Hebbal-Sarjapur Metro: ಕೆಂಪು ಮಾರ್ಗಕ್ಕೆ ಕೇಂದ್ರದ ಒಪ್ಪಿಗೆ ಸಿಕ್ಕಿಲ್ಲ! ಬಿಎಂಆರ್‌ಸಿಎಲ್‌ಗೆ ಮಹತ್ವದ ಸೂಚನೆ
ಬೆಂಗಳೂರು, ಜೂನ್ 09: ರಾಜಧಾನಿ ಬೆಂಗಳೂರಿನ ಉದ್ದೇಶಿತ ಮೆಟ್ರೋ ರೈಲು ಕಂಪು ಮಾರ್ಗ ಯೋಜನೆ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ನಿರಾಸೆಯಾಗಿದೆ. ಹೆಬ್ಬಾಳ -ಸರ್ಜಾಪುರ ಮಧ್ಯದ ನೂತನ ಮೆಟ್ರೋ ಮಾರ್ಗಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಕೇಂದ್ರಕ್ಕೆ ಅನುಮೋದನೆಗಾಗಿ ಪ್ರಸ್ತಾವನೆ ಕಳುಹಿಸಲಾಗಿತ್ತು. ಇದಕ್ಕೆ ಕೇಂದ್ರದಿಂದ ಅನುಮೋದನೆ ಸಿಕ್ಕಿಲ್ಲ. ಬದಲಾಗಿ ಕೇಂದ್ರವು ಒಂದಷ್ಟು ಮಾಹಿತಿ ನೀಡುವಂತೆ ಸೂಚನೆ ನೀಡಿದೆ.
ಹೆಬ್ಬಾಳ-ಸರ್ಜಾಪುರ ಮಧ್ಯೆ 36 ಕಿಲೋ ಮೀಟರ್ ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಕಾರ್ಯುಯೋಜನೆ, ಡಿಪಿಆರ್, ಅಂದಾಜು ವೆಚ್ಚದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ಬಳಿಕ ಡಿಸೆಂಬರ್ ಮೊದಲ ವಾರ ಕೇಂದ್ರಕ್ಕೆ ಅನುಮೋದನೆಗಾಗಿ ಕಳುಹಿಸಿತ್ತು. ಅಲ್ಲಿಂದ ಇಲ್ಲಿಗೆ 06 ತಿಂಗಳಾದರೂ ಕೇಂದ್ರ ವಸತಿ ಹಾಗೂ ವ್ಯವಹಾರಗಳ ಸಚಿವಾಲಯ ಕೆಂಪು ಮಾರ್ಗಕ್ಕೆ ಒಪ್ಪಿಗೆ ನೀಡಿಲ್ಲ. ಬದಲಾಗಿ ಅಂದಾಜು ವೆಚ್ಚ ಹೆಚ್ಚಾಗಿದ್ದರ ಕುರಿತು ಪ್ರಶ್ನೆ ಮಾಡಿದೆ. ಈ ಕುರಿತು ಮಾಹಿತಿ ನೀಡುವಂತೆ BMRCL ಗೆ ಸೂಚನೆ ನೀಡಿದೆ.

ರಾಜ್ಯ ಸರ್ಕಾರ ಮುಂದಿನ ಎಲ್ಲ ಮೆಟ್ರೋ ಎತ್ತರಿಸಿದ ಯೋಜನೆಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸುವಂತೆ ಹೇಳಿದೆ. ಹೀಗಾಗಿ ಅಂದಾಜು ವೆಚ್ಚ ಕೊಂಚ ಹೆಚ್ಚಾಗಿರಬಹುದು ಅಂತಲೂ ಹೇಳಲಾಗುತ್ತದೆ. ಏಕೆಂದರೆ ಕೆಂಪು ಮೆಟ್ರೋ ಮಾರ್ಗದ 39 ಕಿಲೋ ಮೀಟರ್ ಪೈಕಿ 22 ಕಿಲೋ ಮಿಟರ್ ಎತ್ತರಿಸಿದ ಮಾರ್ಗ, 14 ಕಿಲೋ ಮೀಟರ್ ಸುರಂಗ ಮಾರ್ಗ ನಿರ್ಮಿಸಲು ಯೋಜಿಸಲಾಗಿದೆ.
ಯೋಜನೆ ವೆಚ್ಚ ಹೆಚ್ಚಾಗಿದ್ದೇಕೆ? ಉತ್ತರಿಸಲು ಸೂಚನೆ
ಈ ಎತ್ತರಿಸಿ ಮಾರ್ಗವು ಹೆಚ್ಚು ಗಟ್ಟಿಯಾಗಿರಬೇಕಾದರೆ ಹೆಚ್ಚಿನ ಹಣ ತಗಲುತ್ತದೆ. ಇದರಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಬಂದರಂತೂ ಖರ್ಚು ಹೆಚ್ಚಾಗುತ್ತದೆ. ಇದೆಲ್ಲ ಕಾರಣದಿಂದ ಕೇಂದ್ರ ಸಾಲ ಹಾಗೂ ವಿವಿಧ ಹಣಕಾಸು ಮೂಲಗಳಿಂದ ಈ ಕೆಂಪು ಮಾರ್ಗವನ್ನು ಒಟ್ಟು 28,400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಮುಂದಾಗಿದೆ. ಈ ಸಂಬಂಧ ರಾಜ್ಯ ಸರ್ಕಾರಿದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೆ ಕೇಂದ್ರ ಸರ್ಕಾರದಿಂದ ಅನುಮೋದನೆ ಬಾಕಿ ಇದೆ. ಹೀಗಿದ್ದಾಗಲೂ ಅಂದಾಜು ವೆಚ್ಚ ಏಕೆ ಹೆಚ್ಚಾಗಿದೆ ಎಂದು ಪ್ರಶ್ನಿಸಿದೆ. ಈ ಬಗ್ಗೆ ತಕ್ಕ ಸಮರ್ಥನೆಯನ್ನು ಬಿಎಂಆರ್‌ಸಿಎಲ್ ನೀಡಿದರೆ, ಅದು ಸರಿ ಎನಿಸಿದರೆ ಶೀಘ್ರವೇ ಕೆಂಪು ಮಾರ್ಗಕ್ಕೆ ಅನುಮೋದನೆ ದೊರೆಯುವ ವಿಶ್ವಾಸವಿದೆ.
ಹೆಬ್ಬಾಳದಿಂದ ಎಚ್‌ಎಸ್ ಬಡಾವಣೆ, ಸರ್ಜಾಪುರ ಹೀಗೆ ಪ್ರಮುಖ ಮಾರ್ಗಗಳು, ಐಟಿ ಕಾರಿಡಾರ್‌ಗಳ ಮೂಲಕ ಹಾದು ಹೋಗುತ್ತಿದೆ. ಹೀಗಾಗಿ ಇದೊಂದು ನಿರ್ಣಾಯಕ ಪಾತ್ರ ವಹಿಸುವುದರಲ್ಲಿ ಅನುಮಾನ ಇಲ್ಲ. ಈ ಭಾಗದಲ್ಲಿ ಈಗಾಗಲೇ ರಿಯಲ್ ಎಸ್ಟೇಟ್‌ಗೆ ಸಾಕಷ್ಟು ಬೇಡಿಕೆ ಸೃಷ್ಟಿಯಾಗುತ್ತಿದೆ.
ಕೆಂಪು ಮೆಟ್ರೋ ಮಾರ್ಗ ನಿಲ್ದಾಣಗಳು
ಈ ಮಾರ್ಗದಲ್ಲಿ ''ಸರ್ಜಾಪುರ, ಅಗ್ರಹಾರ ರಸ್ತೆ, ದೊಡ್ಡಕನ್ನಳ್ಳಿ,ಕೆರ್ಮಲಾರಂ, ಕೈಕೊಂಡೂರು,ಬೆಳ್ಳಂದೂರು ಗೇಟ್ , ಅಗರ, ಇಬ್ಬಲೂರು, ಎಚ್‌ಎಸ್‌ಆರ್‌ಲೇಔಟ್, ಕೋರಮಂಗಲ 2ನೇ ಬ್ಲಾಕ್, ಕೋರಮಂಗಲ 3ನೇ ಬ್ಲಾಕ್, ಜಕ್ಕಸಂದ್ರ,, ಡೈರಿ ಸರ್ಕಲ್, ನಿಮ್ಹಾನ್ಸ್, ಶಾಂತಿನಗರ, ಟೌನ್‌ಹಾಲ್, ಕೆ.ಆರ್.ವೃತ್ತ, ಬಸವೇಶ್ವರ ವೃತ್ತ, ಪ್ಯಾಲೇಸ್ ಗುಟ್ಟಹಳ್ಳಿ, ಗಾಲ್ಫ್ ಕ್ಲಬ್, ಮೇಖ್ರಿ ವೃತ್ತ, ಪಶುವೈದ್ಯಕೀಯ ಮಹಾವಿದ್ಯಾಲಯ, ಗಂಗಾನಗರ ಮತ್ತು ಹೆಬ್ಬಾಳ'' ವರೆಗೆ ಒಟ್ಟ 28 ನಿಲ್ದಾಣಗಳು ಈ ಸರ್ಜಾಪುರ-ಹೆಬ್ಬಾಳ ಕೆಂಪು ಮಾರ್ಗದಲ್ಲಿ ನಿರ್ಮಾಣಗೊಳ್ಳಲಿವೆ ಎಂದು ಬಿಎಂಆರ್‌ಸಿಎಲ್ ಯೋಜನೆ ಡಿಪಿಆರ್‌ನಲ್ಲಿ ಉಲ್ಲೇಖಿಸಿದೆ.
ಅನುಮೋದನೆ, ಕಾಮಗಾರಿ ಆರಂಭಕ್ಕೆ ವಿಳಂಬವಾದರೆ 20230ಕ್ಕೆ ತಯಾರಾಗಬೇಕಾದ ಮೆಟ್ರೋ ಕೆಂಪು ಮಾರ್ಗ ಮತ್ತಷ್ಟು ವಿಳಂಬವಾಗುವ ನಿರೀಕ್ಷೆ ಇದೆ.












Click it and Unblock the Notifications