ಯುಪಿ ಅರ್ಚಕರು ಕರೆಸಿ ಸ್ಯಾಂಕಿ ಕೆರೆಯಲ್ಲಿ 'ಕಾವೇರಿ ಆರತಿ': BWSSB ಅಧ್ಯಕ್ಷರ ದರ್ಬಾರ್‌ಗೆ ಆಕ್ರೋಶ
ಬೆಂಗಳೂರು, ಮಾರ್ಚ್ 18: ರಾಜಧಾನಿ ಬೆಂಗಳೂರಿನಲ್ಲಿ ಸ್ಯಾಂಕಿ ಕೆರೆಯಲ್ಲಿ ಇದೇ ಮಾರ್ಚ್ 21 ರ ಸಂಜೆ 6 ಗಂಟೆಗೆ 'ಕಾವೇರಿ ಆರತಿ' ಆಯೋಜಿಸಲಾಗಿದೆ. ನೀರಿನ ಮರು ಬಳಕೆ, ಅಂತರ್ಜಲ ಮರುಪೂರಣ ಹಾಗೂ ಮಳೆ ನೀರು ಕೊಯ್ಲು ಬಗ್ಗೆ ಜಾಗೃತಿ ಸಲುವಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)ಯಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಸದ್ಯ ಈ ಕಾರ್ಯಕ್ರಮದ ಖರ್ಚು ವೆಚ್ಚದ ಕುರಿತು ಟೀಕೆ, ಆಕ್ರೋಶಗಳು ವ್ಯಕ್ತವಾಗಿವೆ.
ಬೆಂಗಳೂರು ನಗರಕ್ಕೆ ನೀರು ಪೂರೈಸುವ ಕಾವೇರಿ ನದಿಗೆ ನಮನ ಸಲ್ಲಿಸುವ ಉದ್ದೇಶ ಮತ್ತು ನೀರಿನ ಉಳಿತಾಯದ ಅಂಶಗಳ ಜಾಗೃತಿಗಾಗಿ ರಾಜ್ಯ ಸರ್ಕಾರ, ಬೆಂಗಳೂರು ಜಲಮಂಡಳಿ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ "ಕಾವೇರಿ ಆರತಿ" ಆಯೋಜಿಸಲಾಗಿದೆ. ಇದೇ ವೇಳೆ "ವಿಶ್ವ ಜಲ ಪ್ರತಿಜ್ಞೆ" ಸ್ವೀಕಾರ ಅಭಿಯಾನಕ್ಕೂ ಚಾಲನೆ ನೀಡಲಾಗುತ್ತದೆ.

ಉತ್ತರ ಪ್ರದೇಶದಿಂದ ಅರ್ಚಕರನ್ನು ಈ 'ಕಾವೇರಿ ಆರತಿ' ಪೂಜೆಗಾಗಿ ಕರೆಸಲಾಗುತ್ತದೆ. ವಿಮಾನಗಳ ಮೂಲಕ ಅವರನ್ನು ಬೆಂಗಳೂರಿಗೆ ಕರೆಯಿಸಿ ಸ್ಯಾಂಕಿ ಕೆರೆಯಲ್ಲಿ ಪೂಜೆ ನೆರವವೇರಿಸಲಾಗುತ್ತದೆ. ಈ ಕುರಿತು BWSSB ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ಅವರ ನಡೆಗೆ ಆಕ್ರೋಶ ಕೇಳಿ ಬಂದಿದೆ.
ಈ ಕಾರ್ಯಕ್ರಮಕ್ಕೆ ವೆಚ್ಚದ ಮಿತಿಯನ್ನೇ ಇಟ್ಟಿಲ್ಲವೇ? ಭಾಗಮಂಡಲದಿಂದ ನೀರು ತಂದು ಪ್ರಸಾದವೆಂದು ಅದೇ ದಿನ ನಗರ ಸುಮಾರು 10,000 ಜನಕ್ಕೆ ಹಂಚಲು ಪ್ಲಾನ್ ಮಾಡಿಕೊಂಡಿದ್ದಾರೆ. ಐಎಎಸ್ ಅಧಿಕಾರಿಗಳು ಆಗಿರುವ ಅಧ್ಯಕ್ಷರು ಈ ಕುರಿತು ಯೋಚಿಸಬೇಕಿಲ್ಲವೇ. ಇಂತಹ ಹುಚ್ಚಾಟಕ್ಕೆ ಮಿತಿ ಇಲ್ಲವೇ ಅಂತಲೂ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಲಾಗಿದೆ.
