆಂದು ಬಾಲ್ಕನಿಗೆ ತೆರಳಿದ್ದಳು, ನಂತರ ಜೋರಾದ ಶಬ್ದ ಕೇಳಿ ಬಂತು ಕೂಡಲೇ ಬಾಲ್ಕನಿಗೆ ಓಡಿ ಹೋದೆ ಅಷ್ಟರೊಳಗೆ ಆಕೆ ಬಿದ್ದು ಮೃತಪಟ್ಟಿದ್ದಳು ಎಂದು ಸ್ನೇಹಿತೆ ಹೇಳಿಕೊಂಡಿದ್ದಾಳೆ.

ಡೇನಿಯಲ್ ಇಂದಿರಾನಗರದಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಇಂಗ್ಲಿಷ್ ಮತ್ತು ಡ್ಯಾನಿಷ್ ಭಾಷೆಯ ಅನುವಾದಕಿ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇವರ ಸ್ನೇಹಿತೆ ಮರಿಯಾ ಖಾಸಗಿ ಇಂಗ್ಲಿಷ್ ಶಾಲೆಯಲ್ಲಿ ಫ್ರೆಂಚ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಂದು ಪಾರ್ಟಿ ಮುಗಿಸಿಕೊಂಡು ಮನೆಗೆ ಬಂದ ಬಳಿಕ ಆಕೆ ಮದ್ಯದ ನಶೆಯಲ್ಲಿದ್ದ ಕಾರಣ ಈ ಅವಗಢ ಸಂಭವಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+