ಮೃತ ಪ್ರಶಿಕ್ಷಣಾರ್ಥಿ ಪಿಎಸ್‍ಐಗೆ ಸಹೋದ್ಯೋಗಿಗಳ ನೆರವು: ಎಚ್‌ಡಿಕೆ ಅಭಿನಂದನೆ
ಬೆಂಗಳೂರು, ಜನವರಿ 07: ಕಲಬುರಗಿ ಪೊಲೀಸ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿ ಬಸವರಾಜ ಶಂಕರಪ್ಪ ಮಂಚನೂರು ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಸಿಎಂ ಕುಮಾರಸ್ವಾಮಿ ಸರ್ಕಾರವು ನಿಯಮಾನುಸಾರ ನೀಡಬೇಕಾದ ಪರಿಹಾರಗಳನ್ನು ನೀಡುತ್ತದೆ ಎಂದರು.
ನಿಧನ ಹೊಂದಿದ ಪ್ರಶಿಕ್ಷಣಾರ್ಥಿ ಶಂಕರಪ್ಪ ಮಂಚನೂರು ಅವರ 590 ಸಹ ಪ್ರಶಿಕ್ಷಣಾರ್ಥಿಗಳು ತಲಾ 10 ಸಾವಿರ ರೂ. ಗಳಂತೆ ಮೃತರ ಕುಟುಂಬಕ್ಕೆ ನೆರವು ನೀಡಲು ಮುಂದಾಗಿರುವುದನ್ನು ಬಹುವಾಗಿ ಮೆಚ್ಚಿಕೊಂಡ ಕುಮಾರಸ್ವಾಮಿ ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ ಅಭಿನಂದಿಸಿದ್ದಾರೆ.
ಕಲಬುರಗಿ ಪೊಲೀಸ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳು ಬಸವರಾಜ ಮಂಚನೂರು ಅವರು ಆಕಸ್ಮಿಕ ನಿಧನರಾದ ಹಿನ್ನೆಲೆಯಲ್ಲಿ ತಮ್ಮ ಗೆಳೆಯನಿಗೆ ನೆರವಾಗಲು ಮುಂದೆ ಬಂದಿರುವ ವಿಷಯ ತಿಳಿದು ಹೃದಯ ತುಂಬಿ ಬಂತು. ಅವರ ಔದಾರ್ಯ ಇತರರಿಗೆ ಮಾದರಿಯಾದುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದಕ್ಕೆ ಪ್ರೇರಣೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್ ಹಾಗೂ ತಮ್ಮ ಗೆಳೆಯ ಸಾವಿಗೆ ಮನಮಿಡಿದು ಸ್ಪಂದಿಸಿದ ಎಲ್ಲ ಪ್ರಶಿಕ್ಷಣಾರ್ಥಿಗಳಿಗೆ ಮುಖ್ಯಮಂತ್ರಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ರಾಜ್ಯ ಸರ್ಕಾರವು ನಿಯಮಾನುಸಾರ ಬಸವರಾಜ ಅವರಿಗೆ ನೀಡಬೇಕಾದ ಪರಿಹಾರಗಳನ್ನು ತ್ವರಿತವಾಗಿ ನೀಡುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications