ಫಲಿತಾಂಶದ ಬಗ್ಗೆ ಆತಂಕ, ಮತ್ತೆ ಜ್ಯೋತಿಷಿಗಳ ಮೊರೆ ಹೋದ ಕುಮಾರಸ್ವಾಮಿ
Recommended Video
ಬೆಂಗಳೂರು, ಮೇ 10: ಹೋಮ, ಹವನ, ದೇವಸ್ಥಾನಗಳ ಭೇಟಿ ಬಳಿಕ ಇದೀಗ ಸಿಎಂ ಕುಮಾರಸ್ವಾಮಿ ಅವರು ಜ್ಯೋತಿಷಿಗಳ ಮೊರೆ ಹೋಗಿದ್ದಾರೆ. ಹೀಗೆ ಜ್ಯೋತಿಷಿಗಳ ಬಳಿ ಹೋಗುವುದು ಅವರಿಗೆ ಹೊಸದಲ್ಲದಿದ್ದರೂ ಲೋಕ ಫಲಿತಾಂಶ ಮುಂದಿದ್ದಾಗ ಮಾಡಿರುವ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಕುಮಾರಸ್ವಾಮಿ ಅವರು ಇಂದು ತಮ್ಮ ನಂಬಿಕೆಯ ಜ್ಯೋತಿಷಿ ದ್ವಾರಕನಾಥ ಅವರನ್ನು ಭೇಟಿ ಮಾಡಿದ್ದಾರೆ. ಬೆಳಿಗ್ಗೆ ಹೈಕೋರ್ಟ್ ಹೊಸ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರ ಪ್ರಮಾಣವಚನ ಕಾರ್ಯಕ್ರಮ ಮುಗಿಸಿ ಕೂಡಲೇ, ಆರ್.ಟಿ.ನಗರದಲ್ಲಿರುವ ದ್ವಾರಕಾನಾಥ್ ಅವರ ಮನೆಗೆ ಭೇಟಿ ನೀಡಿದರು.
ಮಂಡ್ಯ ಚುನಾವಣೆ ಬಗ್ಗೆ ಆತಂಕಗೊಂಡಿರುವ ಕುಮಾರಸ್ವಾಮಿ ಅವರು ಆ ಬಗ್ಗೆ ಮಾತನಾಡಲು, ಹಾಗೂ ಸರ್ಕಾರಕ್ಕೆ ಮತ್ತೆ ಅಸ್ಥಿರತೆಯ ಭೀತಿ ಉಂಟಾಗಿರುವ ಕಾರಣದಿಂದಾಗಿ ಕುಮಾರಸ್ವಾಮಿ ಅವರು ಅಚಾನಕ್ ಆಗಿ ಜ್ಯೋತಿಷಿಗಳನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಮಂಡ್ಯ ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸುವ ಮೊದಲೂ ಸಹ ಕುಮಾರಸ್ವಾಮಿ ಅವರು ದ್ವಾರಕಾನಾಥ್ ಅವರನ್ನು ಭೇಟಿಯಾಗಿದ್ದರು. ಅವರ ಸಲಹೆ ಪಡೆದ ನಂತರವೇ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿತ್ತು. ಆದರೆ ಅಲ್ಲಿ ಅವರಿಗೆ ಭಾರಿ ಪೈಪೋಟಿಯೇ ಎದುರಾಗಿತ್ತು.

