ತ್ಯಾಜ್ಯ ತುಂಬಿದ ಬೆಂಗಳೂರು ಕೆರೆಗಳ ಕ್ಲೀನಿಂಗ್: NAL ಹೊಸ ಐಡಿಯಾ!
ಬೆಂಗಳೂರು, ಆಗಸ್ಟ್ 4: ಬೆಂಗಳೂರಿನಲ್ಲಿ ಕಲುಷಿತಗೊಳ್ಳುತ್ತಿರುವ ಕೆರೆ ವಿಚಾರವಾಗಿ ಆಗಾಗ ಪರಿಸರ ಪ್ರೇಮಿಗಳು ಬಿಬಿಎಂಪಿಯನ್ನು ತರಾಟೆಗೆ ತೆಗೆದು ಕೊಳ್ಳುತ್ತಿರುತ್ತಾರೆ. ಬೆಂಗಳೂರಿನ ಕೆರೆಗಳ ಮೇಲೆ ಒಂದಲ್ಲ ಎರಡಲ್ಲ ರಾಶಿ ರಾಶಿ ಕಂಪ್ಲೇಂಟ್ ಗಳು ಬರುತ್ತಲೇ ಇರುತ್ತದೆ.
ಕೆರೆಗಳು ಕ್ಲೀನ್ ಇಲ್ಲದೇ ಇರುವುದರಿಂದ ಮೀನುಗಳ ಮಾರಣ ಹೋಮ ಆಗುತ್ತಿದೆ ಅಂತ ಆಗಾಗ ಉದಾಹರಣೆ ಸಮೇತ ಪರಿಸರ ಪ್ರೇಮಿಗಳು ನಿಗಿ ನಿಗಿ ಕೆಂಡವಾಗದ ಉದಾಹರಣೆಗಳಿವೆ. ಸದ್ಯ ಈ ಎಲ್ಲಾ ಸಮಸ್ಯೆಗೆ ಈಗ ಎನ್.ಎ.ಎಲ್ (National Aerospace Laboratories) ಪರಿಹಾರ ಕಂಡು ಹಿಡಿದಿದೆ.

ನೀತಿ ಆಯೋಗದ ಸದಸ್ಯ ಡಾ. ವಿ.ಕೆ ಸರಸ್ವತ್ ಅವರ ಉಪಸ್ಥಿತಿಯಲ್ಲಿ ಕಂಡು ಹಿಡಿದಿರುವ ಈ ಬ್ಯೂಟಿಫುಲ್ ಪ್ರೊಡಕ್ಟ್ 'ಜಲ್ ದೋಸ್ತ್' (ಕನ್ನಡದಲ್ಲಿ ಜಲಮಿತ್ರ) ಲಾಂಚ್ ಆಗಿದೆ. ಇದು ಹಲವು ಕೆರೆಗಳ ಅಭಿವೃದ್ಧಿಗೆ ಸಹಕಾರಿ ಕೂಡ ಆಗಲಿದೆ. ಕೆರೆಗಳ ಒಳಗೆ ಹೋಗಿ ಕೆರೆಗಳ ಕಸ ಕಡ್ಡಿ ತೆಗೆಯಲು ಪ್ಲಾಸ್ಟಿಕ್ ಮತ್ತು ಮಲಿನ ಮುಕ್ತ ಮಾಡಲು ಮಾಡಲು ಇದು ಸಹಕಾರಿ ಆಗಲಿದೆ.
ಇನ್ನೂ ಈ ಜಲಮಿತ್ರ ನೀರಿನಲ್ಲಿ ಸ್ಪೀಡ್ ಆಗಿ ರನ್ ಆಗಲು ಅನುಕೂಲಕ್ಕೆ ತಕ್ಕಂತೆ ಇದರಲ್ಲಿ ಪ್ರೋಪೆಲರ್ ಕೂಡ ಅಳವಡಿಕೆ ಮಾಡಲಾಗಿದೆ. ಯಾರಿಗಾದರೂ ಅವಶ್ಯಕತೆ ಇದ್ದರೆ ಈ ಜಲಮಿತ್ರನನ್ನ NAL ವತಿಯಿಂದ ಮಾರಾಟ ಕೂಡ ಮಾಡಲಾಗುತ್ತದೆ. ಸುಮಾರು 80ರಿಂದ 90 ಲಕ್ಷ ರೂಪಾಯಿ ವರೆಗೆ ಇದರ ಬೆಲೆ ಇರಲಿದೆ. ಸುಮಾರು 2 ತಿಂಗಳು ಅವಧಿ ಒಳಗಡೆ ಜಲಮಿತ್ರ ರೆಡಿ ಮಾಡಿ ಕೊಡಲಾಗುತ್ತದೆ..
ಈಗಾಗಲೇ ಬಿಬಿಎಂಪಿ ಅಧಿಕಾರಿಗಳ ಜೊತೆ ಕೂಡ ಒಂದು ಸುತ್ತಿನ ಮಾತು ಕತೆಯನ್ನ NAL ಟೀಮ್ ಮಾಡಿದ್ದು ಬಿಬಿಎಂಪಿ ಅಧಿಕಾರಿಗಳು ಕೂಡ ಇದರ ಖರೀದಿ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನೂ ಈ ಜಲ್ ದೋಸ್ತ್ ವೆಹಿಕಲ್ ಹೇಗೆ ರನ್ ಆಗುತ್ತೆ ಅಂತ ನೋಡುವುದಾದರೆ, ಬೋಟ್ ಹೊಂದಿರುವ ಈ ಜಲ್ ದೋಸ್ತ್ ನೀರಿನ ಒಳಗೆ ಬೋಟ್ ಮುಖಾಂತರ ಮೊದಲು ಎಂಟ್ರಿ ಕೊಡುತ್ತೆ.

