ಲಾಕ್‌ಡೌನ್ : ಕ್ಷೌರಿಕರ ಸಂಕಷ್ಟಕ್ಕೆ ಮಿಡಿದ ಯಡಿಯೂರಪ್ಪ
ಬೆಂಗಳೂರು, ಮೇ 6: ಕೊರೊನಾ ಹಾವಳಿಯಿಂದಾಗಿ ಕಳದ 45 ದಿನಗಳಿಂದ ಲಾಕ್‌ಡೌನ್ ಜಾರಿಯಾಗಿತ್ತು. ಸಮಾಜದಲ್ಲಿ ಇದರಿಂದ ಎಲ್ಲ ವರ್ಗದವರಿಗೂ ಬಿಸಿ ತಟ್ಟಿದೆ. ಅದರಲ್ಲೂ ಅಂದು ಕೆಲಸ ಮಾಡಿದರೆ ಮಾತ್ರ ಊಟ ಎನ್ನುವಂತೆ ಇರುವ ಕ್ಷೌರಿಕರ ವೃತ್ತಿಯಲ್ಲಿ ಇರುವವರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಲಾಕ್‌ಡೌನ್‌ನಿಂದ ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿರುವ ಎಲ್ಲ ವರ್ಗದ ಜನರ ನೆರವಿಗೆ ಕರ್ನಾಟಕ ಸರಕಾರ ಸ್ಪಂದಿಸಿದ್ದು 1,610 ಕೋಟಿ ರೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಇದರಲ್ಲಿ ಕ್ಷೌರಿಕಕರಿಗೂ ನೆರವು ನೀಡುವುದಾಗಿ ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಸುಮಾರು 2,30,000 ಕ್ಷೌರಿಕ ವೃತ್ತಿಯಲ್ಲಿ ಇದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದ್ದು, ಇವರಿಗೆ ಕೊರೊನಾ ಸಂಕಷ್ಟ ಪರಿಹಾರವಾಗಿ 5,000 ರೂ.ಗಳನ್ನು (ಒಂದು ಬಾರಿ ಮಾತ್ರ) ಸರಕಾರ ಘೋಷಣೆ ಮಾಡಿದೆ.

ರಾಜ್ಯದ ಆರ್ಥಿಕ ಸ್ಥಿತಿಗತಿ ಉತ್ತಮ ಇಲ್ಲದೇ ಇದ್ದರೂ ರೈತರು ಹಾಗೂ ಸಣ್ಣ ಪುಟ್ಟ ಉದ್ಯೋಗಸ್ಥರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ 1,610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.












Click it and Unblock the Notifications