Darshan Thoogudeepa:'ದರ್ಶನ್‌ಗೆ ಸಾವಿನ ಛಾಯೆ ಇತ್ತು': ಆ ದೊಡ್ಡ ದುರಂತದಿಂದ ನಟ ಪಾರಾಗಿದ್ದೇಗೆ..?

ಬೆಂಗಳೂರು, ಆಗಸ್ಟ್‌ 02: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್ ಜೀವನದಲ್ಲಿ ನಡೆದ ಏರುಪೇರುಗಳ ಬಗ್ಗೆ ಕಾಳಿ ಉಪಾಸಕಿ ಚಂದಾ ಪಾಂಡೇ ಅಮ್ಮಾಜಿ ಮಾತನಾಡಿದ್ದು, ದರ್ಶನ್‌ಗೆ ಸಾವಿನ ಛಾಯೆ ಇತ್ತು ಎನ್ನುವ ಆತಂಕಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ವಿಸ್ತಾರ ನ್ಯೂಸ್‌ ಸಂದರ್ಶನದಲ್ಲಿ ಮಾತನಾಡಿದ ಚಂದಾ ಪಾಂಡೇ ಅಮ್ಮಾಜಿ, ದರ್ಶನ್‌ಗೆ ಸಾಡೆ ಸಾತಿ ಎಂದು ತಪ್ಪಾಗಿ ತೆಗೆದುಕೊಂಡು ಹೋಗಲಾಗುತ್ತಿದೆ. ಆದರೆ ವಿಚಾರ ಅದಲ್ಲ. ಸಾಡೆ ಸಾತಿ ಅಲ್ಲ ಶನಿಯ ಪ್ರಭಾವದಿಂದ ಹೀಗಾಗಿದೆ. ಅದು ಯಾವುದಾದರೂ ಆಗಿರಬಹುದು. ಯಾಕೆಂದರೆ ನಾನು ಅವರ ಜಾತಕ ನೋಡಿಲ್ಲ. ಆದರೆ ಅವರಿಗೆ ಮೊಟ್ಟಮೊದಲ ಬಾರಿಗೆ ಕೈ ಮುರಿದ್ದಿತ್ತಲ್ಲ. 2018ರಲ್ಲಿ ಅವರ ಕಾರಿಗೆ ಅಪಘಾತವಾಗುತ್ತದೆ ಅಂತಾ ನಾನೇ ಮೊದಲು ಹೇಳಿದ್ದು ಎಂದರು.

Chanda Pandey Ammaji Astrology Prediction On Darshan Thoogudeepa Case

ನನ್ನ ಜೊತೆಗಿನ ಯಾವುದೋ ಚಿಕ್ಕ ಮನಸ್ತಾಪಕ್ಕೆ ಅವರು ಅದನ್ನು ತೆಗೆದುಕೊಂಡಿರಲಿಲ್ಲ. ಆದರೆ ಆ ಘಟನೆ ಆಯಿತು. ಅಪಘಾತ ಆದ ಮೇಲೆ ನಮ್ಮ ಮನೆಗೆ ಬಂದರು. ಬಂದು ಹೋದ ಮೇಲೆ ಆದ ಬೆಳವಣಿಗೆಯಿಂದ ನಮ್ಮ ನಡುವೆ ಮತ್ತೆ ಮನಸ್ತಾಪ ಆಯ್ತು. ಆ ಫೋಟೋ ಒಂದು ವೈರಲ್‌ ಆಯ್ತು. ಯೂಟ್ಯೂಬ್‌, ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಯ್ತು. ಅದನ್ನು ನಾನು ಹಾಕಿದ್ದೇನೆ ಎನ್ನುವ ತಪ್ಪು ಅಭಿಪ್ರಾಯಕ್ಕೆ ಆ ವ್ಯಕ್ತಿ ಬಂದರು.

