ಮೋದಿ ಭೂತದಿಂದ ಅನಂತಮೂರ್ತಿ ಹೊರಬರಬೇಕು
ಬೆಂಗಳೂರು, ಜೂ.27: "ಚುನಾವಣೆ ಮೊದಲು ನರೇಂದ್ರ ಮೋದಿಯವರನ್ನು ಟೀಕಿಸುತ್ತಿದ್ದ ಅನಂತಮೂರ್ತಿಯವರು ಚುನಾವಣೆ ನಂತರವೂ ಟೀಕೆ ಮುಂದುವರಿಸುವುದು ಸರಿಯಲ್ಲ. ಅನಂತಮೂರ್ತಿಯವರು ಇನ್ನಾದರೂ ಮೋದಿ ಭೂತದಿಂದ ಹೊರಬರಬೇಕು"
ಕೇಂದ್ರ ಸರ್ಕಾರ ಒತ್ತಾಯಪೂರ್ವಕವಾಗಿ ಹಿಂದಿ ಹೇರಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಮುಖ್ಯಸ್ಥ ಕೆ. ನಾರಾಯಣ ಗೌಡ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಆಯೋಜನೆಗೊಂಡ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಅನಂತಮೂರ್ತಿಯವರು ಮೋದಿ ವಿರುದ್ದವಾಗಿ ಹೇಳಿಕೆ ನೀಡಿದ್ದಕ್ಕೆ ಚಂಪಾ ಪ್ರತಿಕ್ರಿಯೆ ನೀಡಿದ್ದು ಹೀಗೆ.
ಜ್ಞಾನಪೀಠ ಪುರಸ್ಕೃತ ಸಾಹಿತಿ ಯು.ಆರ್. ಅನಂತಮೂರ್ತಿ ಮಾತನಾಡಿ ನಮ್ಮದು ಸಂಯುಕ್ತ ವ್ಯವಸ್ಥೆಯನ್ನು ಒಳಗೊಂಡಿರುವ ದೇಶ. ಇಲ್ಲಿಯವರೆಗೆ ಚುನಾವಣೆಯಲ್ಲಿ ಆಯ್ಕೆಯಾದ ಸಂಸತ್ ಸದಸ್ಯರು ಬಹುಮತವಿರುವ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡುತ್ತಿದ್ದರು. ಆದರೆ ಇವರು ಅಧ್ಯಕ್ಷೀಯ ಮಾದರಿ ಚುನಾವಣೆ ಹೊರಟು ಮೋದಿಯನ್ನು ಮುಂದಿಟ್ಟುಕೊಂಡು, ಹಿಂದಿ ವಾಗ್ಝರಿಯ ಮೂಲಕ ತಮ್ಮ ದೇಶದಲ್ಲೂ ಸಲ್ಲುತ್ತಾ, ಹಿಂದಿ ಲ್ಯಾಂಡ್‌ನಲ್ಲೂ ಸಲ್ಲುತ್ತ ವರ್ಚಸ್ಸು ವೃದ್ಧಿಸುತ್ತಿದ್ದಾರೆ. ನಿಜವಾಗಿ ಮೋದಿ ವಾಗ್ಝರಿಯಲ್ಲಿ ಹುರುಳಿಲ್ಲ. ಆದರೆ ಮೋದಿ ವಾಗ್ಝರಿಗೆ ಜನ ಬೆರಗಾದರು. ಇದನ್ನು ಒಬ್ಬ ತಮಿಳ, ಕನ್ನಡಿಗ, ಮಲೆಯಾಳಿ,ತೆಲುಗ ಮಾಡಲು