ಏಳು ವರ್ಷ ಹಳೆಯ ಪ್ರಕರಣ ಸಂಬಂಧ ಈಶ್ವರಪ್ಪ ವಿರುದ್ಧ ವಾರೆಂಟ್‌

ಬೆಂಗಳೂರು, ಅಕ್ಟೋಬರ್ 29: ಉಪಚುನಾವಣೆ ಭರಾಟೆಯಲ್ಲಿರುವ ರಾಜ್ಯ ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅವರಿಗೆ ಸಂಕಷ್ಟವೊಂದು ಎದುರಾಗಿದೆ.

2011ರ ಪ್ರಕರಣವೊಂದಕ್ಕೆ ಸಬಂಧಿಸಿದಂತೆ ಈಶ್ವರಪ್ಪ ಅವರ ಮೇಲೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಅವರೇ ಖುದ್ದಾಗಿ ಮತ್ತು ಕಡ್ಡಾಯವಾಗಿ ನ್ಯಾಯಾಲಯದ ಮುಂದೆ ಹಾಜರಾಗಿ ವಾರೆಂಟ್‌ಗೆ ಉತ್ತರ ನೀಡಬೇಕಾಗುವ ಸಾಧ್ಯತೆ ಇದೆ.

2011 ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ಈಶ್ವರಪ್ಪ ಅವರು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದರು ಅದನ್ನು ಪ್ರಶ್ನಿಸಿ ವಕೀಲ ಧರ್ಮಪಾಲ ಎಂಬುವರು ನಗರದ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

City civil court issued warrant against BJP leader KS Eshwarappa

ಈ ವರ್ಷಗಳ ಸಮಯದಲ್ಲಿ ಹಲವಾರು ಬಾರಿ ಈಶ್ವರಪ್ಪ ಅವರಿಗೆ ನೊಟೀಸ್ ಕಳಿಸಿದ್ದರೂ ಸಹ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ ಹಾಗಾಗಿ ಸಿಟಿ ಸಿವಿಲ್ ಕೋರ್ಟ್‌ನ ವಿಶೇಷ ನ್ಯಾಯಾಲಯ ಈಗ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

ವಾರೆಂಟ್ ಹೊರಡಿಸಿರುವ ಕಾರಣ ಈಶ್ವರಪ್ಪ ಅವರು ವಾರೆಂಟ್‌ನಲ್ಲಿ ಉಲ್ಲೇಖಿತ ದಿನದಲ್ಲಿ ತಾವೇ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಬೇಕಿದೆ. ವಾರೆಂಟ್‌ಗೂ ಉತ್ತರ ನೀಡದಿದ್ದಲ್ಲಿ ಬಂಧಿಸುವ ಅವಕಾಶವೂ ಇದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+