ಕುಖ್ಯಾತ ರೌಡಿ ಸೈಲೆಂಟ್ ಸುನೀಲನ ಸಹಚರರ ಬಂಧನ
ಬೆಂಗಳೂರು, ಫೆಬ್ರವರಿ 15: ಮಾರಕಾಸ್ತ್ರಗಳೊಂದಿಗೆ ದರೋಡೆ ಮಾಡಲು ಸಜ್ಜಾಗಿದ್ದ ಕುಖ್ಯಾತ ರೌಡಿ ಸೈಲೆಂಟ್ ಸುನೀಲನ ಸಹಚರರನ್ನು ಸಿಸಿಬಿ ಪೊಲೀಸರು ಗುರುವಾರ ಮುಂಜಾನೆ ಬಂಧಿಸಿದ್ದಾರೆ
ನಗರದ ಸುಬ್ರಮಣ್ಯಪುರ ಪೊಲೀಸ್ ಠಾಣಾ ಸರಹದ್ದಿನ ರಾಜಾಜಿನಗರ 1ನೇ ಬ್ಲಾಕ್, ನಾಗಪುರ ವಾರ್ಡ್, 10ನೇ ಕ್ರಾಸ್‌ನಲ್ಲಿರುವ ಆಟದ ಮೈದಾನದ ಬಳಿಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಕಾಯುತ್ತಿರುವ ಸುಳಿವು ದೊರೆತ ಕಾರಣ ದಾಳಿ ಮಾಡಿದ ಪೊಲೀಸರು 5 ಮಂದಿ ರೌಡಿಗಳನ್ನು ಬಂಧಿಸಿದ್ದಾರೆ.
ಬಂಧನಕ್ಕೊಳಗಾದ ರೌಡಿಗಳು ಸ್ಲಂ ಭರತ ಎಂಬುವನ ಸಹಚರರ ಮೇಲೆ ಹಲ್ಲೆ ಮಾಡಿ ಅವರ ಬಳಿ ಇರುವ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ದೋಚಲು ಸಜ್ಜಾಗಿದ್ದರು ಎಂಬ ಮಾಹಿತಿಯನ್ನು ಸಿಸಿಬಿ ಪೊಲೀಸರು ಕಲೆ ಹಾಕಿದ್ದಾರೆ.

ಲಕ್ಷ್ಮೀನಾರಾಯಣ ಅಲಿಯಾಸ್ ಲಕ್ಕಿ, ಮಂಜುನಾಥ್ ಅಲಿಯಾಸ್ ಕಿರಿಕ್ ಮಂಜ, ಪ್ರವೀಣ್ ವಿಕ್ಕಿ ಅಲಿಯಾಸ್ ವಿಕ್ಕಿ, ಚಂದ್ರಶೇಖರ್ ಹಾಗೂ ಹೇಮಂತ ಎಂಬುವವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು ಇವರೆಲ್ಲರೂ ಕುಖ್ಯಾತ ರೌಡಿ ಸೈಲೆಂಟ್ ಸುನೀಲನ ಸಹಚರರು ಎನ್ನಲಾಗಿದೆ.
ಬಂಧನಕ್ಕೊಳಗಾಗಿರುವರೆಲ್ಲರ ಮೇಲೂ ಕೊಲೆ, ಸುಲಿಗೆ, ದರೋಡೆ, ಕೊಲೆ ಯತ್ನದಂತಹಾ ಗಂಭೀರ ಪ್ರಕರಣಗಳು ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.












Click it and Unblock the Notifications