RV Raod-Bommasandra: ಮೆಟ್ರೋ ಹಳದಿ ಮಾರ್ಗ ತಪಾಸಣೆ ಶುರು: 3 ವರ್ಷ ವಿಳಂಬಕ್ಕೆ ಇದೇ ಕಾರಣ: ಪಿಸಿ ಮೋಹನ್
ಬೆಂಗಳೂರು, ಜುಲೈ 22: ರಾಜಧಾನಿ ಬೆಂಗಳೂರು ನಗರ ನಿವಾಸಿಗಳು ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಮಾರ್ಗ ಯಾವಾಗ ತೆರೆಯುತ್ತದೋ ಎಂದು ಕಾಯುತ್ತಿದ್ದಾರೆ. ಅವರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ಇಂದು ಮಂಗಳವಾರ (ಜುಲೈ 22)ರಿಂದ ಹಳದಿ ಮಾರ್ಗ ಪರಿಶೀಲನೆ ಮಾಡುತ್ತಿದ್ದಾರೆ. ಮೂರು ವರ್ಷಗಳ ನಿರಂತರ ಗಡುವು ಪಡೆದ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಎಂಡಿ ಹಾಗೂ ಟನಲ್ ರಸ್ತೆ ಯೋಜನೆ ವಿರುದ್ಧ ಸಂಸದ ಪಿ.ಸಿ.ಮೋಹನ್ ಅವರು ಅಸಮಾಧಾನ ಹೊರ ಹಾಕಿದ್ದಾರೆ.
ಆರ್.ವಿ.ರಸ್ತೆ-ಬೊಮ್ಮಸಂದ್ರ 19.15 ಕಿಲೋ ಮೀಟರ್ ಮೆಟ್ರೋ ಮೀ ಹಳದಿ ಮಾರ್ಗದ ಪರಿಶೀಲನೆ ಇಂದು ಆರಂಭವಾಗಿದೆ. ಇತ್ತೀಚೆಗೆ ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ಸರ್ಕಾರ ಮೆಟ್ರೋ ಪೂರೈಕೆಯಲ್ಲಿ ಮಧ್ಯ ಪ್ರವೇಶಿಸಬೇಕು. ಬೆಂಗಳೂರು ಮೆಟ್ರೋ ರೈಲು ಹಳದಿ ಮಾರ್ಗ ಆರಂಭಕ್ಕೆ CMRS ಅನುಮೋದನೆಗೆ ಅವರು ಆಗ್ರಹಿಸಿದ್ದರು.

ಇದರ ಬೆನ್ನಲ್ಲೆ BMRCL ಅಧಿಕಾರಿಗಳು ಹಾಗೂ ಸುರಕ್ಷತಾ ಆಯುಕ್ತರಿಂದ ತಪಾಸಣೆ ಆರಂಭವಾಗಿದೆ ಎಂದು ಪಿಸಿ ಮೋಹನ್ ಅವರು ತಿಳಿಸಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. BMRCL ತನ್ನ 2021 ರ ಗಡುವನ್ನು ಮೀರಿದೆ. ಅಲ್ಲಿಂದ 3 ವರ್ಷ ಕಳದಿದ್ದೇವೆ. ಆರ್‌ವಿ ರಸ್ತೆ-ಬೊಮ್ಮಸಂದ್ರದವರೆಗೆ 16 ನಿಲ್ದಾಣ ಹೊಂದಿರುವ ಮಾರ್ಗ ಬೆಂಗಳೂರು ಹೊರ ವರ್ತುಲ ರಸ್ತೆ (ORR) ಪ್ರಯಾಣಿಕರಿಗೆ ನಿರ್ಣಾಯಕವಾಗಿದೆ.
BMRCL ನಲ್ಲಿ ಕಳೆದ 22 ವರ್ಷಗಳಲ್ಲಿ 10 ಎಂಡಿಗಳು ನಿಯೋಜನೆಗೊಂಡಿದ್ದು, ಅವರು ಪ್ರಗತಿಯನ್ನು ನಿಧಾನಗೊಳಿಸಿದರು. ನಮ್ಮ ಮೆಟ್ರೋ ಸ್ಥಿರವಾಗಿ ಕಾರ್ಯ ಮಾಡುವ ಅಧಿಕಾರಿಗಳಿಗೆ ಅರ್ಹವಾಗಿದೆ. ಎರಡು ದಶಕದಲ್ಲಿ ಬೆಂಗಳೂರು ಮೆಟ್ರೋ ಜಾಲ 77 ಕಿ.ಮೀ. ವಿಸ್ತರಣೆ ಆಗಿದೆ. ಆದರೆ ದೆಹಲಿ ಮೆಟ್ರೋ ಜಾಲ ಬರೋಬ್ಬರಿ 395 ಕಿ.ಮೀ ಜಾಲ ವಿಸ್ತರಣೆ ಆಗಿದೆ. ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ಅವರು ವಿವರಿಸುವ ಮೂಲಕ BMRCL ವಿರುದ್ಧ ಕಿಡಿ ಕಾರಿದರು.