ಸಾಧ್ಯವಿಲ್ಲ. ಮೋದಿಯನ್ನು ಮುಂದಿಟ್ಟುಕೊಂಡು ಅಧ್ಯಕ್ಷೀಯ ಮಾದರಿ ಚುನಾವಣೆಗೆ ಒಂದು ಸಾರಿ ನಮ್ಮನ್ನು ತೆರೆದು ಹಿಂದಿ ಒಂದೇ ಈ ದೇಶದ ಭಾಷೆ ಅಂತ ಸ್ಥಾಪಿತವಾಗುವ ಹಾಗೆ ಆಗಿ ಬಿಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದರು. [ಹಿಂದಿ ಹೇರಿಕೆ : ಸಂವಿಧಾನವೇ ಹುಳುಕನ್ನು ಪೊರೆದಿರುವಾಗ]
ಸಭೆಯಲ್ಲಿ ಭಾಗವಹಿಸಿದವರು:
ಕೂಡಲಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ, ಧಾರವಾಡದ ರೇವಣಸಿದ್ದೇಶ್ವರ ಗುರುಪೀಠದ ಬಸವರಾಜ ದೇವರು, ಯು.ಆರ್. ಅನಂತಮೂರ್ತಿ, ಕೆ. ಮರುಳಸಿದ್ದಪ್ಪ, ಪ್ರೊ.ಚಂದ್ರಶೇಖರ ಪಾಟೀಲ, ಡಾ.ಪಿ.ವಿ.ನಾರಾಯಣ, ನಾಡೋಜಾ ಕಮಲಾ ಹಂಪನಾ, ಜಿ.ಎಸ್.ಸಿದ್ದಲಿಂಗಯ್ಯ, ಆರ್.ಕೆ. ನಲ್ಲೂರ್ ಪ್ರಸಾದ್, ರಂಗಾರೆಡ್ಡಿ ಕೋಡಿರಾಮಪುರ, ಪ್ರೊ. ಕೆ.ಎಸ್.ಭಗವಾನ್, ರಾಜೇಂದ್ರ ಸಿಂಗ್ ಬಾಬು, ರವಿ ಹೆಗಡೆ, ಪಟಾಪಟ್ ನಾಗರಾಜ್, ಆನಂದ ಬನವಾಸಿ, ಎನ್.ಎ.ಎಂ ಇಸ್ಮಾಯಿಲ್, ಸಮೀ ವುಲ್ಲಾ ಖಾನ್ ಭಾಗವಹಿಸಿದ್ದರು.
ಮುಂದಿನ ಪುಟದಲ್ಲಿ ಯಾರು ಏನು ಹೇಳಿದರು? ಅನಂತಮೂರ್ತಿ ಯವರ ಹೇಳಿಕೆಗೆ ಚಂಪಾ ಏನು ಪ್ರತಿಕ್ರಿಯೆ ನೀಡಿದರು? ಸಭೆ ಅಂತಿಮವಾಗಿ ಕೈಗೊಂಡ ನಿರ್ಣಗಳ ವಿವರಗಳನ್ನು ನೀಡಲಾಗಿದೆ.

ಸಭೆಯ ನಿರ್ಣಯಗಳು:
ಮುಖ್ಯಮಂತ್ರಿಯವರ ಮೂಲಕ ಪ್ರಧಾನಿ ನರೇಂದ್ರ ಮೋದಿಯವವರ ಮೇಲೆ ಒತ್ತಡ ತರುವುದು.
ದೆಹಲಿಯ ಜಂತರ್ ಮಂತರ್ ಸೇರಿದಂತೆ ರಾಜ್ಯದಲ್ಲೆಡೆ ಪಕ್ಷಬೇಧ, ಧರ್ಮಬೇಧ ಮರೆತು ಎಲ್ಲಾ ಜನರನ್ನು ಒಗ್ಗೂಡಿಸಿ ಸಾಹಿತಿ, ಚಿಂತಕರು, ಧಾರ್ಮಿಕ ಗುರುಗಳನ್ನು ಸೇರಿಸಿ ಪ್ರತಿಭಟನೆ ನಡೆಸುವುದು.

