ಕಾವೇರಿ ವಿವಾದ: ತಮಿಳುನಾಡಿಗೆ ನ್ಯಾಯ, ಕರ್ನಾಟಕಕ್ಕೆ ಅನ್ಯಾಯ, ಯಾರು ಹೇಳೋರಿಲ್ಲ ಕೇಳೋರಿಲ್ಲ: ವಾಟಾಳ್ ಆಕ್ರೋಶ
ಬೆಂಗಳೂರು, ಸೆಪ್ಟೆಂಬರ್, 26: ಇದೀಗ ತಮಿಳುನಾಡಿಗೆ ಮತ್ತೆ 18 ದಿನಗಳ ಕಾಲ ಪ್ರಾಧಿಕಾರ 3 ಸಾವಿರ ಕ್ಯೂಸೆಕ್ ನೀರನ್ನ ಬಿಡಲು ಹೇಳಿದೆ. ಇದು ಕರ್ನಾಟಕ್ಕೆ ಅನ್ಯಾಯ, ಮೋಸ. ಯಾರು ಹೇಳೋರಿಲ್ಲ ಕೇಳೋರಿಲ್ಲ. ಇದು ಕನ್ನಡಿಗರ ಕಣ್ಣೀರಿನ ವ್ಯಥೆಯಾಗಿದೆ ಎಂದು ವಾಟಾಳ್ ನಾಗರಾಜ್ ಬೆಂಗಳೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮಿಳಿನಾಡಿಗೆ ನ್ಯಾಯ, ಕರ್ನಾಟಕಕ್ಕೆ ಅನ್ಯಾಯ. ಬೆಂಗಳೂರಿಗೆ ಕುಡಿಯಲು ನೀರಿಲ್ಲ, ಮಂಡ್ಯ ರೈತರಿಗೆ ನೀರಿಲ್ಲ. ಸರ್ಕಾದ ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ತಮಿಳುನಾಡಿಗೆ ನೀರನ್ನು ಬಿಡಬಾರದು. ಕರ್ನಾಟಕ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯಬಾರದು. ನಾಳೆ ಬೆಳಗ್ಗೆ 11:30ಕ್ಕೆ ಮುಖ್ಯಮಂತ್ರಿ ಅವರ ಮನೆ ಮುಂದೆ ಕನ್ನಡ ಒಕ್ಕೂಟದಿಂದ ಸತ್ಯಾಗ್ರಹ ಮಾಡಿ ನೀರು ಬೀಡದಂತೆ ಒತ್ತಾಯ ಮಾಡುತ್ತೇವೆ ಎಂದರು. ಹಾಗೆಯೇ ಇದೇ ವಿಚಾರವಾಗಿ ಸೆಪ್ಟೆಂಬರ್ 29ಕ್ಕೆ ಕರ್ನಾಟಕ ಬಂದ್ ಮಾಡುತ್ತೇವೆ ಎಂದರು.

ಕಾವೇರಿ ವಿವಾದ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ್ದೇನು?
ಕರ್ನಾಟಕ, ಸೆಪ್ಟೆಂಬರ್, 26: ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ಹರಿಸುತ್ತಿರುವ ಹಿನ್ನೆಲೆ ರಾಜ್ಯಾಂದ್ಯಂತ ರೈತರು ಸಮರ ಮುಂದುವರಸಿದ್ದಾರೆ. ಹಾಗೆಯೇ ಕನ್ನಡ ಸಿನಿಮಾ ತಾರೆಯರು ಕೂಡ ರೈತರ ಪರ ಧ್ವನಿ ಎತ್ತುತ್ತಿದ್ದಾರೆ. ಅಲ್ಲದೆ ಇಂದು ನಟ ಗೋಲ್ಡನ್ ಸ್ಟಾರ್ ಗಣೇಶ ಅವರು ನಮ್ಮ ನೆಲ ನಮ್ಮ ಜಲ, ಮೊದಲು ನಮ್ಮ ಜನಕ್ಕೆ ಎಂದು ಟ್ವೀಟ್ ಮೂಲಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಮುಂಗಾರು ಮಳೆ ಅಭಾವದಿಂದ ರೈತರ ಕೃಷಿಗೆ ಮತ್ತು ಕುಡಿಯುವ ನೀರಿಗೆ ಸಹ ಸಮಸ್ಯೆ ಉಂಟಾಗುತ್ತಿದೆ . ಕಾವೇರಿ ನಮ್ಮ ಮೂಲ ಸಂಪನ್ಮೂಲ ಆದ ಕಾರಣ ಸರ್ಕಾರವು ಎಲ್ಲಾ ವಿಷಯವನ್ನು ಗಮನಿಸಿ, ನಮ್ಮ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರಕ್ಕೆ ಅರ್ಥ ಮಾಡಿಸಲಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
"ಅಂದು ಇಂದು ಎಂದೆಂದಿಗೂ ಕಾವೇರಿ ನಮ್ಮದು. ಮಳೆ ಇಲ್ಲದೆ ನಮ್ಮ ರಾಜ್ಯದ ಜನಕ್ಕೆ ಕುಡಿಯಲು ನೀರಿಲ್ಲದ ಪರಿಸ್ಥಿಯಲ್ಲಿ ತಮಿಳು ನಾಡಿನ ರೈತರಿಗೆ ಬೆಳೆ ಬೆಳೆಯಲು ನೀರು ಬಿಡಬೇಕು ಎನ್ನುವ ಆದೇಶಕ್ಕೆ ನಮ್ಮ ಧಿಕ್ಕಾರವಿದೆ. ನಾಡು ನುಡಿ ನೀರಿನ ವಿಷಯದಲ್ಲಿ ನಮ್ಮ ರಾಜ್ಯದ ಪರ ನಮ್ಮ ಬೆಂಬಲ ಸದಾ ಇರುತ್ತದೆ," ಎಂದು ನಟ ಕಿಚ್ಚ ಸುದೀಪ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications