MSP Increased: ದೀಪಾವಳಿಗೆ ಮುನ್ನ ರೈತರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್, 2 ಪ್ರಸ್ತಾವಗಳಿಗೆ ಒಪ್ಪಿಗೆ

ಬೆಂಗಳೂರು, ಅಕ್ಟೋಬರ್ 17: ರೈತರ ಆಕ್ರೋಶ ವ್ಯಕ್ತಪಡಿಸಿದ್ದ ಹರಿಯಾಣದಲ್ಲಿಯೇ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದೆ. ಈ ಮಧ್ಯೆ ಮಹಾರಾಷ್ಟ್ರ, ಝಾರ್ಖಂಡ್ ರಾಜ್ಯದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದೆ. ಈ ಮಧ್ಯೆ ದೇಶದ ರೈತರಿಗೆ ದೀಪಾವಳಿಗೆ ಬಿಜೆಪಿ ಕೇಂದ್ರ ಸರ್ಕಾರ ಮಹತ್ವದ ಗಿಫ್ಟ್ ನೀಡಿದೆ. ಹಿಂಗಾರಿನ 06 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಳ ಮಾಡಿ ಸಂಪುಟ ಒಪ್ಪಿಗೆ ನೀಡಿದೆ.

ಹೌದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರೈತರ ಹಿತದೃಷ್ಟಿಯಿಂದ ಹಿಂಗಾರಿನಲ್ಲಿ ಬಿತ್ತನೆ ಆಗುವ 'ರಾಬಿ' ಬೆಳೆಗಳ ಪೈಕಿ ಪ್ರಮುಖ ಆರು ಬೆಳೆಗಳಿಗೆ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಿದೆ. ಈ ಕುರಿತು ರಾಜ್ಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಟ್ವೀಟ್‌ನಲ್ಲಿ 'ಸಮೃದ್ಧ ಮತ್ತು ಸಶಕ್ತ ರೈತ' ಪ್ರಧಾನಿ ಮೋದಿ ಸರ್ಕಾರದ ಆದ್ಯತೆ ಎಂದು ಕೇಂದ್ರದ ಬೆಲೆ ಹೆಚ್ಚಳ ನಿರ್ಧಾರ ಸ್ವಾಗತಿಸಿ ಪೋಸ್ಟ್ ಮಾಡಿದ್ದಾರೆ.

Central Cabinet Approved to Increased MSP for 6 Rabi Crops Check Price List

ಯಾವಾಗಿನಿಂದ ಪರಿಷ್ಕೃತ ಬೆಲೆ ಅನ್ವಯ?

ಹಿಂಗಾರಿನ ಈ ಆರು ಬೆಳೆಗಳಿಗೆ ಪ್ರತಿ ಕ್ವಿಂಟಾಲ್ ಗೆ ಬೆಲೆ 130 ರೂಪಾಯಿಯಿಂದ ಬರೋಬ್ಬರಿ 300 ರೂಪಾಯಿವರೆಗೆ ಏರಿಕೆ ಮಾಡಿ ಸರ್ಕಾರ ಅನುಮೋದನೆ ನೀಡಿದೆ. ಈ ಹೆಚ್ಚಳ ಬೆಲೆಯು ಮುಂದಿನ ವರ್ಷ 2025ರಿಂದ ಆರಂಭವಾಗಲಿರುವ 2025-2026ನೇ ಸಾಲಿನ ಮಾರುಕಟ್ಟೆ ಅವಧಿಗೆ ಅನುಗುಣವಾಗಿ ಹೆಚ್ಚಳ ಮಾಡಲಾಗಿದೆ ಎಂದು ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದಾರೆ.

ಮುಂದೆ ನಡೆಯಲಿರುವ ಎರಡು ಝಾರ್ಖಂಡ್ ಹಾಗೂ ಮಹಾರಾಷ್ಟ್ರ ಹಾಗೂ ಕೇರಳ, ಕರ್ನಾಟಕದಲ್ಲಿ ನಡೆಯಲಿರುವ ಉಪ ಚುನಾವಣೆಗಳ ಮೇಲೆ ಕೇಂದ್ರ ಸರ್ಕಾರದ ಈ ನಿರ್ಧಾರ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.

Central Cabinet Approved to Increased MSP for 6 Rabi Crops Check Price List

ಈ ಹಿಂದೆ ಮುಂಗಾರು ಬೆಳೆಯಾದ ಹೆಸರು ಇನ್ನಿತರ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಿದ್ದ ಕೇಂದ್ರ ಬಿಜೆಪಿ ಸರ್ಕಾರವು ಇದೀಗ ಹಿಂಗಾರು ಬೆಳೆಗಳಿಗೂ ಬೆಂಬಲ ಬೆಲೆ ಏರಿಕೆ ಮಾಡುವ ಮೂಲಕ ರೈತ ಪರ ಸರ್ಕಾರ ಎಂದು ಸಾಬೀತು ಮಾಡುವ ಯತ್ನದಲ್ಲಿದೆ.

