ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಬಗ್ಗೆ ಯಾರಿಗೂ ಗೊತ್ತಿಲ್ಲದ ಸಂಗತಿ?

ಬೆಂಗಳೂರು, ಡಿಸೆಂಬರ್, 16: ಆತ್ಮಹತ್ಯೆಗೆ ಶರಣಾಗಿರುವ ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಎಂಬ ಅಧಿಕಾರಿಯ ಹೃದಯದಲ್ಲಿ ಯಾರಿಗೂ ಗೊತ್ತಾಗದ ಶ್ರೀಮಂತಿಕೆ ಇತ್ತು ! ಲಕ್ಷ್ಮೀ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಗಣಿತ ಪಾಠ ಮಾಡಿ ವಿದ್ಯಾರ್ಥಿಯಾಗಿದ್ದಾಗಲೇ ನೆಚ್ಚಿನ ಶಿಕ್ಷಕಿ ಅನಿಸಿಕೊಂಡಿದ್ದರು. ಮಿಗಿಲಾಗಿ ಲಕ್ಷ್ಮೀ ಅತ್ಯದ್ಬುತ ಪೇಂಟಿಗ್ ಕಲಾವಿದೆ !

ಹೌದು. ಆತ್ಮಹತ್ಯೆಗೆ ಶರಣಾಗಿರುವ ಲಕ್ಷ್ಮೀ ಚಿಕ್ಕಂದಿನಿಂದಲೂ ಬುದ್ಧಿವಂತೆ. ವ್ಯಾಸಂಗದ ಅವಧಿಯಲ್ಲಿ ಎಷ್ಟೋ ಮಕ್ಕಳಿಗೆ ಗಣಿತ ಪಾಠ ಹೇಳಿಕೊಡುತ್ತಿದ್ದಳು. ಗಣಿತವನ್ನು ಲಕ್ಷ್ಮೀ ಯಷ್ಟು ಸರಳವಾಗಿ ಯಾರೂ ಹೇಳಿ ಕೊಡುತ್ತಿರಲಿಲ್ಲ. ಚಿಕ್ಕಮಗಳೂರಿನಲ್ಲಿ ಓದುವಾಗ ಅನೇಕ ವಿದ್ಯಾರ್ಥಿಗಳಿಗೆ ಗಣಿತ ಪಾಠ ಹೇಳಿಕೊಟ್ಟು ನೆಚ್ಚಿನ ಶಿಕ್ಷಕಿಯಾಗಿದ್ದರು ಎಂದು ಲಕ್ಷ್ಮೀ ಸಹೋದರಿಯಂತಿದ್ದ ಸ್ನೇಹಿತೆ ತಿಳಿಸಿದ್ದಾರೆ.

ಲಕ್ಷ್ಮೀ ಚಿಕ್ಕಂದಿನಿಂದಲೂ ಪೇಟಿಂಗ್ ಮಾಡುತ್ತಿದ್ದರು. ಅವರ ವಾಲ್ ಪೇಂಟಿಂಗ್ಸ್ ಮಾರಾಟವಾಗುತ್ತಿದ್ದವು. ಎಷ್ಟೋ ಪೇಂಟಿಂಗ್ಸ್ ಲಕ್ಷಾಂತರ ರೂಪಾಯಿಗೆ ಮರಾಟವಾಗಿವೆ. ಅಷ್ಟರ ಮಟ್ಟಿಗೆ ಕಲೆಯಲ್ಲಿ ಕೂಡ ತೊಡಗಿಸಿಕೊಂಡಿದ್ದರು. ಯಾರಿಗೂ ಯಾವತ್ತೂ ನೋವು ಉಂಟು ಮಾಡಿಲ್ಲ. ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವಾಗ ಬಿದ್ದಿದ್ದರು.

CID Dysp lakshmi best Artist

ಅವಾಗ ಮೊಣಕಾಲಿಗೆ ತುಂಬಾ ಪೆಟ್ಟಾಗಿತ್ತು. ಏನೂ ಆಗಿಲ್ಲ ಎಂಬ ಭಾವನೆಯಿಂದಲೇ ಸುಮ್ಮನಾಗಿದ್ದಳು. ಆ ನೋವು ಇತ್ತೀಚೆಗೆ ಕಾಣಿಸಿಕೊಂಡಿತ್ತು. ನಾಲ್ಕು ತಿಂಗಳ ಹಿಂದೆ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಲಕ್ಷ್ಮೀ ಅವಾಗಲೂ ಕಾಲು ಜಾರಿ ಬಿದ್ದಿದ್ದರು. ಪುನಃ 21 ದಿನ ವಿಶ್ರಾಂತಿ ಪಡೆಯಬೇಕಿತ್ತು. ಹೀಗಾಗಿ ಸಿಐಡಿಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ದಿನ ರಜೆ ಮೇಲೆ ಹೋಗಿದ್ದರು. ಮೊಣಕಾಲು ಶಸ್ತ್ರ ಚಿಕಿತ್ಸೆ ಬಳಿಕ ಅಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದರು.

