ಈ ಬಾರಿ ಆನ್‌ಲೈನ್ ಮೂಲಕ ನಡೆಯಲಿದೆ ಚಿತ್ರಸಂತೆ

ಬೆಂಗಳೂರು, ನವೆಂಬರ್ 22 : ಕರ್ನಾಟಕ ಚಿತ್ರಕಲಾ ಪರಿಷತ್ತು ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಚಿತ್ರಸಂತೆಯನ್ನು ಆಯೋಜಿಸಿದೆ. ಜನವರಿ 3ರಿಂದ ಒಂದು ತಿಂಗಳ ಕಾಲ ಚಿತ್ರಸಂತೆ ನಡೆಯಲಿದೆ.

ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ. ಎಲ್. ಶಂಕರ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಚಿತ್ರಕಲಾ ಪರಿಷತ್ತಿಗೆ 60 ವರ್ಷಗಳು ತುಂಬಿರುವ ಹಿನ್ನಲೆಯಲ್ಲಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ" ಎಂದು ಹೇಳಿದ್ದಾರೆ.

"ಜನವರಿ 3ರಿಂದ ಒಂದು ತಿಂಗಳ ಕಾಲ ಆನ್‌ಲೈನ್‌ ಮೂಲಕ ಚಿತ್ರಸಂತೆ ಆಯೋಜನೆ ಮಾಡಲಾಗುತ್ತಿದೆ. ಈ ಬಾರಿಯ ಚಿತ್ರಸಂತೆಯನ್ನು ಕೊರೊನಾ ಸೇನಾನಿಗಳಿಗೆ ಅರ್ಪಣೆ ಮಾಡಲಾಗುತ್ತಿದೆ" ಎಂದು ಬಿ. ಎಲ್. ಶಂಕರ್ ತಿಳಿಸಿದರು.

Chitra Santhe

ಚಿತ್ರಕಲಾ ಪರಿಷತ್ತಿನ 5 ಗ್ಯಾಲರಿ ಮತ್ತು 10 ತರಗತಿಯ ಕೊಠಡಿಗಳನ್ನು ಗ್ಯಾಲರಿಗಳಾಗಿ ಪರಿವರ್ತನೆ ಮಾಡಲಾಗುತ್ತಿದೆ. ಇಲ್ಲಿ ಆಯ್ದ ಮತ್ತು ಆಹ್ವಾನಿತ ಪ್ರಸಿದ್ಧ ಕಲಾವಿದರ ಕಲಾ ಕೃತಿಗಳನ್ನು ಚಿತ್ರಸಂತೆಯ ಅವಧಿ ಪೂರ್ತಿ ಪ್ರದರ್ಶನ ಮಾಡಲಾಗುತ್ತದೆ.

ಈ ಬಾರಿಯ ಚಿತ್ರಸಂತೆಯಲ್ಲಿ 18 ರಿಂದ 80ರ ವಯೋಮಿತಿಯ ಭಾರತ ಮತ್ತು ವಿದೇಶದ ಸುಮಾರು 1500 ಕಲಾವಿದರು ಈ ಬಾರಿಯ ಚಿತ್ರಸಂತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ಕಲಾವಿದರಿಗೂ ಪ್ರತ್ಯೇಕವಾಗಿ ಒಂದ್ ಆನ್‌ಲೈನ್ ಪುಟವನ್ನು ಮೀಸಲಿಡಲಾಗುತ್ತದೆ.

ಚಿತ್ರಸಂತೆಯಲ್ಲಿ ಪಾಲ್ಗೊಳ್ಳುವ ಕರ್ನಾಟಕದ ಕಲಾವಿದರಿಗೆ 500 ರೂ., ಇತರ ರಾಜ್ಯದ ಕಲಾವಿದರಿಗೆ 1000 ರೂ., ಅಂತರಾಷ್ಟ್ರೀಯ ಕಲಾವಿದರಿಗೆ 1500 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ.

ಜನವರಿ 3ರಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಚಿತ್ರಸಂತೆಯನ್ನು ಉದ್ಘಾಟಿಸಲಿದ್ದಾರೆ. ಫ್ರಾನ್ಸ್, ಸಿಂಗಾಪುರ, ಮಲೇಷಿಯಾದ ಕಲಾವಿದರು ಸಹ ಚಿತ್ರಸಂತೆಯಲ್ಲಿ ಪಾಲ್ಗೊಳ್ಳಲು ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಫೇಸ್ ಬುಕ್, ಇನ್‌ ಸ್ಟಾಗ್ರಾಂ, ಯೂಟ್ಯೂಬ್ ಚಾನೆಲ್‌ಗಳ ಮೂಲಕ ಚಿತ್ರಸಂತೆಯನ್ನು ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+