ಮಕ್ಕಳ ಕೈಯಲ್ಲಿ ಮೊಬೈಲ್: ಆರೋಗ್ಯ ಇಲಾಖೆ ಸಮೀಕ್ಷೆಯಲ್ಲಿ ಆಘಾತಕಾರಿ ವಿಚಾರ ಬಹಿರಂಗ
ಬೆಂಗಳೂರು, ಅಕ್ಟೋಬರ್ 23: ಇತ್ತೀಚಿಗೆ ಮಕ್ಕಳೇನಾದರೂ ಹಠ ಮಾಡುತ್ತಿದ್ದರೆ ಹೆತ್ತವರು ಟಕ್ ಎಂದು ಮೊಬೈಲ್ ಕೊಟ್ಟು ಬಿಟ್ಟು ಸುಮ್ಮನಾಗುತ್ತಾರೆ. ಈ ರೀತಿ ಮಾಡುವ ಪೋಷಕರು ಈ ಸುದ್ದಿ ಓದಲೇ ಬೇಕು. ಹೆತ್ತವರ ಈ ಸಣ್ಣ ತಪ್ಪಿನಿಂದ ಇದೀಗ ಮಕ್ಕಳ ಕಣ್ಣಿನ ದೃಷ್ಟಿಯನ್ನೇ ಕಸಿದುಕೊಳ್ಳುತ್ತಿರುವ ಆಘಾತಕಾರಿ ವಿಚಾರವನ್ನು ಅಧ್ಯಯನವೊಂದು ಬೆಳಕಿಗೆ ತಂದಿದೆ.
ಅಳುತ್ತಿರುವ ಅಥವಾ ಹಠ ಮಾಡುತ್ತಿರುವ ಮಕ್ಕಳನ್ನು ಸಮಾಧಾನ ಮಾಡಿಸಲು ಹೆತ್ತವರು ಪ್ರಯೋಗ ಮಾಡುವ ಮೊದಲ ಅಸ್ತ್ರವೇ ಈ ಮೊಬೈಲ್. ಹೀಗೆ ಪ್ರತಿಯೊಂದು ವಿಚಾರಕ್ಕೂ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಸುಮ್ಮನಾಗುವ ಪೋಷಕರು, ಈ ಸುದ್ದಿಯನ್ನು ಸಂಪೂರ್ಣ ಓದಿ.

ರಾಜ್ಯದಲ್ಲಿ ದೃಷ್ಟಿ ದೋಷದಿಂದ ಬಳಲುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಇಂತಹದೊಂದು ಅಂಶ ಬಯಲಾಗಿದೆ. ರಾಜ್ಯದಲ್ಲಿ ಬರೋಬ್ಬರಿ 1 ಲಕ್ಷದ 70 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಶಿಕ್ಷಕರು ಬೋರ್ಡ್‌ನಲ್ಲಿ ಬರೆದಿರುವ ಅಕ್ಷರವೇ ಸರಿಯಾಗಿ ಕಾಣದೆ, ಕೆಲ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದರೆ. ಇನ್ನು ಕೆಲವು ಸ್ಟೂಡೆಂಟ್ಸ್, ಸಮೀಪದಲ್ಲಿರುವ ವಸ್ತುಗಳತ್ತ ನೋಡಲಾಗದೇ ಒದ್ದಾಡುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆಯಿಂದ ಚಿಕ್ಕ ವಯಸ್ಸಿನಲ್ಲಿಯೇ ಈ ರೀತಿಯ ಸಮಸ್ಯೆಗೆ ಸಿಲುಕಿದ್ದು, ಇದು ವಿದ್ಯಾರ್ಥಿಗಳ ಶಿಕ್ಷಣದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ.
ರಾಜ್ಯದಲ್ಲಿ ಯಾವ್ಯಾವ ಪ್ರಮುಖ ಜಿಲ್ಲೆಗಳಲ್ಲಿ ಎಷ್ಟೆಷ್ಟು ಮಕ್ಕಳು ದೃಷ್ಟಿ ದೋಷದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.
ಜಿಲ್ಲೆ ಮಕ್ಕಳ ಸಂಖ್ಯೆ
ಬೆಳಗಾವಿ - 39,997
ವಿಜಯಪುರ - 13,170
ಬಿಬಿಎಂಪಿ ವ್ಯಾಪ್ತಿ - 10, 193
ದಾವಣಗೆರೆ - 6,348
ಬೀದರ್ - 5,667












Click it and Unblock the Notifications