ಬಹುಮಾದರಿ ಸಾರಿಗೆಗೆ ಬೇಕು ಹೆಬ್ಬಾಳ ಭೂಮಿ
ಹೆಬ್ಬಾಳದಲ್ಲಿರುವ 45 ಎಕರೆ ಭೂಮಿ ಬಹು ಸಾರಿಗೆ ಮಾದರಿ ನಿರ್ಮಾಣಕ್ಕೆ (ನಮ್ಮ ಮೆಟ್ರೋ 2A, 2B, 3 & 3A) ಹಾಗೂ ಬೆಂಗಳೂರು ಉಪನಗರ ರೈಲು ಯೋಜನೆಗೆ ಅತ್ಯವಶ್ಯಕವಾಗಿದೆ. ಇಲ್ಲಿ ಸಾರಿಗೆ ಹಬ್ ನಿರ್ಮಾಣವಾದರೆ ಬೆಂಗಳೂರು ಸಂಚಾರಕ್ಕೆ ಕೊಡುಗೆ ನೀಡಬಹುದು. ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ 45 ಭೂಮಿ ನೀಡುವ ಕೆಲಸವಾಗಿಲ್ಲ. ಬದಲಾಗಿ ಖಾಸಗಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲವಾಗುವಂತೆ 45 ಎಕರೆಯಿಂದ 9 ಎಕರೆಗೆ ಇಳಿಸುವ ಪ್ರಕ್ರಿಯೆಯು ಬೆಂಗಳೂರಿನ ಭವಿಷ್ಯದ ಸಾರಿಗೆ ಪೆಟ್ಟು ನಿಡಲಿದೆ. ಚಲನಶೀಲತೆ ಕುಂಠಿತಗೊಳ್ಳಲಿದೆ. ಆದ್ದರಿಂದ ರಾಜ್ಯ ಸರ್ಕಾರ ರಿಯಲ್ ಎಸ್ಟೇಟ್ ಲಾಭಿಗೆ ಶರಣಾಗಬಾರದು ಎಂದು ಅವರು ಆಗ್ರಹಿಸಿದರು.
ಬೆಂಗಳೂರು ಸುರಂಗ ರಸ್ತೆ ಯೋಜನೆ
ತಜ್ಞರು ಹಾಗೂ ನಾವುಗಳು ಪದೇ ಪದೇ ಎಚ್ಚರಿಕೆ ನೀಡಿದ್ದರೂ, ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ₹17,780 ಕೋಟಿ ಸುರಂಗ ಯೋಜನೆ ಮುಂದುವರಿಸುತ್ತಿದೆ. ಯೋಜನೆಗೆ ಸಂಬಂಧಿಸಿದಂತೆ ಯಾವುದೇ ವಿಶ್ವಾಸಾರ್ಹ ಸಲಹೆಗಾರರು ಯೋಜನೆಯ ಅಧ್ಯಯನಕ್ಕೆ ಪ್ರತಿಕ್ರಿಯಿಸಿಲ್ಲ. ಸಕಾರಾತ್ಮಕ ಅಭಿಪ್ರಾಯ ಇಲ್ಲ ಮತ್ತು ವಿಶ್ವಾಸಾರ್ಹ ಗುತ್ತಿಗೆದಾರರು ಭಾಗವಹಿಸುತ್ತಿಲ್ಲ. ಹೀಗಿದ್ದರೂ ಕಳಪೆ ಸಮಗ್ರ ಯೋಜನಾ ವರದಿ (DPR) ಮೂಲಕ ಕಳಪೆ ಗುತ್ತಿಗೆದಾರಿಂದ ಯೋಜನೆ ಆರಂಭಿಸುವುದು ಕೆಟ್ಟ ಪರಿಣಾಮಗಳನ್ನು ತರುತ್ತದೆ ಎಂದು ಮತ್ತೊಮ್ಮ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications