ಯೋಧ ಗುರುಗೆ ಎಚ್‌ಡಿಕೆ ಗೌರವ ಸಮರ್ಪಣೆ, ಹುಟ್ಟೂರಿನತ್ತ ಪಾರ್ಥಿವ ಶರೀರ

Recommended Video

      Pulwama : ಹುತಾತ್ಮರಾದ ಮಂಡ್ಯದ ಯೋಧ ಗುರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಎಚ್ ಡಿ ಕೆ|Oneindia Kannada

      ಬೆಂಗಳೂರು, ಫೆಬ್ರವರಿ 16: ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಎಚ್.ಗುರು ಅವರ ಪಾರ್ಥಿವ ಶರೀರ ಇಂದು ಮಧ್ಯಾಹ್ನ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

      ಗುರು ಅವರ ಪಾರ್ಥಿವ ಶರೀರಕ್ಕೆ ಹೂಗುಚ್ಚ ಅರ್ಪಿಸುವ ಮೂಲಕ ಸಿಎಂ ಕುಮಾರಸ್ವಾಮಿ ಅವರು ಗೌರವ ಸಮರ್ಪಣೆ ಮಾಡಿದರು. ಸಂಪುಟದ ಇನ್ನೂ ಕೆಲವು ಮಂತ್ರಿಗಳು ಗೌರವ ಸಮರ್ಪಣೆ ಮಾಡಿದರು.

      ನಂತರ ಗುರು ಅರ ಪಾರ್ಥಿವ ಶರೀರವನ್ನು ಹೂಗಳಿಂದ ಅಲಂಕೃತ ಸೇನಾ ವಾಹನದಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಂಡ್ಯದತ್ತ ತೆಗೆದುಕೊಂಡು ಹೋಗಲಾಗುತ್ತಿದೆ.

      CM HD Kumaraswamy pays tribute to CRPF personnel H. Guru

      ಗುರು ಅವರ ಪಾರ್ಥಿವ ಶರೀರ ಹೋಗುತ್ತಿರುವ ದಾರಿಯುದ್ದಕ್ಕೂ ಸಾರ್ವಜನಿಕರು ನಿಂತು ಗೌರವ ಸಮರ್ಪಣೆ ಮಾಡುತ್ತಿದ್ದಾರೆ. ಕೆಲವರು ಸೇನಾ ವಾಹನದ ಮೇಲೆ ಹೂವು ಚೆಲ್ಲುತ್ತಿದ್ದಾರೆ.

      ಮಂಡ್ಯದ ಮದ್ದೂರು ತಾಲ್ಲೂಕಿನ ಗುಡಿಗೆರೆ ಗ್ರಾಮದಲ್ಲಿ ಸಂಜೆ ವೇಳೆಗೆ ಯೋಧ ಗುರು ಅವರ ಅಂತಿಮ ಸಂಸ್ಕಾರ ನಡೆಯಲಿದ್ದು, ಕೇಂದ್ರ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಭಾಗವಹಿಸುವ ನಿರೀಕ್ಷೆ ಇದೆ. ವಿರೋಧ ಪಕ್ಷ ನಾಯಕ ಯಡಿಯೂರಪ್ಪ, ಸರ್ಕಾರದ ಹಲವು ಮಂತ್ರಿಗಳು, ಸಿದ್ದರಾಮಯ್ಯ ಸಹ ಭಾಗವಹಿಸುವ ಸಾಧ್ಯತೆ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+