ಅಂದಿನಿಂದ ಅವರ ಸಂಪರ್ಕದಿಂದ ನಾನು ದೂರ ಉಳಿದೆ. ಯಾಕೆಂದರೆ ನಾನು ಅವರ ಫೋಟೋ ಹಾಕಿರಲಿಲ್ಲ. ಒಂದು ವೇಳೆ ಹಾಕಿದ್ದರು ಸುಳ್ಳು ಹಾಕಿರಲಿಲ್ಲ. ಅವರು ಬಂದಿದ್ದಕ್ಕೆ ಆ ಫೋಟೋ ಇತ್ತು. ಅದನ್ನು ದರ್ಶನ್‌ ಅಭಿಮಾನಿಯೊಬ್ಬರೇ ವೈರಲ್‌ ಮಾಡಿದ್ದು. ಖುಷಿಯಿಂದ ಹಾಕಿದ. ಆ ಸಮಯದಲ್ಲಿ ದರ್ಶನ್ ಒಂದು ಪದವನ್ನು ಬಳಸಿದರು ಅದು ನನಗೆ ಮಾನಸಿಕವಾಗಿ ತುಂಬಾ ನೋವಾಯ್ತು.

Chanda Pandey Ammaji Astrology Prediction On Darshan Thoogudeepa Case

ಅಮ್ಮಾಜಿ ಅವರ ಜೊತೆ ಫೋಟೋ ತೆಗೆಸಿಕೊಂಡೆ. ಅವರು ನನ್ನಿಂದ ಮೈಲೇಜ್‌ ತೆಗೆದುಕೊಳ್ಳುತ್ತಿದ್ದಾರೆ. ಹೀಗೆ ಅಂದಾಗ ಈ ಮೈಲೇಜ್‌ ಅಂದರೆ ಏನು? ಅವರಿಂದ ಪ್ರಚಾರ ಮಾಡಿಸಿಕೊಳ್ಳುವ ಅವಶ್ಯಕತೆ ನನಗಿಲ್ಲ. ಅವರಿಂದ ನಾನು ಈ ವಿದ್ಯೆ ಕಲಿತಿಲ್ಲ. ಅವರಿಂದ ಲಾಭ ಬರುತ್ತದೆ ಎಂದು ನಾನು ಅವರ ಭವಿಷ್ಯದ ಬಗ್ಗೆ ಹೇಳಿರಲಿಲ್ಲ. ಅವರ ಸ್ನೇಹಿತ ಕಡೆಯಿಂದ ನಾನು ಹೇಳಿದ್ದು, ಯಾಕೆಂದರೆ ನನಗೆ ಅವರ ಮೇಲೆ ಅಭಿಮಾನ ಇತ್ತು ಎಂದರು.

ಅವರ ಮೇಲಿನ ಅಭಿಮಾನದಿಂದ ಅವರ ಸ್ನೇಹಿತ ಬಳಿ ಹೇಳಿ ಕಳುಹಿಸಿದ್ದೆ. ಮೊದಮೊದಲು ಸಣ್ಣ ಪುಟ್ಟ ಪರಿಹಾರ ಮಾಡಿಕೊಂಡರು. ಮೊದಲು ಅವರ ಬಲಗೈ ಮುರಿಯಿತು. ಆಮೇಲೆ ಎಡಗೈ ಮುರಿಯಿತು. ಈ ಕೈ ಮುರಿದ ಸ್ಪಲ್ಪ ದಿನದಲ್ಲೇ ಈ ಒಂದು ದೊಡ್ಡ ಅವಘಡ ಆಗಿ ಹೋಯ್ತು. ಅದಕ್ಕೂ ಮುಂಚೆ ಅಂದರೆ 2018ರಲ್ಲಿ ಅವರಿಗೆ ಸಾವಿನ ಛಾಯೆ ಇತ್ತು. ಆ ಸಮಯದಲ್ಲಿ ಅವರು ಕಾರು ರೇಸ್‌ಗೆ ಹೋಗುವವರು ಇದ್ದರು, ಒಂದು ವೇಳೆ ಹೋಗಿದ್ದರೆ ದರ್ಶನ್‌ ನಮ್ಮ ಮಧ್ಯ ಇರುತ್ತಿರಲಿಲ್ಲ. ನಮ್ಮ ತಂತ್ರಶಾಸ್ತ್ರದಲ್ಲಿ ನೋಡಿ ಹೋಗಬೇಡಿ ಅಂತಾ ನಾನೇ ಹೇಳಿದ್ದು, ಆ ರೇಸ್‌ನಿಂದ ತಪ್ಪಿಸಿಕೊಂಡರು. ಆ ಸಮಯದಲ್ಲೇ ಅವರು ಎಚ್ಚೆತ್ತುಕೊಂಡಿದ್ದರೆ ನಾವು ಇಂದು ಇಷ್ಟೊಂದು ಮಾತನಾಡುವ ಅವಶ್ಯಕತೆ ಇರಲಿಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+