ಸಿಎಂ ಯಡಿಯೂರಪ್ಪ ಬೆಂಗಾವಲು ವಾಹನ ಸರಣಿ ಅಪಘಾತ
ಬೆಂಗಳೂರು, ಡಿಸೆಂಬರ್ 31: ತುಮಕೂರಿಗೆ ತೆರಳುತ್ತಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಬೆಂಗಾವಲು ಪಡೆ ವಾಹನ ಇನ್ನೋವಾ ಕಾರ್ ಯಶವಂತಪುರ ಪ್ಲೈ ಓವರ್ ಬಳಿ ಇಂದು ಬೆಳಿಗ್ಗೆ ಅಪಘಾತಕ್ಕೆ ತುತ್ತಾಗಿದೆ. ಬೆಂಗಾವಲು ಪಡೆಯಲ್ಲಿ ಕೊನೆಗೆ ತೆರಳುತ್ತಿದ್ದ ಕೊನೆ ವಾಹನ ಅಪಘಾತಕ್ಕೀಡಾಗಿದೆ.
ಯಶವಂತಪುರ ಫ್ಲೈ ಓವರ್ ಮೇಲೆ ನಿಯಂತ್ರಣ ತಪ್ಪಿದ ಸಿಎಂ ಬೆಂಗಾವಲು ಪಡೆಯ ಕೊನೆಯ ವಾಹನ ಆಟೋ ಒಂದಕ್ಕೆ ಡಿಕ್ಕಿ ಹೊಡೆದು, ಎದುರಿಗೆ ಬರುತ್ತಿದ್ದ ಕ್ಯಾಂಟರ್‌ಗೂ ಡಿಕ್ಕಿ ಹೊಡೆದಿದೆ. ಸಿಎಂ ಬೆಂಗಾವಲು ಪಡೆಯ ಕೊನೆಯ ವಾಹನವಾದ ಕಾರಣ ಸಿಎಂಗೆ ಯಾವುದೇ ರೀತಿಯ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಘಟಿಸಿದೆ ಎಂದು ತಿಳಿದು ಬಂದಿದೆ. ಅಪಘಾತಕ್ಕೆ ತುತ್ತಾದ ಇನ್ನೋವಾ ವಾಹನದಲ್ಲಿ ಸಿಎಂ ಕಾರ್ಯದರ್ಶಿ ಸೆಲ್ವಕುಮಾರ್ ಪ್ರಯಾಣಿಸಬೇಕಿತ್ತು, ಆದರೆ ಅವರು ಸಿಎಂ ಕಾರ್ ನಲ್ಲಿ ಪ್ರಯಾಣಿಸಿದ್ದರು. ಘಟನೆಯಲ್ಲಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ಅಪಘಾತದಲ್ಲಿ ಆಟೋ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು ಯಶವಂತಪುರ ಫ್ಲೈ ಓವರ್ ಹಾಗೂ ಯಶವಂತಪುರ ವೃತ್ತದಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.












Click it and Unblock the Notifications