ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡ್ರಗ್ ಪೆಡ್ಲರ್‌ನ ಚಾಮರಾಜ ಜಮೀನು ಸೇರಿ 50 ಲಕ್ಷದ ಆಸ್ತಿ ಮುಟ್ಟುಗೋಲು

|
Google Oneindia Kannada News

ಬೆಂಗಳೂರು, ಜುಲೈ 09: ಡ್ರಗ್ ಪೆಡ್ಲರ್‌ಗಳಿಗೆ ಬುದ್ದಿ ಕಲಿಸಲು ಸಿಸಿಬಿ ಅಧಿಕಾರಿಗಳು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ಪ್ರಥಮ ಬಾರಿಗೆ ಸಿಸಿಬಿ ಪೊಲೀಸರು ಡ್ರಗ್ ಪೆಡ್ಲರ್ ಗಾಂಜಾವನ್ನು ಮಾರಾಟವನ್ನು ಮಾಡಿ ಅಕ್ರಮವಾಗಿ ಸಂಪಾದಿಸಿದ್ದ 50 ಲಕ್ಷ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಸಿಸಿಬಿ ಪೊಲೀಸರು ಎನ್‌ಡಿಪಿಎಸ್ ಕಾಯ್ದೆ ಅಧ್ಯಾಯ 5a, 68e & Fರಲ್ಲಿನ ಅಧಿಕಾರವನ್ನು ಬಳಸಿ ಗಾಂಜ ಕಳ್ಳಸಾಗಣೆ ದಂಧೆಯಿಂದ ಆರೋಪಿ ಅಕ್ರಮವಾಗಿ ಗಳಿಸಿದ್ದ ಮುಟ್ಟುಗೋಲು ಹಾಕಿದ್ದರೆ. 50 ಲಕ್ಷ ಮೌಲ್ಯದ ಚರಾಸ್ಥಿ ಸ್ಥಿರಾಸ್ಥಿಗಳನ್ನು ಮುಟ್ಟುಗೋಲು ಆದೇಶ ಹೊರಡಿಸಿ ಸಕ್ಷಮ ಪ್ರಾಧಿಕಾರದ ಅನುಮೋದನೆಯನ್ನು ಪಡೆಯುವಲ್ಲಿಯು ಯಶಸ್ವಿಯಾಗಿದ್ದಾರೆ.

ಗಾಂಜಾ ಮಾರಾಟದ ಅರೋಪದಲ್ಲಿ ಮಲ್ಲೇಶ್ ಎಂಬಾತನನ್ನು ಬಂಧಿಸಲಾಗಿತ್ತು. ಈತ ಕಳೆದ 10-12 ವರ್ಷಗಳಿಂದ ನಿರಂತರವಾಗಿ ಗಾಂಜಾ ಕಳ್ಳಸಾಗಣೆ ಮೂಲಕ ಮಾರಾಟವನ್ನು ಮಾಡುತ್ತಿದ್ದ. ಈ ಬಗ್ಗೆ ನಿಖರ ಮಾಹಿತಿಯನ್ನು ಪಡೆದಿದ್ದ ಸಿಸಿಬಿ ಪೊಲೀಸರು ಮಲ್ಲೇಶ್‌ನನ್ನು ಬಂಧಿಸಿದ್ದರು. ಮಲ್ಲೇಶ್ 2014 ರಿಂದ 2022ವರೆಗೂ ಗಾಂಜಾವನ್ನು ಮಾರಾಟವನ್ನು ಮಾಡಿದ್ದಾನೆ. ಈತನ ವಿರುದ್ಧ 7ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಇವನ ವಿರುದ್ಧ ಮಾದಕ ದ್ರವ್ಯ ನಿಗ್ರಹ ದಳದ ಇನ್ಸ್ ಪೆಕ್ಟರ್ ತನಿಖಾಧಿಕಾರಿಯನ್ನಾಗಿ ನೇಮಕವನ್ನು ಮಾಡಲಾಗಿತ್ತು.

ಮಲ್ಲೇಶ್‌ನ ಆಸ್ತಿಯ ಮೌಲ್ಯವೆಷ್ಟು?

ಮಲ್ಲೇಶ್‌ನ ಆಸ್ತಿಯ ಮೌಲ್ಯವೆಷ್ಟು?

ಚಾಮರಾಜನಗರ ಹನೂರು ತಾಲೂಕಿನ ಪುಷ್ಪಪುರ ಗ್ರಾಮದ ನಿವಾಸಿ ಮಲ್ಲೇಶ್. ಜಿ. ಈತ ತಮಿಳುನಾಡು ಆಂಧ್ರಪ್ರದೇಶ, ಒರಿಸ್ಸಾ ರಾಜ್ಯಗಳಿಂದ ನಿಷೇಧಿತ ಮಾದಕವಸ್ತುವಾದ ಗಾಂಜಾವನ್ನು ಖರೀದಿಸಿ ಅಕ್ರಮವಾಗಿ ಮಾರಾಟವನ್ನು ಮಾಡುತ್ತಿದ್ದ. ಗಾಂಜಾ ಮಾರಾಟದಿಂದ ಗಳಿಸಿದ್ದ ಅಕ್ರಮ ಹಣದಿಂದ ಪತ್ನಿ ಮತ್ತು ಮಗನ ಹೆಸರಿನಲ್ಲಿ ಆಸ್ತಿಯನ್ನು ಸಂಪಾದನೆಯನ್ನು ಮಾಡಿದ್ದ. ಚಾಮರಾಜನಗರ ಶಾಗ್ಯ ಗ್ರಾಮದಲ್ಲಿ ಕೃಷಿಗೆ 8 ಎಕರೆ ಜಮೀನು ಮತ್ತು ಐದು ಬ್ಯಾಂಕ್‌ಗಳಲ್ಲಿ 3 ಲಕ್ಷ ಹಣವನ್ನಿಟ್ಟಿದ್ದ. ಈ ಆಸ್ತಿಯನ್ನು ಮುಟ್ಟುಗೋಲು ಆದೇಶವನ್ನ ಜೂನ್ ರಂದು ಹೊರಡಿಸಲಾಗಿತ್ತು.

