ಬಿಎಸ್ ವೈ ಮಾಜಿ ಆಪ್ತ ಧನಂಜಯ ಕುಮಾರ್ ಕಾಂಗ್ರೆಸ್ ಸೇರ್ಪಡೆ?
ಕಾಂಗ್ರೆಸ್ ಸೇರ್ಪಡೆಗೊಳ್ಳಲು ಧನಂಜಯ ಕುಮಾರ್ ನಿರ್ಧಾರ ಎಂದ ಮೂಲಗಳು. ಒಂದು ಕಾಲದಲ್ಲಿ ಬಿಎಸ್ ಯಡಿಯೂರಪ್ಪ ಆಪ್ತರಾಗಿದ್ದ ಧನಂಜಯ ಕುಮಾರ್. ಮೊದಲು ಬಿಜೆಪಿಯಲ್ಲಿದ್ದ ಧನಂಜಯ ಕುಮಾರ್ ಆನಂತರ ಬಿಜೆಪಿ ತೊರೆದು ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದರು. ಇದ
ಬೆಂಗಳೂರು, ಜುಲೈ 21: ಒಂದು ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತರಾಗಿದ್ದ ಧನಂಜಯ ಕುಮಾರ್, ಇದೀಗ ಕಾಂಗ್ರೆಸ್ ಪಕ್ಷಕ್ಕೆ ಹಾರಿದ್ದಾರೆಂದು ಕೆಲ ಸುದ್ದಿ ಮಾಧ್ಯಮಗಳು ತಿಳಿಸಿವೆ.
ಈ ಹಿಂದೆ, ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದ ಅವರು ಈಗ ಕಾಂಗ್ರೆಸ್ ಪಾಳಯಕ್ಕೆ ಲಗ್ಗೆ ಹಾಕಿದ್ದಾರೆಂದು ಹೇಳಲಾಗಿದೆ.

ಇತ್ತೀಚೆಗೆ, ನವದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ, ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದಾರೆ ಧನಂಜಯ್. ರಾಹುಲ್ ಗಾಂಧಿಯವರೂ ಧನಂಜಯ್ ಅವರ ಕಾಂಗ್ರೆಸ್ ಸೇರ್ಪಡೆಗೆ ಸಮ್ಮತಿಸಿದ್ದಾರೆಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ, ಧನಂಜಯ ಕುಮಾರ್ ಅವರು ಕಾಂಗ್ರೆಸ್ ಪಾಳಯಕ್ಕೆ ಆಗಮಿಸಲಿದ್ದಾರೆಂದು ಹೇಳಲಾಗಿದೆ.












Click it and Unblock the Notifications