ಎಲ್ಲಾ ಭಾಷೆಗಳಿಗೆ ಗೌರವ ನೀಡಬೇಕು
ಭಾರತ ಬೆಳೆಯಬೇಕಾದರೆ ಎಲ್ಲಾ ಭಾಷಿಕರಿಗೆ ಬಲ ಬರಬೇಕು. ಈ ಹಿಂದೆ ರಾಜಕಾರಣಿಗಳು ಭಾಷಣ ಮಾಡುವ ಮೊದಲು ಕನ್ನಡ ಸಾಹಿತಿಗಳ ಉಕ್ತಿಗಳನ್ನು ಹೇಳಿ ಭಾಷಣ ಮಾಡುತ್ತಿದ್ದರು. ಆದರೆ ಈಗ ಕಡಿಮೆಯಾಗಿದೆ. ರಾಜ್ಯಕ್ಕೆ ಬರುವ ಬಡವರೆಲ್ಲರು ಕನ್ನಡ ಕಲಿಯುತ್ತಿದ್ದಾರೆ. ಒಂದು ಪ್ರದೇಶಕ್ಕೆ ಹೋದಾಗ ವ್ಯಕ್ತಿ ಅಲ್ಲಿನ ಭಾಷೆಯನ್ನು ಕಲಿಯಬೇಕು. ಆದರೆ ಬಲವಂತವಾಗಿ ಒಂದೇ ಭಾಷೆಯನ್ನು ಆಡಳಿತದಲ್ಲಿ ಉಪಯೋಗಿಸುವುದು ತಪ್ಪು.
ಡಾ.ಯುಆರ್.ಅನಂತಮೂರ್ತಿ, ಜ್ಞಾನಪೀಠ ಪುರಸ್ಕೃತ ಸಾಹಿತಿ

ಹಿಂದಿನಿಂದಲೂ ಹೇರಿಕೆ ಬಂದಿದೆ.
ಮೋದಿ ಸರ್ಕಾರ ಬಂದ ಮೇಲೆ ಹಿಂದಿ ಹೇರಿಕೆ ಮಾಡಿಲ್ಲ. ಈ ಹಿಂದಿನ ಸರ್ಕಾರಗಳು ಹಿಂದಿ ಹೇರಿಕೆಯನ್ನು ಮಾಡಿಕೊಂಡೆ ಬಂದಿವೆ. ಆದರೆ ಈಗ ಇದರ ಮುಂದುವರಿದ ಭಾಗವಾಗಿ ಹಿಂದಿಯನ್ನು ಬಲವಂತವಾಗಿ ಹೇರಿಕೆ ಮಾಡಲು ಹೊಸ ಸರ್ಕಾರ ಮುಂದಾಗುತ್ತಿದೆ.
ಹೇರಿಕೆ ಪ್ರಶ್ನೆ ಬಂದಾಗ ಅದಕ್ಕೆ ಧಿಕ್ಕಾರ ಕೂಗಲೇಬೇಕು. ಸಂವಿಧಾನ ತಿದ್ದುಪಡಿ ಮಾಡಲು ನಾವು ಒತ್ತಡ ತರಬೇಕು. ನಾವು ಏಕಾಂಗಿಯಲ್ಲ. ಹಿಂದಿ ಹೇರಿಕೆಯನ್ನು ವಿರೋಧಿಸುವ ರಾಜ್ಯಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಈ ಹೋರಾಟದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರಬೇಕು.
ರಾಜಕಾರಣಿಗಳು ಸಾಹಿತಿಗಳ ಉಕ್ತಿಯನ್ನು ಹೇಳಬೇಕಾದರೆ ಸಾಹಿತಿಗಳು ಘನತೆಯನ್ನು ಉಳಿಕೊಳ್ಳಬೇಕಾಗುತ್ತದೆ. ಸಾಹಿತಿಗಳಲ್ಲಿ ಈಗ ಘನತೆ ಕಡಿಮೆಯಾಗುತ್ತಿದೆ.
ಪ್ರೊ. ಚಂದ್ರಶೇಖರ ಪಾಟೀಲ, ಹಿರಿಯ ಸಾಹಿತಿ

ಮೋದಿಯವರು ಇಂಗ್ಲಿಷ್ ಕಲಿಯಲಿ:
ಮೋದಿಯವರು ಸರ್ವಾಧಿಕಾರಿ ಧೋರಣೆಯನ್ನು ಬಿಡಬೇಕು. ಹಿಂದಿಯಲ್ಲಿ ಏನು ಮಾತನಾಡಿದರೂ ಜನ ಮೆಚ್ಚಿಕೊಳ್ಳುತ್ತಾರೆ ಎನ್ನುವ ಭಾವನೆ ಮೋದಿ ಸರ್ಕಾರದಲ್ಲಿದೆ. ಸಂವಹನಕ್ಕೆ ಎರಡು ಭಾಷೆ ಸಾಕು. ರಾಜ್ಯ ಭಾಷೆ ಮತ್ತು ಇಂಗ್ಲಿಷ್ ಕಲಿತರೆ ಸಂವಹನ ಮಾಡಬಹುದು. ಬಲವಂತವಾಗಿ ಹಿಂದಿ ಹೇರಿ ಪ್ರಜೆಗಳ ಭಾಷೆಯನ್ನು ನುಂಗಬೇಡಿ. ಮೋದಿಯವರೆ ನೀವು ಇಂಗ್ಲಿಷ್ ಕಲಿಯಲು ಮುಂದಾಗಿ.