ಆದಾಯ ತೆರಿಗೆಗೂ ವಂಚನೆ

ಆದಾಯ ತೆರಿಗೆಗೂ ವಂಚನೆ

ಮಲ್ಲೇಶ್ ತನ್ನ ಪತ್ನಿ ಮತ್ತು ಮಗನ ಹೆಸರಿನಲ್ಲಿ ವಹಿವಾಟನ್ನು ಮಾಡಿರುವುದು. ಇವರ ಅಕೌಂಟಿಗೆ ಬೇರೆ ಬೇರೆ ಕಡೆಯಿಂದ ಲಕ್ಷಾಂತರ ಹಣ ವಹಿವಾಟು ನಡೆದಿರುವುದು ಸಿಸಿಬಿ ತನಿಖೆಯಿಂದ ಗೊತ್ತಾಗಿದೆ. ಇದರ ಜೊತೆಗೆ ಆದಾಯ ತೆರಿಗೆ ಇಲಾಖೆಗೂ ವಂಚನೆಯನ್ನು ಮಾಡಲಾಗಿದೆ. ಈತ ಖರೀದಿಸಿರು 8 ಎಕರೆ ಕೃಷ್ಟಿ ಜಮೀನಿನ ಗೈಡೆನ್ಸ್ ಮೌಲ್ಯ 32 ಲಕ್ಷಗಳಾಗಿದ್ದೂ ಮಾರುಕಟ್ಟೆಯ ಮೌಲ್ಯ 50 ಲಕ್ಷಗಳಾಗಿದೆ. ಇವೆಲ್ಲವೂ ಅಕ್ರಮವಾಗಿ ಸಂಪಾದಿಸಿರುವ ಆಸ್ತಿಯಾಗಿರುವುದರಿಂದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಡ್ರಗ್ ಪೆಡ್ಲರ್‌ಗಳಿಗೆ ಎಚ್ಚರಿಕೆ

ಡ್ರಗ್ ಪೆಡ್ಲರ್‌ಗಳಿಗೆ ಎಚ್ಚರಿಕೆ

ಸಕ್ಷಮ ಪ್ರಾಧಿಕಾರ ಆಡಳಿತಾಧಿಕಾರಿಗಳು SAFEM(FOP) & NDPSA ಚೆನ್ನೈರವರು ಎನ್‌ಡಿಪಿಎಸ್ ಕಾಯ್ದ ಅಧ್ಯಾಯ 5ಎ ಕಾಲಂ 68(ಎಫ್)(2)ರಂತೆ 30 ದಿನಗಳಲ್ಲಿ ಕೂಲಂಕಷವಾಗಿ ಪರಿಶಾಲನೆಯನ್ನು ನಡೆಸಿ ವಿಚಾರಣೆಯನ್ನು ನಡೆಸಿ ಈ ಮುಚ್ಚುಗೋಲು ಆದೇಶವನ್ನು ದಿನಾಂಕ 8.7.2022ರಂದು ಅನುಮೋದನೆಯನ್ನು ಕೊಟ್ಟಿದ್ದಾರೆ. ಈ ಮೂಲಕ ಡ್ರಗ್ಸ್ ಮಾರಾಟವನ್ನು ಮಾಡಿ ಅಕ್ರಮವಾಗಿ ಆಸ್ತಿಯನ್ನು ಸಂಪಾದನೆಯನ್ನು ್ಮಾಮಾಡಿದರೇ ಆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನು ಸಿಸಿಬಿ ನೀಡಿದೆ.

ರಾಜ್ಯದಲ್ಲಿ ಎರಡನೇ ಪ್ರಕರಣ

ರಾಜ್ಯದಲ್ಲಿ ಎರಡನೇ ಪ್ರಕರಣ

ಬೆಂಗಳೂರು ಗ್ರಾಮಾಂತರ ಪೊಲೀಸರು ಅಂಜಯ್ ಕುಮಾರ್ ಎಂಬಾತನ ಆಸ್ತಿ ಪಾಸ್ತಿಯನ್ನು ಈ ಹಿಂದೆ ಮೊದಲ ಬಾರಿಗೆ ಜಪ್ತಿ ಮಾಡಿದ್ದರು. ಈಗ ನಗರ ಸಿಸಿಬಿ ಪೊಲೀಸರು ಮೊದಲ ಬಾರಿಗೆ ಗಾಂಜಾ ಪೆಡ್ಲಿಂಗ್ ಮಾಡಿದ್ದ ಮಲ್ಲೇಶ್ ನ ಆಸ್ತಿ ಪಾಸ್ತಿ ಜಪ್ತಿ ಮಾಡಿದ್ದಾರೆ. ರಾಜ್ಯದಲ್ಲಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದವರ ಆಸ್ತಿ ಮುಟ್ಟುಗೋಲಿನ ಎರಡನೇ ಪ್ರಕರಣ ಇದಾಗಿದೆ.

Recommended Video

Virat Kohli West Indies ಸರಣಿಯಿಂದ ಖುದ್ದಾಗಿ ಹೊರಹೋಗುತ್ತಿದ್ದಾರೆ | *Cricket | Oneindia Kannada

English summary
CCB in attaching the property of drug offender for first time in Bengaluru city, his Property worth of 50 lakh 8 acare land and 3 lakh cash attaching,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X