ಉದ್ಯಮಿ ಕಪಾಲಿ ಮೋಹನ್ ಮನೆ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿ
ಬೆಂಗಳೂರು, ಅಕ್ಟೋಬರ್ 14: ನಗರದ ಪ್ರತಿಷ್ಠಿತ ಹೊಟೆಲ್ ವೊಂದರಲ್ಲಿ ನಡೆದಿದ್ದ ವ್ಯವಸ್ಥಿತ ಜೂಜಾಟಕ್ಕೆ ಬೆಂಗಳೂರು ಕ್ರೈಂ ಬ್ರ್ಯಾಂಚ್ ಪೊಲೀಸರು ಬ್ರೇಕ್ ಹಾಕಿದ್ದಾರೆ.
ಯಶವಂತಪುರದಲ್ಲಿರುವ ಆರ್ . ಜಿ ಹೋಟೆಲ್ ಮೇಲೆ ಸಿಸಿಬಿ ಹಿರಿಯ ಅಧಿಕಾರಿ ಗಿರೀಶ್ ನೇತೃತ್ವದ ತಂಡವು ದಾಳಿ ನಡೆಸಿದೆ.

ಜೂಜಾಟವಾಡಲು ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ಗಿರಾಕಿಗಳು ಬಂದಿದ್ದಾರೆ. ಅವರನ್ನು ವಿಮಾನದಿಂದ ಕರೆಸಿಕೊಂಡು ಟೋಕನ್ ವಿತರಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಜೂಜಾಟದಲ್ಲಿ ಭಾಗಿಯಾಗಿದ್ದ 47 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, 3.5 ಕೋಟಿ ರು ಮೌಲ್ಯದ ಜೂಜಾಟದ ಟೋಕನ್,7 ಲಕ್ಷ ರು ನಗದನ್ನು ಜಪ್ತಿ ಮಾಡಲಾಗಿದೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.












Click it and Unblock the Notifications