ಕೇಂದ್ರ ಬಜೆಟ್ 2020: ಬೆಂಗಳೂರಿಗೆ ಸಿಕ್ಕಿದ್ದೇನು?
ಬೆಂಗಳೂರು, ಫೆಬ್ರವರಿ 1: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2020ರ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು ಅದರಲ್ಲಿ ಬೆಂಗಳೂರಿಗೆ ಏನೇನು ಮೀಸಲಿಟ್ಟಿದ್ದಾರೆ.
ಕೇಂದ್ರ ಸರ್ಕಾರವು ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸಲು ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಯನ್ನು ಜಾರಿಗೆ ತರುತ್ತಿದೆ. ಒಟ್ಟು 18,600 ಕೋಟಿ ರೂ.ವನ್ನು ಮೀಸಲಿಟ್ಟಿದೆ. ಒಟ್ಟು 148 ಕಿ.ಮೀ ರೈಲ್ವೆ ಯೋಜನೆ ಇದಾಗಿದೆ.
ಈ ಮಾರ್ಗದಲ್ಲಿ ಒಟ್ಟು 55 ರೈಲು ನಿಲ್ದಾಣಗಳು ಬರಲಿವೆ. 150 ಕಿ.ಮೀ ಉದ್ದದ ರೈಲು ಮಾರ್ಗವನ್ನು ನಿರ್ಮಿಸಲು ಮೊದಲು ಮನವಿ ಮಾಡಲಾಗಿತ್ತು. ಪ್ರೇಕ್ಷಣೀಯ ಸ್ಥಳಗಳಿಗೆ ತೇಜಸ್ ಮಾದರಿಯ ರೈಲುಗಳು ಸಂಚರಿಸಲಿವೆ.

ರೈಲ್ವೆ ಮಾರ್ಗದದಲ್ಲಿ ಸೌರಶಕ್ತಿ
ಅಸ್ತಿತ್ವದಲ್ಲಿರುವ ರೈಲ್ವೆ ರೈಲುಗಳ ಜೊತೆಗೆ ದೊಡ್ಡ ಸೌರಶಕ್ತಿ ಸಾಮರ್ಥ್ಯವನ್ನು ಸರ್ಕಾರ ಸ್ಥಾಪಿಸಲಾಗುತ್ತದೆ. ಸರ್ಕಾರ 1.7 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಿದೆ ಎಂದು ಸೀತಾರಾಮನ್ ಹೇಳಿದ್ದಾರೆ.

4 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ
ಖಾಸಗಿ ಸಹಭಾಗಿತ್ವದಲ್ಲಿ ನಾಲ್ಕು ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ತೇಜಸ್ ಎಕ್ಸ್‌ಪ್ರೆಸ್ ರೀತಿಯಲ್ಲಿ ಇನ್ನೂ ಹೆಚ್ಚಿನ ರೈಲುಗಳ ಸೇವೆ ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ 2023ಕ್ಕೆ ಮುಕ್ತಾಯ
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ, ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ವೇ ಕಾಮಗಾರಿಯು ಇನ್ನು ಮೂರು ವರ್ಷಗಳಲ್ಲಿ ಮುಕ್ತಾಯಗೊಳ್ಳಲಿದೆ.

ಉಪನಗರ ರೈಲ್ವೆ ಯೋಜನೆಗೆ ಕೇಂದ್ರದಿಂದ ಶೇ. 60ರಷ್ಟು ಅನುದಾನ
ಬೆಂಗಳೂರಲ್ಲಿ ಮೆಟ್ರೋ ಮಾರ್ಗದ ಸಮೀಪ ಉಪನಗರ ರೈಲು ಸಂಚರಿಸಲಿದೆ. ಒಟ್ಟು 148 ಕಿ.ಮೀ ಯೋಜನೆ ಇದಾಗಿದೆ. ಕೇಂದ್ರವು ಶೇ.60ರಷ್ಟು ಅನುದಾನವನ್ನು ನೀಡಲಿದೆ.












Click it and Unblock the Notifications