ಕೊಡಗು ಸಹಜ ಸ್ಥಿತಿಗೆ ಬರುವವರೆಗೂ ಸನ್ಮಾನ ಸ್ವೀಕರಿಸಲ್ಲ: ಎಚ್ಡಿಕೆ
Recommended Video

ಬೆಂಗಳೂರು, ಆಗಸ್ಟ್ 24: ಹತ್ತಾರು ಹಳ್ಳಿಗಳು, ನೂರಾರು ತೋಟಗಳು, ಸಾವಿರಾರು ಜಾನುವಾರುಗಳು ಸೇರಿದಂತೆ ಹಲವಾರು ಜನರ ಸಾವಿಗೆ ಕಾರಣವಾಗಿರುವ ಕಡಗು ಜಿಲ್ಲೆಯ ಭೀಕರ ದುರಂತ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಮೇಲೆ ಭಾರಿ ಪರಿಣಾಮ ಬೀರಿದೆ.
ಈ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯ ಮುಗಿಯುವ ತನಕ ಯಾವುದೇ ಸನ್ಮಾನಗಳನ್ನು ಸ್ವೀಕರಿಸದಿರಲು ನಿರ್ಧರಿಸಿದ್ದಾರೆ. ಕುಮಾರಸ್ವಾಮಿ ಭಾಗವಹಿಸುವ ಯಾವುದೇ ಸಭೆ, ಸಮಾರಂಭಗಳಲ್ಲಿ ಕಾರ್ಯಕರ್ತರು, ನಾಗರಿಕರು ಹಾಗೂ ಅಧಿಕಾರಿಗಳಿಂದ ಯಾವುದೇ ರೀತಿಯ ಹೂಗುಚ್ಛ, ಹೂಮಾಲೆ, ಶಾಲು ಹಣ್ಣು, ಹಂಪಲುಗಳನ್ನು ಸ್ವೀಕರಿಸದಿರಲು ನಿರ್ಧರಿಸಿದ್ದಾರೆ.
ಸಾರ್ವಜನಿಕರು ಮುಖ್ಯಮಂತ್ರಿಗಳಿಗೆ ಸನ್ಮಾನ ಮಾಡುವ ಬಯಕೆಯಿದ್ದರೆ ಅದೇ ಹಣವನ್ನು ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರ ನೆರವಿಗೆ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಪರಿಹಾರದ ನೆರವನ್ನು ಚೆಕ್ ಅಥವಾ ಡಿಡಿ ಮೂಲಕವೂ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕೊಡಗು ಮೊದಲಿನಂತಾಗುವವರೆಗೂ ಯಾವುದೇ ಸಭೆಯಲ್ಲಿ ಯಾವುದೇ ಸನ್ಮಾನವನ್ನು ಸ್ವೀಕರಿಸುವುದಿಲ್ಲ ಒತ್ತಾಯ ಪೂರ್ವಕವಾಗಿ ಯಾರೂ ಕೂಡ ಸನ್ಮಾನ ಮಾಡಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications