ಚಂದ್ರನಲ್ಲಿ ವಿಶಿಷ್ಟ ಕಣಗಳನ್ನು ಪತ್ತೆಹಚ್ಚಿದ ಚಂದ್ರಯಾನದ ಆರ್ಬಿಟರ್
ಬೆಂಗಳೂರು, ಅಕ್ಟೋಬರ್ 4: ಚಂದ್ರಯಾನ-2ರ ಯೋಜನೆಯಡಿ ಕಕ್ಷೆಯಲ್ಲಿ ಕಾರ್ಯಾಚರಣೆ ಆರಂಭಿಸಿರುವ ಆರ್ಬಿಟರ್ ಮೊದಲ ಮಹತ್ವದ ಮಾಹಿತಿಯನ್ನು ರವಾನಿಸಿದೆ. ಕೆಲವು ದಿನಗಳ ಕಾಲ ವೀಕ್ಷಣೆ ನಡೆಸಿ ಚಂದ್ರನ ಹೊರಭಾಗದಲ್ಲಿನ ಅಂಶಗಳನ್ನು ಅಧ್ಯಯನ ನಡೆಸಿರುವ ಆರ್ಬಿಟರ್‌ನ ಪೇಲೋಡ್‌ಗಳು ಎಲೆಕ್ಟ್ರಿಕ್ ಚಾರ್ಜ್ ಹೊಂದಿರುವ ಕಣಗಳನ್ನು ಪತ್ತೆ ಹಚ್ಚಿದೆ.
ಚಂದ್ರನಲ್ಲಿ ವಿದ್ಯುದಾವೇಶದ ಕಣಗಳನ್ನು ಮತ್ತು ಅದರಲ್ಲಿನ ತೀವ್ರತೆಯ ಏರಳಿತಗಳನ್ನು ತನ್ನ ಆರ್ಬಿಟರ್ ಗುರುತಿಸಿರುವ ಸಂತಸದ ಸಂಗತಿಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.
'ಚಂದ್ರಯಾನ2ರ ಆರ್ಬಿಟರ್‌ನಲ್ಲಿರುವ 'ಕ್ಲಾಸ್' ಪೇಲೋಡ್ ತನ್ನ ಆರಂಭದ ಕೆಲವು ದಿನಗಳ ಗ್ರಹಿಕೆಯಲ್ಲಿ ಸೆಪ್ಟೆಂಬರ್‌ನಲ್ಲಿ ಜಿಯೋಟೈಲ್‌ಅನ್ನು (ಚಂದ್ರನ ಮೇಲ್ಮೈನಿಂದ ಬಾಹ್ಯಾಕಾಶಕ್ಕೆ ಅಂಟಿಕೊಂಡಿರುವ ಸೋಡಿಯಂ ಅಟೋಮ್ಸ್‌ನ ತೆರಳುವಾಗ, ಮಿಲಿಯನ್ ಮೈಲು ಉದ್ದದ ಸುದೀರ್ಘ ಬಾಲ) ಮೊದಲ ಬಾರಿಗೆ ಹಾದು ಹೋಗುವ ಸಂದರ್ಭದಲ್ಲಿ ವಿದ್ಯುದಾವೇಶದ ಕಣಗಳನ್ನು ಮತ್ತು ಅದರ ತೀವ್ರತೆಯ ಏರಿಳಿತಗಳನ್ನು ಪತ್ತೆಹಚ್ಚಿದೆ' ಎಂದು ಇಸ್ರೋ ತಿಳಿಸಿದೆ.

ಎಕ್ಸ್‌ರೇ ಗ್ರಹಿಸುವ ಕ್ಲಾಸ್ ಪೇಲೋಡ್
ಆರ್ಬಿಟರ್‌ನಲ್ಲಿರುವ ಎಂಟು ಪೇಲೋಡ್‌ಗಳಲ್ಲಿ ಒಂದಾಗಿರುವ 'ಕ್ಲಾಸ್' ಸಾಧನವನ್ನು ಚಂದ್ರನ ಮಣ್ಣಿನಲ್ಲಿರುವ ಅಂಶಗಳ ನೇರ ಗುಣಗಳನ್ನು ಪತ್ತೆಹಚ್ಚುವಂತೆ ವಿನ್ಯಾಸಗೊಳಿಸಲಾಗಿದೆ. ಚಂದ್ರನ ಹೊರಮೈ ಪ್ರಜ್ವಲಿಸಲು ಅನುಕೂಲವಾಗುವಂತೆ ಸೂರ್ಯನಲ್ಲಿರುವ ಸೌರ ಜ್ವಾಲೆಯು ಅಧಿಕ ಪ್ರಮಾಣದ ಎಕ್ಸ್‌ರೇಗಳನ್ನು ಕಳುಹಿಸಿದಾಗ ಪೇಲೋಡ್ ಅದನ್ನು ಗ್ರಹಿಸಿರುವುದು ಗಮನಾರ್ಹವಾಗಿದೆ. ಎಕ್ಸ್‌ರೇ ಹೊಮ್ಮುವಿಕೆಯನ್ನು ನೇರವಾಗಿ ಗ್ರಹಿಸಿರುವ ಕ್ಲಾಸ್ ಪೇಲೋಡ್ ಚಂದ್ರನಲ್ಲಿರುವ ಪ್ರಮುಖ ಅಂಶಗಳಾದ ಎನ್‌ಎ, ಸಿಎ, ಎ1, ಎಸ್‌ಐ, ಟಿಐ ಮತ್ತು ಎಫ್‌ಇಗಳನ್ನು ಕೂಡ ನೇರವಾಗಿ ಪತ್ತೆಹಚ್ಚುತ್ತದೆ ಎಂದು ಇಸ್ರೋ ಹೇಳಿದೆ.