ಈಗಾಗಲೇ ಇವಿಎಂನಲ್ಲಿ ಭವಿಷ್ಯ ಭದ್ರ
ಮೇ 23 ರಂದು ಫಲಿತಾಂಶ ಇದ್ದು, ಅಂದು ನಿಖಿಲ್ ಕುಮಾರಸ್ವಾಮಿ ಭವಿಷ್ಯ ನಿರ್ಧಾರವಾಗಲಿದೆ. ಆ ಬಗ್ಗೆಯೇ ಚರ್ಚಿಸಲು ಕುಮಾರಸ್ವಾಮಿ ಅವರು ದ್ವಾರಕಾನಾಥ್ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈಗಾಗಲೇ ಮಂಡ್ಯ ಕ್ಷೇತ್ರದ ಅಭ್ಯರ್ಥಿಗಳಾದ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅವರ ಭವಿಷ್ಯ ಇವಿಎಂ ಮಷೀನ್‌ಗಳಲ್ಲಿ ಭದ್ರವಾಗಿದೆ.

ಮಾಧ್ಯಮಗಳಿಗೆ ನಿಷೇಧ
ಕುಮಾರಸ್ವಾಮಿ ಅವರು ದ್ವಾರಕಾನಾಥ್ ಅವರ ಮನೆಗೆ ಭೇಟಿ ನೀಡಿದ ಸಂದರ್ಭ ಅದನ್ನು ಚಿತ್ರೀಕರಿಸಲು ಮುಂದಾದ ಮಾಧ್ಯಮಗಳಿಗೆ ಪೊಲೀಸರು ತಡೆ ಒಡ್ಡಿದ ಘಟನೆ ಸಹ ನಡೆದಿದೆ. ಈ ಸಂದರ್ಭ ಕೆಲವು ಪೊಲೀಸರು ಮತ್ತು ಮಾಧ್ಯಮದವರ ನಡುವೆ ಮಾತಿನ ಚಕಮಕಿ ನಡೆದಿದೆ.

ಕೆಲವು ದಿನಗಳ ಹಿಂದೆ ಹೋಮ, ಹವನ
ಕುಮಾರಸ್ವಾಮಿ ಅವರು ಕೆಲವು ದಿನಗಳ ಹಿಂದಷ್ಟೆ ಹಲವು ಹೋಮ ಹವನಗಳನ್ನು ಸಹ ನೆರವೇರಿಸಿದ್ದರು, ಈ ಹವನಗಳು ಸರ್ಕಾರದ ಉಳಿವು ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಜಯಕ್ಕಾಗಿ ಮಾಡಲಾಗಿದ್ದವು ಎಂದು ಹೇಳಲಾಗಿತ್ತು, ಅಂದೂ ಸಹ ಮಾಧ್ಯಮಗಳಿಗೆ ಪೂರ್ಣ ನಿರ್ಭಂದ ಹೇರಲಾಗಿತ್ತು.

ಫಲಿತಾಂಶದ ದಿನ ಹತ್ತಿರವಾದಷ್ಟೂ ಹೆಚ್ಚುತ್ತಿದೆ ಆತಂಕ
ಫಲಿತಾಂಶದ ದಿನ ಹತ್ತಿರವಾಗುತ್ತಿದ್ದಂತೆ ಸರ್ಕಾರಕ್ಕೆ ಅಸ್ಥಿರತೆಯ ಆತಂಕ ಹೆಚ್ಚಾಗುತ್ತಿದೆ. ಈ ನಡುವೆ ನಡೆದ ಕೆಲವು ಘಟನಾವಳಿಗಳು ಕುಮಾರಸ್ವಾಮಿ ಅವರಿಗೆ ಹೆಚ್ಚಿನ ಆತಂಕ ತಂದಿವೆ, ಜೊತೆಗೆ ಮಂಡ್ಯ ಲೋಕಸಭೆ ಚುನಾವಣೆ ಬಗ್ಗೆ ಬಂದಿರುವ ಗುಪ್ತಚರ ವರದಿಗಳು ಸಹ ಕುಮಾರಸ್ವಾಮಿ ಅವರ ನಿದ್ದೆಗೆಡಿಸಿವೆ ಎನ್ನಲಾಗಿದೆ. ಹಾಗಾಗಿ ಅವರು ಜ್ಯೋತಿಷಿಗಳ ಮೊರೆ ಹೋಗಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications