6ವರ್ಷದ ಬಳಿಕ ಕಾವೇರಿ ತೊರೆಯುವ ಅನಿವಾರ್ಯತೆಯಲ್ಲಿ ಸಿದ್ದರಾಮಯ್ಯ
ಬೆಂಗಳೂರು, ಸೆ 28: ಕಳೆದ ಆರು ವರ್ಷಗಳಿಂದ ವಾಸವಾಗಿದ್ದ 'ಕಾವೇರಿ' ಬಂಗಲೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರವುಗೊಳಿಸಬೇಕಾಗಿದೆ.
ತಮ್ಮ ಸರಕಾರದ ಅವಧಿಯಲ್ಲಿ ಪರಮಾಪ್ತ ಕೆ.ಜೆ. ಜಾರ್ಜ್ ಅವರಿಗೆ ಈ ನಿವಾಸವನ್ನು ನೀಡಲಾಗಿತ್ತು. ಆದರೆ, ಇದು ಅದೃಷ್ಟದ ಮನೆಯೆಂದು ಸಿದ್ದರಾಮಯ್ಯನವರೇ ಇಲ್ಲಿ ವಾಸ್ತವ್ಯ ಹೂಡಿದ್ದರು.
ಈಗ, ಈ ಬಂಗಲೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.

ಸದ್ಯ, ಯಡಿಯೂರಪ್ಪನವರು ತಮ್ಮ ಡಾಲರ್ಸ್ ಕಾಲೋನಿಯಲ್ಲಿರುವ ಖಾಸಗಿ ಮನೆಯಲ್ಲಿ ವಾಸವಾಗಿದ್ದಾರೆ. ಕಾವೇರಿ ಬಂಗಲೆ ಸಿಎಂಗೆ ಹಂಚಿಕೆ ಆಗಿರುವುದರಿಂದ, ಇದನ್ನು ತೆರವುಗೊಳಿಸುವ ಅನಿವಾರ್ಯತೆಯಲ್ಲಿ ಸಿದ್ದರಾಮಯ್ಯ ಇದ್ದಾರೆ.
ಕಾವೇರಿ ನಿವಾಸಕ್ಕೆ ಮೊದಲು ರೇಸ್ ಕೋರ್ಸ್ ರಸ್ತೆಯಲ್ಲಿರುವ 'ರೇಸ್ ವ್ಯೂ ಕಾಟೇಜ್' ಅನ್ನು ಯಡಿಯೂರಪ್ಪನವರಿಗೆ ಹಂಚಿಕೆ ಮಾಡಲಾಗಿತ್ತು.
ಸಾರ್ವಜನಿಕರನ್ನು ಭೇಟಿಯಾಗಿ ಅಹವಾಲು ಸ್ವೀಕರಿಸಲು ಕಾವೇರಿ ನಿವಾಸ ಅನುಕೂಲವಾಗುವುದರಿಂದ, ಈ ಬಂಗಲೆಗೆ ಬರಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.












Click it and Unblock the Notifications