ಲಕ್ಷ್ಮೀ ತುಂಬಾ ಬುದ್ಧಿವಂತೆ. ಮೊದಲು ಬ್ಯಾಂಕಿಂಗ್ ಪರೀಕ್ಷೆ ತೆಗೆದುಕೊಂಡು ತೇರ್ಗಡೆಯಾಗಿದ್ದರು. ಎಸ್‌ಬಿಐ ನಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಕೂಡ ನಿರ್ವಹಿಸುತ್ತಿದ್ದರು. ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದರು. ತರಬೇತಿ ವೇಳೆ ತನ್ನ ಸ್ನೇಹಿತರು ಕೇಳಿದ ನೆರವು ಕೊಡುತ್ತಿದ್ದಳು.ರಾಷ್ಟ್ರೀಯ ಪ್ರತಿಭೆ ಅನ್ವೇಷಣಾ ಪರೀಕ್ಷೆಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಲಕ್ಷ್ಮೀ ದೇಶದಲ್ಲಿ ಹದಿನೆಂಟನೇ ಸ್ಥಾನ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದರು.

ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಬಳಿಕ ಮಾಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ತರಬೇತಿಗೆ ನಿಯೋಜನೆಗೊಂಡಿದ್ದರು. ಅಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಸ್ವತಃ ಲಕ್ಷ್ಮೀ ಸಾಕಷ್ಟು ಶ್ರಮ ವಹಿಸಿ ಪ್ರಕರಣ ತನಿಖೆ ಮಾಡಿ ಆರೋಪಿಯನ್ನು ಬಂಧಿಸಿದ್ದರು. ಸಿಬ್ಬಂದಿಯ ಜತೆ ಕೂಡ ಅನೋನ್ಯವಾಗಿ ಮಾತನಾಡುತ್ತಿದ್ದರು. ತಾನು ಡಿವೈಎಸ್ಪಿ ಎಂಬ ಅಹಂ ಎಂದೂ ಕಾಣಿರಲಿಲ್ಲ ಎಂದು ಲಕ್ಷ್ಮೀ ಅವರನ್ನು ಹತ್ತಿರದಿಂದ ಬಲ್ಲ ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.

ಒಂದು ಅನಾಮಿಕ ಕರೆ: ಮಧ್ಯ ರಾತ್ರಿ ಒಂದು ದಿನ ಅನಾಮಿಕ ಕರೆ ಬಂದಿತ್ತು. ಎರಡು ಸಲ ರಿಂಗ್ ಆದರೂ ಲಕ್ಷ್ಮೀ ಎತ್ತಿರಲಿಲ್ಲ. ಮೂರನೇ ಸಲ ಕರೆ ಬಂದಾಗ ಸ್ವೀಕರಿಸಿದ್ದಳು. ಅದು ಅನಾಮಿಕ ವ್ಯಕ್ತಿಯ ಕರೆ. ಬೈಕ್ ಕಳ್ಳ ಎಂದು ಅಮಾಯಕ ವ್ಯಕ್ತಿಗೆ ಜನರು ಹಿಡಿದು ತಳಿಸುತ್ತಿದ್ದರು. ಈ ವೇಳೆ ಲಕ್ಷ್ಮೀ ಅವರೇ ಹೋಗಿ ಸಮಸ್ಯೆ ಇತ್ಯರ್ಥ ಮಾಡಿ, ಆತ ಬೈಕ್ ಕಳ್ಳನಲ್ಲ ಗೊತ್ತಿರುವ ವ್ಯಕ್ತಿ ಎಂದು ಬಿಡಿಸಿದ್ದರು. ಲಕ್ಷ್ಮೀ ಅವರ ಒಳ್ಳೆಯತನದಿಂದ ಯರೂ ಅವರ ಸ್ನೇಹ ಬಿಟ್ಟು ಹೋಗುತ್ತಿರಲಿಲ್ಲ ಎನ್ನುತ್ತಾರೆ ಲಕ್ಷ್ಮೀ ಆಪ್ತೆ .

ಎಂಟು ವರ್ಷದ ಹಿಂದೆ ಮದುವೆಯಾಗಿದ್ದ ನವೀನ್ ಹಾಗೂ ಲಕ್ಷ್ಮೀ ಚೆನ್ನಾಗಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ಪತಿ ಕೆಲಸ ಬಿಟ್ಟಿದ್ದರು. ಸ್ವಂತ ಸ್ಟಾರ್ಟ್ ಅಪ್ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದರು. ಅದೇ ಕೆಲಸವಾಗಿ ಅವರ ಪತಿ ಹೈದರಾಬಾದ್ ಗೆ ಹೋಗಿದ್ದರು. ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ನಂಬಲಿಕ್ಕೆ ಆಗುವುದಿಲ್ಲ ಎಂದು ಲಕ್ಷ್ಮೀ ಸ್ನೇಹಿತೆ ಕಂಬನಿ ಮಿಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+