ಬೆಂಗಳೂರು ಅಭಿವೃದ್ಧಿಗೆ ಸಿದ್ದರಾಮಯ್ಯ ನೀಡಿದ ಭರವಸೆಗಳು
ಬೆಂಗಳೂರು, ಆಗಸ್ಟ್ 18 : ಹಲವಾರು ಭರವಸೆಗಳ ಬಿಬಿಎಂಪಿ ಚುನಾವಣಾ ಪ್ರಣಾಳಿಕೆಯನ್ನು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿತ್ತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಯ ಮುನ್ನೋಟ ಹೊಂದಿರುವ 'ಹೊಸ ದೃಷ್ಟಿ.. ಸೃಷ್ಟಿ' ಎನ್ನುವ ಭರವಸೆಯ ಕೈಪಿಡಿಯನ್ನು ಬಿಡುಗಡೆ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಪಿಡಿಯನ್ನು ಬಿಡುಗಡೆ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. [ಕಾಂಗ್ರೆಸ್ ಪ್ರಣಾಳಿಕೆಯಲ್ಲೇನಿದೆ?]

ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಸಿದ್ದರಾಮಯ್ಯ ಅವರು, 'ನಗರದ ಅಭಿವೃದ್ಧಿಗಾಗಿ ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಬಿಎಂಟಿಸಿ, ಜಲಮಂಡಳಿ, ಬೆಂಗಳೂರು ಪೊಲೀಸ್ ಸೇರಿದಂತೆ ಇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಮನ್ವಯ ಸಮಿತಿಯನ್ನು ರಚನೆ ಮಾಡಲಾಗುತ್ತದೆ' ಎಂದು ಹೇಳಿದರು. [ಬೆಂಗಳೂರು ಅಭಿವೃದ್ಧಿ ಮಾಡಿದವರಾರು, ಬಹಿರಂಗ ಚರ್ಚೆ?]
ಹೊಸ ದೃಷ್ಟಿ...ಸೃಷ್ಟಿ ಕೈಪಿಡಿಯಲ್ಲಿನ ಭರವಸೆಗಳು
* ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮ ಸಂಪರ್ಕಕ್ಕೆ 48 ಕಿ.ಮೀ.ಉದ್ದದ ಕಾರಿಡಾರ್ ನಿರ್ಮಾಣ
* ನಗರವನ್ನು ಕಸದಿಂದ ಮುಕ್ತಗೊಳಿಸಲು ಹೆಚ್ಚು ಸಂಸ್ಕರಣಾ ಕೇಂದ್ರ ಸ್ಥಾಪನೆ
* ನಗರದ ಕೆರೆಗಳ ಪುನಶ್ಚೇತನ, ತ್ಯಾಜ್ಯ ರಹಿತವಾದ ರಾಜಾ ಕಾಲುವೆಗಳ ನಿರ್ಮಾಣ
* ರಜಾ ದಿನಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ವಾಹನ ಸಂಚಾರ ನಿಷೇಧ
* ವಾರ್ಡ್‌ನಲ್ಲಿ ಸಂಗ್ರವಾಗುವ ಒಟ್ಟು ಆಸ್ತಿ ತೆರಿಗೆಯಲ್ಲಿ ಒಂದು ಭಾಗ ವಾರ್ಡ್ ಅಭಿವೃದ್ಧಿಗೆ ಬಳಕೆ
* ಶೇ 25ರಷ್ಟು ಬಸ್‌ಗಳ ಹೆಚ್ಚಳ, ಅಗತ್ಯವಿರುವ ಕಡೆ ಹೊಸ ಮಾರ್ಗ
* ಎಲ್ಲಾ ಕೊಳಗೇರಿಗಳಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ಸೌಲಭ್ಯ ಕಲ್ಪಿಸುವುದು
* ಆರ್ಥಿಕವಾಗಿ ದುರ್ಬಲರಾದವರಿಗೆ 3 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ
* ಬೆಂಗಳೂರು ಒನ್ ಕೇಂದ್ರಗಳ ಹೆಚ್ಚಳ, ಮತ್ತಷ್ಟು ಸೇವೆ ಬೆಂಗಳೂರು ಒನ್ ವ್ಯಾಪ್ತಿಗೆ ಸೇರ್ಪಡೆ
* ನಗರದಲ್ಲಿ ಸುರಕ್ಷತೆ ಕಾಪಾಡಲು ಸಿಸಿಟಿವಿ ಅಳವಡಿಕೆ, ಸಮುದಾಯ ಪೊಲೀಸಿಂಗ್‌ಗೆ ಆದ್ಯತೆ
* ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ ಎಸಗುವವರಿಗೆ ಕ್ಷಿಪ್ರಗತಿಯಲ್ಲಿ ಶಿಕ್ಷೆಯಾಗುವಂತೆ ಕ್ರಮ
* ಮೆಟ್ರೋ ಮೊದಲನೇ ಹಂತ 2016ರ ಮಾರ್ಚ್‌ಗೆ ಪೂರ್ಣ, 2ನೇ ಹಂತ ಮೂರು ವರ್ಷದಲ್ಲಿ ಪೂರ್ಣ
* 50 ಹೊಸ ಟೆಂಡರ್ ಶ್ಯೂರ್ ರಸ್ತೆ ನಿರ್ಮಾಣ












Click it and Unblock the Notifications