ಕರುಣಾನಿಧಿಯನ್ನು ಕಾಣಲು ಚೆನ್ನೈಗೆ ಹಾರಲಿದ್ದಾರೆ ಕುಮಾರಸ್ವಾಮಿ
ಬೆಂಗಳೂರು, ಜುಲೈ 02: ಅನಾರೋಗ್ಯದಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿಎಂಕೆ ನಾಯಕ ಕರುಣಾನಿಧಿಯನ್ನು ಕಾಣಲು ಕುಮಾರಸ್ವಾಮಿ ನಾಳೆ ಚೆನ್ನೈಗೆ ತೆರಳಲಿದ್ದಾರೆ.
ವಯೋಸಹಜ ಅನಾರೊಗ್ಯದಿಂದಾಗಿ ಕರುಣಾನಿಧಿ ಅವರು ಕಳೆದ ಕೆಲವು ದಿನಗಳಿಂದಲೂ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದು, ನಾಳೆ ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಲಿದ್ದಾರೆ.
ಕರುಣಾನಿಧಿ ಅವರನ್ನು ಹಲವು ದಿನಗಳಿಂದ ನಾಡಿನ ಹಲವು ರಾಜಕೀಯ ಮುಖಂಡರು ಭೇಟಿ ಆಗಿದ್ದಾರೆ. ಇತ್ತೀಚೆಗಷ್ಟೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಿದ್ದರು, ಅಂದೇ ರಜನೀಕಾಂತ್ ಸಹ ಭೇಟಿ ಮಾಡಿದ್ದರು.

ಕರುಣಾನಿಧಿ ಅವರ ಆರೋಗ್ಯ ಸಮಸ್ಥಿತಿಯಲ್ಲಿದೆ ಎಂದು ಡಿಎಂಕೆ ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿದೆ ಆದರೂ ಅವರನ್ನು ಇನ್ನೂ ತೀವ್ರ ನಿಗಾ ಘಟದಲ್ಲಿಯೇ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications