ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ವಿದೇಶಿ ವಾಸಿಗಳ ಮನೆಗಳ ಮೇಲೆ ಸಿಸಿಬಿ ಪೋಲೀಸರ ದಾಳಿ!

|
Google Oneindia Kannada News

ಬೆಂಗಳೂರು, ಜು. 15: ರಾಜಧಾನಿಯಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಪತ್ತೆ ಮಾಡುವ ಕಾರ್ಯಕ್ಕೆ ಸಿಸಿಬಿ ಪೊಲೀಸರು ಚಾಲನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ವಿದೇಶಿಯರ ಮನೆಗಳಿಗೆ ಎಂಟ್ರಿ ಕೊಟ್ಟಿರುವ ಸಿಸಿಬಿ ಪೊಲೀಸರು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ವಿದೇಶಿಯರನ್ನು ಪತ್ತೆ ಮಾಡಿ ಕ್ರಮ ಜರುಗಿಸುವ ವಿನೂತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ''ವಿದೇಶಿಯರು ತಂಗಿರುವ ಮನೆಗಳಿಗೆ ದಿಢೀರ್ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ವೀಸಾ ಅವಧಿ ಮುಗಿದರೂ ಇಲ್ಲೇ ನೆಲೆಸಿರುವರನ್ನು ಪತ್ತೆ ಮಾಡುವ ಸಂಬಂಧ ಶೋಧ ಕಾರ್ಯ ಮುಂದುವರೆದಿದೆ. ಆರು ಎಸಿಪಿಗಳು, 20 ಇನ್ಸ್‌ಪೆಕ್ಟರ್ ಹಾಗೂ ನೂರಕ್ಕೂಹೆಚ್ಚು ಇಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ. ಈವರೆಗೂ ಸುಮಾರು ಆರು ಮಂದಿ ಅಕ್ರಮವಾಗಿ ವಾಸವಾಗಿರುವರ ವಿವರ ಸಿಕ್ಕಿದ್ದು, ಅವರನ್ನು ಮಾತೃ ದೇಶಕ್ಕೆ ಕಳುಹಿಸುವ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

 Bengaluru: CCB searching houses where foreign nationals were residing to check for visa violations, over staying

ರಾಜ್ಯದಲ್ಲಿ ಇತ್ತೀಚೆಗೆ ಪತ್ತೆಯಾಗಿರುವ ಮಾದಕ ವಸ್ತು ಜಾಲ ಪ್ರಕರಣ ಹಾಗೂ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ವಿದೇಶಿಯರೇ ಭಾಗಿಯಾಗಿರುವುದು ಕಂಡು ಬಂದಿತ್ತು. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಲ್ಲಿ ವಾಸ ಮಾಡುವರ ವಿವರವನ್ನು ಸಂಗ್ರಹಿಸಲು ವಿನೂತನ ಆಪ್ ಅಭಿವೃದ್ಧಿ ಪಡಿಸುತ್ತಿರುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಹೇಳಿಕೆ ನೀಡಿದ್ದರು. ಪೊಲೀಸರ ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದು ಸ್ವಾತಂತ್ರ್ಯ ಹರಣ ಎಂದೇ ಆರೋಪಿಸಲಾಗಿತ್ತು.

 Bengaluru: CCB searching houses where foreign nationals were residing to check for visa violations, over staying

Recommended Video

Sandesh Prince- ಸಾಕ್ಷ್ಯ ಬೇಕು ಅಂದ್ರೆ CCTV ಫೂಟೇಜ್ ಚೆಕ್ ಮಾಡಿ! | Oneindia Kannada

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಆದೇಶದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಅಕ್ರಮವಾಗಿ ವಾಸ ಮಾಡುತ್ತಿರುವ ವಿದೇಶಿಯರನ್ನು ಪತ್ತೆ ಮಾಡಲು ಮುಂದಾಗಿದ್ದಾರೆ. ಮೊದಲ ಹಂತದಲ್ಲಿ ಸಿಸಿಬಿ ಪೊಲೀಸರು ವಿದೇಶಿಯರನ್ನು ಟಾರ್ಗೆಟ್ ಮಾಡಿ ದಾಳಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚಾಗಿ ಬಾಂಗ್ಲಾ ಹಾಗೂ ದಕ್ಷಿಣ ಆಫ್ರಿಕಾ ಮೂಲದವರೇ ವಾಸಿಯಾಗಿದ್ದಾರೆ. ಮಾದಕ ಜಾಲ ದಕ್ಷಿಣ ಆಫ್ರಿಕಾ ಮೂಲದ ವಿದೇಶಿಯರ ಕೈಯಲ್ಲಿದ್ದರೆ, ವೇಶ್ಯಾವಾಟಿಕೆ ದಂಧೆ, ಗಾಂಜಾ ಮಾರಾಟ ದಂಧೆಯಲ್ಲಿ ಬಾಂಗ್ಲಾದೇಶಿಯರು ಅನೇಕ ಪ್ರಕರಣಗಳಲ್ಲಿ ಸಿಕ್ಕಿ ಬಿದ್ದಿದ್ದು ಗಮನಾರ್ಹ.

English summary
CCB police Raided and searching the homes of foreigners residing illegally in Bangalore. Six have been identified as illegal staying in bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X