ಇ- ವೆಹಿಕಲ್ ಇರುವ ಚೋಪರ್
ನೀರಿನಲ್ಲಿರುವ ಕಸ ಕಡ್ಡಿ ಪ್ಲಾಸ್ಟಿಕ್, ತುಂಬಿ ಕೊಂಡಿರುವ ಎಲೆಗಳು ಸಂಪೂರ್ಣವಾಗಿ ಇ- ವೆಹಿಕಲ್ ಇರುವ ಚೋಪರ್ ಮೂಲಕ ಮೊದಲು ಕಟ್ ಮಾಡಲಾಗುತ್ತೆ. ಬಳಿಕ ಅದನ್ನ ವೆಹಿಕಲ್ ಒಳಗೆ ತೆಗೆದು ಕೊಂಡು ಸುಮಾರು 5 ಟನ್ ಅಷ್ಟು ವೆಹಿಕಲ್ ಅಲ್ಲಿ ಲೋಡ್ ಮಾಡುವ ಕೆಪಾಸಿಟಿ ಹೊಂದಿದೆ. ಬಳಿಕ ಅದನ್ನ ಅನ್ಲೋಡ್ ಮಾಡಲಾಗುತ್ತದೆ.
ಕೇಂದ್ರ ಸರ್ಕಾರದ ಒನ್ ವೀಕ್ ಒನ್ ಲ್ಯಾಬ್
ಕೇಂದ್ರ ಸರ್ಕಾರದ ಒನ್ ವೀಕ್ ಒನ್ ಲ್ಯಾಬ್ ಕಾರ್ಯಕ್ರಮದ ಅಂಗವಾಗಿ NAL ಈ ಜಲ್ ದೋಸ್ತ್ ಅನ್ನ ಕಂಡು ಹಿಡಿದಿದ್ದು ಈಗಾಗಲೇ ಹಲವು ಕಡೆ ಪ್ರಯೋಗ ಕೂಡ ಮಾಡಲಾಗಿದೆ. ಪ್ರಯೋಗದಲ್ಲಿ ಯಶಸ್ವಿ ಆದ ಬೆನ್ನಲ್ಲೇ ಈಗ ಮಾರುಕಟ್ಟೆಗೆ ಜಲ್ ದೋಸ್ತ್ ಅನ್ನ NAL ಪರಿಚಯಿಸಿದೆ. ಸದ್ಯ ಹಲವು ಪರಿಸರ ಪ್ರೇಮಿಗಳು ಈ ಪ್ರಕೃತಿ ಸ್ನೇಹಿ ಜಲಮಿತ್ರನ ಎಂಟ್ರಿಗೆ ಸಂತಸ ವ್ಯಕ್ತ ಪಡಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅಳವಡಿಕೆ ಮಾಡಿಕೊಳ್ಳುವಂತೆ ಅಧಿಕಾರಿಗಳ ಬಳಿ ಪರಿಸರ ಪ್ರೇಮಿಗಳು ಒತ್ತಾಯ ಮಾಡಿದ್ದಾರೆ.
ಒಟ್ಟಿನಲ್ಲಿ ಪ್ರಶಾಂತವಾಗಿ ಹರಿಯಬೇಕಿದ್ದ ಸೌಮ್ಯವಾದ ಕೆರೆ ಬೇಡದ ತ್ಯಾಜ್ಯಗಳಿಂದ ತುಂಬಿ ಕಲುಷಿತವಾಗಿ ನಗರದ ಬಹುತೇಕ ಕಡೆ ದುರ್ನಾತ ದಿಂದ ಕೂಡಿ ಹೋಗಿದೆ. ಇವುಗಳ ಮಲಿನ ಮುಕ್ತ ಮಾಡಲು ಈ ಜಲ ಮಿತ್ರ ಸಹಕಾರಿ ಆಗಲಿದ್ದಾನೆ ಅನ್ನೋದು ಬಹುತೇಕರ ಅಭಿಪ್ರಾಯ.












Click it and Unblock the Notifications