'ಕ್ಲಾಸ್'ನ 'ಫ್ಲ್ಯಾಶ್ ಫೋಟೋಗ್ರಫಿ'
ಸೂರ್ಯ ಸಕ್ರಿಯವಾಗುವುದನ್ನು ನಿರೀಕ್ಷಿಸುವಾಗ ಸಕಾಲಿಕ ಸಮಯದಲ್ಲಿ ಈ ರೀತಿಯ ಫ್ಲ್ಯಾಶ್ ಫೋಟೊಗ್ರಫಿಯ ಅಗತ್ಯವಿರುತ್ತದೆ. ಹಾಗೆಯೇ 'ಕ್ಲಾಸ್' ಸೂಕ್ತ ಸಮಯದಲ್ಲಿ ಇದನ್ನು ಗ್ರಹಿಸಿದೆ ಎಂದು ಅದು ವಿವರಿಸಿದೆ.
'ನಮ್ಮ ಸೂರ್ಯ ಸೌರ ವ್ಯವಸ್ಥೆಯ ಒಳಗೆ ಎಲೆಕ್ಟ್ರಾನ್ ಮತ್ತು ಪ್ರೋಟಾನ್‌ಗಳನ್ನು ನಿರಂತರವಾಗಿ ಹೊರಹಾಕುತ್ತಿರುತ್ತದೆ. ಇದನ್ನು ಸೌರ ವಾಯು ಎಂದು ಕರೆಯಲಾಗುತ್ತದೆ. ಸೌರ ವಾಯುವಿನ ಪ್ಲಾಸ್ಮಾದಲ್ಲಿ ವಿದ್ಯುದಾವೇಶವುಳ್ಳ ಕಣಗಳಿದ್ದು, ಇವು ಸೂರ್ಯನ ಆಯಸ್ಕಾಂತೀಯ ಪ್ರದೇಶದಲ್ಲಿ ಆವರಿಸಿಕೊಂಡು ಸೆಕೆಂಡ್‌ಗೆ ನೂರಾರು ಕಿ.ಮೀ. ವೇಗದಲ್ಲಿ ಚಲಿಸುತ್ತಿರುತ್ತವೆ' ಎಂದು ತಿಳಿಸಿದೆ.

ಆಯಸ್ಕಾಂತೀಯ ಪ್ರದೇಶ
ಇದು ಭೂಮಿ ಮತ್ತು ಅದರ ಚಂದ್ರ ಸೇರಿದಂತೆ ಸೌರ ವ್ಯವಸ್ಥೆಯ ಅಂಶಗಳೊಂದಿಗೆ ಸಂವಾದಿಸುತ್ತದೆ. ಭೂಮಿಯು ಜಾಗತಿಕ ಆಯಸ್ಕಾಂತೀಯ ಪ್ರದೇಶವಾಗಿರುವುದರಿಂದ ಅದು ಸೌರ ವಾಯು ಪ್ಲಾಸ್ಮಾವನ್ನು ಸೆಳೆದುಕೊಳ್ಳುತ್ತದೆ. ಇದರಿಂದಾಗಿ ಭೂಮಿಯ ಸುತ್ತಲೂ ಆಯಸ್ಕಾಂತೀಯ ಹೊದಿಕೆ ಸೃಷ್ಟಿಯಾಗಲು ಕಾರಣವಾಗಿದೆ. ಇದನ್ನು ಮ್ಯಾಗ್ನೆಟೋಸ್ಪೇರ್ ಎಂದು ಕರೆಯಲಾಗುತ್ತದೆ.

ಜಿಯೋಟೈಲ್‌ನಲ್ಲಿ ಅಧ್ಯಯನ
ಅಂದಾಜು ಪ್ರತಿ 29 ದಿನಗಳಿಗೆ ಒಮ್ಮೆ ಪೂರ್ಣ ಚಂದ್ರನ ಸುತ್ತಲಿನ ಕೇಂದ್ರದಲ್ಲಿ ಆರು ದಿನಗಳವರೆಗೆ ಜಿಯೋಟೈಲನ್ನು ಸುತ್ತುವರಿಯುತ್ತದೆ. ಹಾಗೆಯೇ ಚಂದ್ರಯಾನ 2 ಕೂಡ ಈ ಜಿಯೋಟೈಲನ್ನು ದಾಟುತ್ತದೆ. ಆಗ ಅದರಲ್ಲಿನ ಸಾಧನಗಳು ಭೂಮಿಯಿಂದ ನೂರಾರು ಸಾವಿರ ಕಿ.ಮೀ. ದೂರದಲ್ಲಿರುವ ಜಿಯೋಟೈಲ್‌ನಲ್ಲಿರುವ ವಸ್ತುಗಳನ್ನು ಅಧ್ಯಯನಕ್ಕೆ ಒಳಪಡಿಸುತ್ತವೆ.












Click it and Unblock the Notifications