ಪ್ರದೀಪ್ ಸಾವು: ಶಾಸಕರು ಆರೋಪ ಮುಕ್ತರಾಗಲಿ: ಸಿಎಂ ಆಶಯ
ಬೆಂಗಳೂರು, ಜನವರಿ 02: ಬೆಂಗಳೂರಿನಲ್ಲಿ ಉದ್ಯಮಿ ಪ್ರದೀಪ್ ಅವರ ಸಾವು ನಾಗರಿಕ ವಿವಾದವಾಗಿದೆ. ಈ ಪ್ರಕರಣದಲ್ಲಿ ಶಾಕಸರು ಭಾಗಿಯಾಗಿಲ್ಲ. ಪೊಲೀಸರು ಪ್ರಕರಣ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉದ್ಯಮಿ ಸಾವಿನ ಪ್ರಕರಣ ನಾಗರಿಕ ವಿವಾದವಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಲಿದ್ದಾರೆ. ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಶಾಸಕ ಅರವಿಂದ್ ಲಿಂಬಾವಳಿ ಅವರು ಆರೋಪ ಮುಕ್ತರಾಗಲಿ ಎಂದು ಅವರು ಆಶಿಸಿದರು.
ಬೆಂಗಳೂರು ಮೂಲದ ಉದ್ಯಮಿ ಪ್ರದೀಪ್ (47) ಎಂಬುವವರು ಹಣಕಾಸಿನ ತೊಂದರೆಯಿಂದ ಭಾನುವಾರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿದ್ದು, ಅದರಲ್ಲಿ ಅವರು, ಶಾಸಕ ಲಿಂಬಾವಳಿ ಸೇರಿದಂತೆ ಆರು ಜನರ ಹೆಸರನ್ನು ಉಲ್ಲೇಖಿಸಿದ್ದಾರೆ.

ಇಷ್ಟು ಜನರು ನನ್ನ ಆತ್ಮಹತ್ಯೆಗೆ ನಿರ್ಧಾರಕ್ಕೆ ಪ್ರಚೋದಿಸಿದ್ದಾರೆ ಎಂದು ಶಾಸಕರ ಜೊತೆಗೆ ಜಯರಾಮ ರೆಡ್ಡಿ, ಜಿ ರಮೇಶ್ ರೆಡ್ಡಿ, ರಾಘವ ಭಟ್, ಗೋಪಿ.ಕೆ ಮತ್ತು ಸೋಮಯ್ಯ.ಕೆ ಎಂಬುವರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ಬಳಿಕ ಮೃತ ಉದ್ಯಮಿ ಪತ್ನಿ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಏನಿದು ಪ್ರಕರಣ?
ಉದ್ಯಮಿ ಪ್ರದೀಪ್ ಎಂಬಾತ ಎಚ್‌ಎಸ್‌ಆರ್ ಬಡಾವಣೆಯ ಅಮಲೀಪುರದ ನಿವಾಸಿ. ಅವರು ಕನಕಪುರ ರಸ್ತೆಯ ನೆಟ್ಟಗೆರೆ ಬಳಿ ರೆಸಾರ್ಟ್‌ನಲ್ಲಿ ಭಾನುವಾರ ಸಂಜೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತರ ಪತ್ನಿ ದೂರು ನೀಡಿದ್ದಾರೆ. ದೂರಿನಲ್ಲಿ ಪತ್ನಿ, ನನ್ನ ಪತಿ ಈ ಹಿಂದೆ ಹಲವಾರು ವ್ಯಾಪಾರಗಳಲ್ಲಿ ಹಣ ಹೂಡಿಕೆ ಮಾಡಿದ್ದರು. ಹಣಕಾಸಿನ ವಿಚಾರದಲ್ಲಿ ತುಸು ನಷ್ಟು ಅನುಭವಿಸಿದ್ದರು. ಕೆಲವರು ಬರಬೇಕಾದ ಹಣ ಬಂದಿರಲಿಲ್ಲ. ಆದ್ದರಿಂದ ಪತಿ ಸಾವಿಗೆ ನ್ಯಾಯ ಕೊಡಿಸುವಂತೆ ಪತ್ನಿ ಪೊಲೀಸ್ ಬಳಿ ಮನವಿ ಮಾಡಿದ್ದಾರೆ.











Click it and Unblock the Notifications