ರೈತರ ಆದಾಯ ಹೆಚ್ಚಿಸಿ, ಕೃಷಿ ವೆಚ್ಚ ಕಡಿಮೆ ಮಾಡಲು ಪ್ಲಾನ್

ರಾಬಿ ಬೆಳೆ ಗೋಧಿ ಬೆಳೆಗೆ ಪ್ರತಿ ಕ್ವಿಂಟಾಲ್‌ಗೆ 2,425 ರೂ.ಗಳ ಕನಿಷ್ಠ ಬಳಿಕ ಬೆಂಬಲ ಬೆಲೆಯು ಉತ್ಪಾದನಾ ವೆಚ್ಚಕ್ಕಿಂತ 105 ಪಟ್ಟು ಹೆಚ್ಚು ಎಂದು ಅಶ್ವನಿ ವೈಷ್ಣವ್ ಅವರು ತಿಳಿಸಿದ್ದಾರೆ. ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಬೆಳೆ ವೈವಿಧ್ಯತೆ ಹೆಚ್ಚಳ ಮಾಡಲು 'ಕೃಷಿ ವೆಚ್ಚಗಳನ್ನು ನಿಭಾಯಿಸಲು ಬೆಲೆಗಳ ಆಯೋಗ (ಸಿಎಸಿಪಿ) ಬಿತ್ತನೆಗೂ ಮೊದಲೇ ರೈತರಿಗೆ ಅನುಕೂಲವಾಗುವಂತೆ ಬೆಂಬಲ ಬೆಲೆ ಹೆಚ್ಚಿಸುವಂತೆ ಶಿಫಾರಸು ಮಾಡುತ್ತದೆ.

ಈ ಹಿಂದೆ ಮುಂಗಾರು ಹಂಗಾಮಿನ ಸಮಯದಲ್ಲಿ ಕೇಂದ್ರ ಸರ್ಕಾರ ಬರೋಬ್ಬರಿ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಏರಿಕೆ ಮಾಡಿತ್ತು. ಇದೀಗ ಹಿಂಗಾರು ಹಂಗಾಮಿಗೆ 6 ಬೆಳೆಗಳಿಗೆ ಹೆಚ್ಚಳ ಘೋಷಿಸಲಾಗಿದೆ.

ರೈತಪರ ಎರಡು ಪ್ರಸ್ತಾವನೆಗಳಿಗೆ ಕೇಂದ್ರ ಒಪ್ಪಿಗೆ

ಇದರೊಂದಿಗೆ ರೈತರು ಬೆಳೆಗಳಿಗೆ ಹೆಚ್ಚಾಗಿ ಬಳಸುವ ಯೂರಿಯಾ ರಸಗೊಬ್ಬರಗಳ ಸಬ್ಸಿಡಿಗೆ 24,475 ಕೋಟಿ ರೂ. ವಿನಿಯೋಗಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದೆ. ರೈತರು ಮತ್ತು ಗ್ರಾಹಕರಿಗೆ ನೆರವಾಗುವ ಪ್ರಧಾನಿ ಮಂತ್ರಿ ಅನ್ನದಾತ್ ಆಯ್ ಸಂರಕ್ಷಣಾ ಅಭಿಯಾನ ಯೋಜನೆಗೆ 35000 ಕೋಟಿ ರೂಪಾಯಿ ನೆರವಿಗೆ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ ಎಂದು ಇದೇ ವೇಳೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದರು.

ಪ್ರತಿ ಕ್ವಿಂಟಾಲ್ ಎಂಎಸ್‌ಪಿ ಹೆಚ್ಚಳ ಪಟ್ಟಿ

* ಗೋಧಿ ಬೆಲೆ ಸದ್ಯ 2024-25ರಲ್ಲಿ ₹2275, ಮುಂದಿನ ವರ್ಷ 2025-26ರಲ್ಲಿ ₹ 22425 - MSP ₹150 ಹೆಚ್ಚಳ

* ಬಾರ್ಲಿ ಸದ್ಯ ₹1,850 ಮುಂದಿನ ವರ್ಷದ ಬೆಲೆ 1,980 ಎಂಎಸ್‌ಪಿ ಹೆಚ್ಚಳ ₹130

* ಕಡಲೆ ಸದ್ಯ ₹5,440 ಮುಂದಿನ ವರ್ಷ ₹5,650 ಎಂಎಸ್‌ಪಿ ₹210 ಏರಿಕೆ

* ಮಸೂರ್ ಸದ್ಯ 6425 ಮುಂದಿನ ವರ್ಷ ₹6700 ಎಂಎಸ್‌ಪಿ ₹275 ಏರಿಕೆ

* ರಾಫೀಡ್ ಮತ್ತು ಸಾಸಿವೆ ಸದ್ಯದ ಬೆಲೆ ₹5,650 ಮುಂದಿನ ವರ್ಷ ₹5,950 ಎಂಎಸ್‌ಪಿ ₹300 ಹೆಚ್ಚಳ

* ಕುಸುಬೆ ಸದ್ಯದ ಬೆಲೆ ₹5,800 ಮುಂದಿನ ವರ್ಷದ ಬೆಲೆ ₹5,940 ಎಂಎಸ್‌ಪಿ ₹140 ಏರಿಕೆ ಘೋಷಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+