ನಾಡೋಜಾ ಕಮಲಾ ಹಂಪನಾ, ಹಿರಿಯ ಸಾಹಿತಿ

ಎಂಪಿಗಳನ್ನು ಎಚ್ಚರಿಸಬೇಕು:
"ಕೇಂದ್ರ ಸರ್ಕಾರ ಹಿಂದಿಯನ್ನು ಬಲವಂತವಾಗಿ ಹೇರಿದರೂ ರಾಜ್ಯದ ಸಂಸತ್ ಸದಸ್ಯರು ಇನ್ನು ಎಚ್ಚರಗೊಂಡಿಲ್ಲ. ಮೊದಲು ಅವರನ್ನು ಎಚ್ಚರಿಸಬೇಕು. ಸಂವಿಧಾನ ಮೂಲಕ ಹೋದರೆ ಈ ವಿಚಾರಕ್ಕೆ ನ್ಯಾಯ ಸಿಗುವುದು ಕಷ್ಟ. ಆದರೆ ಹೋರಾಟ ಮಾಡಿದ್ದಲ್ಲಿ ನ್ಯಾಯ ಸಿಗಬಹುದು. ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಸೆಳೆದು ಹೋರಾಟ ನಡೆಸಬೇಕು. ಈ ಹಿಂದೆ ಎಫ್‌ಎಂಗಳಲ್ಲಿ ಕನ್ನಡ ಹಾಡುಗಳು ಬರುವುದೇ ಕಷ್ಟವಾಗಿತ್ತು. ಆದರೆ ಈಗ ಪ್ರತಿಭಟನೆಯಿಂದಾಗಿ ಎಫ್‌ಎಂಗಳಲ್ಲಿ ಕನ್ನಡ ಹಾಡುಗಳು ಬರುತ್ತಿವೆ"
ರವಿ ಹೆಗಡೆ, ಸಮೂಹ ಸಂಪಾದಕರು ಉದಯವಾಣಿ
"ತಂತ್ರಜ್ಞಾನದಲ್ಲೂ ಹಿಂದಿ ಹೇರಿಕೆ ಆಗುತ್ತಿದೆ. ಕೇಂದ್ರದಲ್ಲಿ ಈ ಹಿಂದೆ ಬಂದ ಎಲ್ಲಾ ಸರ್ಕಾರಗಳು ಹಿಂದಿ ಹೇರಿಕೆ ಮಾಡುತ್ತಿವೆ. ಯುರೋಪ್‌ನ್ಲಲಿರುವ ಒಂದು ರಾಷ್ಟ್ರ, ಒಂದು ಭಾಷೆ ಕಲ್ಪನೆ ಭಾರತಕ್ಕೂ ಬರುವಂತೆ ಕಾಣುತ್ತಿದೆ. ನಾವು ಹಿಂದಿ ಭಾಷೆಯನ್ನು ದ್ವೇಷ ಮಾಡುತ್ತಿಲ್ಲ. ಆದರೆ ಬಲವಂತದ ಹೇರಿಕೆ ವಿರೋಧವಿದೆ. ಅಂದೋಲನದ ಮೂಲಕ ಇದನ್ನು ಪರಿಹಾರ ಮಾಡಲು ಮುಂದಾಗಬೇಕು"
-ಎನ್.ಎ. ಎಂ ಇಸ್ಮಾಯಿಯಲ್, ಮುಖ್ಯ ಉಪ ಸಂಪಾದಕರು ಪ್ರಜಾವಾಣಿ
-
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Language Row: ಉತ್ತರ ಭಾರತದಲ್ಲಿ ಯಾಕೆ ತಮಿಳು - ಕನ್ನಡ ಇಲ್ಲ ಎಂದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ












Click it and Unblock the Notifications