ಗ್ರೇಟರ್ ಬೆಂಗಳೂರು ಮಸೂದೆ ಪಾಸ್ ಮಾಡಿ ಅಭಿವೃದ್ಧಿ ಚಿಂತನೆಯಲ್ಲಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಬರಲಿದ್ದಾರೆ. ಈ ಬಗ್ಗೆ ಅವರು ಯೋಚಿಸಬೇಕಿದೆ. ಬೇಸಿಗೆ ಸಂದರ್ಭದಲ್ಲಿ ನೀರಿನ ಬೇಡಿಕೆ ಹೆಚ್ಚಿರುತ್ತದೆ. ಇದೇ ವೇಳೆ ನೀರಿನ ದರ ಪೈಸೆ ಲೆಕ್ಕದಲ್ಲಿ ಏರಿಕೆಗೆ ಸರ್ಕಾರ ಮುಂದಾಗಿದೆ. ಮತ್ತೊಂದೆಡೆ ನೀರಿನ ಟ್ಯಾಂಕರ್ ಬೆಲೆ ಹೆಚ್ಚಿಸಿದ್ದು, ಅದರ ಇಳಿಕೆಗೆ ಗಮನ ಹರಿಸುತ್ತಿಲ್ಲ ಎಂಬ ಆರೋಪಗಳು ಜಲಮಂಡಳಿ ಮೇಲಿದೆ. ನೀರಿನ ಶುಲ್ಕ ಪಾವತಿ ಬಾಕಿ ಇದೆ. ಇದೆಲ್ಲದರ ಮಧ್ಯೆ ದೂರದ ರಾಜ್ಯದಿಂದ ಪೂಜಾರಿಗಳನ್ನು ಕರೆಯಿಸಿ ಇಷ್ಟು ದೊಡ್ಡಮಟ್ಟದಲ್ಲಿ ಖರ್ಚು ಮಾಡುವುದು ಬೇಕಾ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಹಣ ಬಳಸಿ
ಬೆಂಗಳೂರಿನ ಹೆಣ್ಣೂರು, ವೈಟ್‌ಫಿಲ್ಡ್ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಜನರು ಟ್ಯಾಂಕರ್ ನೀರು ಅವಲಂಬಿಸಿದ್ದಾರೆ. ಅಲ್ಲಿ ಟ್ಯಾಂಕರ್ ದರ ಹೆಚ್ಚಿದ್ದು, ಏಕರೂಪ ದರ ನಿಗದಿಗೆ ಸರ್ಕಾರ ಕ್ರಮ ಜರುಗಿಸಬೇಕು. ಇದನ್ನು ಮಾಡದೇ ಮಿತಿ ಮೀರಿ ವೆಚ್ಚ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ವಿರೋಧ ವ್ಯಕ್ತವಾಗಿದೆ.
ಕಾವೇರಿ ಆರತಿ ಕುರಿತ ಸಿದ್ಧತೆಗಳನ್ನು ಸೋಮವಾರ ಸ್ಯಾಂಕಿ ಕೆರೆ ಆವರಣದಲ್ಲಿ ಪರಿಶೀಲಿಸಿದ ಜಲ ಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಅವರು ಮಾತನಾಡಿದರು. ಕಾವೇರಿ ನದಿ ಶತಮಾನಗಳಿಂದ ಕರ್ನಾಟಕದ ಜೀವನಾಡಿಯಾಗಿದೆ. ಬೆಂಗಳೂರು ನಗರ ಬೆಳೆಯುವಲ್ಲಿ ಮತ್ತು ನಗರಕ್ಕೆ ನೀರು ಪೂರೈಸುವಲ್ಲಿ ಕಾವೇರಿ ತಾಯಿ ಮಹತ್ವದ ಪಾತ್ರ ವಹಿಸುತ್ತಿದ್ದಾಳೆ. ಕಾವೇರಿ ತಾಯಿ ನೀರು ಮಾತ್ರವಲ್ಲದೆ, ರಾಜ್ಯದ ಜನರಿಗೆ ಅನ್ನ ಕೊಡುತ್ತಿದ್ದಾಳೆ.
ನೀರಿನ ಲಭ್ಯತೆ ಹಾಗೂ ಸಮರ್ಪಕ ಬಳಕೆಯ ಬಗ್ಗೆ ಹಲವಾರು ಸವಾಲುಗಳು ಎದುರಾಗುತ್ತಿರುವ ಸಂಧರ್ಭದಲ್ಲಿ, ಈ ಅಮೂಲ್ಯ ಸಂಪತ್ತನ್ನು ಸಂರಕ್ಷಿಸುವುದು ಹಾಗೂ ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಹಿನ್ನಲೆಯಲ್ಲಿ ಆಯೋಜಿಸಲಾಗಿರುವ ಕಾವೇರಿ ಆರತಿ ಕೇವಲ ಒಂದು ಕಾರ್ಯಕ್ರಮವಲ್ಲ, ಇದು ನೀರಿನ ಸಂರಕ್ಷಣೆ, ಸಮರ್ಪಕ ಬಳಕೆ, ಸುಸ್ಥಿರ ನೀರು ನಿರ್ವಹಣಾ ಪದ್ದತಿಗಳ ಅಳವಡಿಸಿಕೊಳ್ಳುವ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸುವ ಒಂದು ಅಭಿಯಾನವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಮುಖ ಅಂಶಗಳು
* ಬೆಂಗಳೂರು ಜಲಮಂಡಳಿ 60 ವರ್ಷ ಪೂರೈಸಿದ ಹಿನ್ನಲೆ ಆಯೋಜಿಸಿರುವ ವಜ್ರಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ 'ಕಾವೇರಿ ಆರತಿ'ಯು ವಿನೂತನ ಕಾರ್ಯಕ್ರಮ
* ಜನರ ಧಾರ್ಮಿಕ ಭಾವನೆಗೆ ಒತ್ತು ನೀಡುವುದು ಹಾಗೆಯೇ, ನೀರಿನ ಉಳಿತಾಯ ಹಾಗೂ ಸಮರ್ಪಕ ಬಳಕೆಯ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವುದು.
*ಕಾವೇರಿ ಆರತಿ ಪ್ರಯುಕ್ತ ಕೊಡಗು ಜಿಲ್ಲೆ ಭಾಗಮಂಡಲದಿಂದ ಕಲಶಗಳ ಮೂಲಕ ಕಾವೇರಿ ನೀರನ್ನು ತಂದು ಸ್ಯಾಂಕಿ ಕೆರೆ ಆವರಣದಲ್ಲಿ ಪೂಜೆ.
* ಸಂಜೆ 6 ಗಂಟೆ ಬಳಿಕ ಕಾವೇರಿ ಆರತಿ ಹಮ್ಮಿಕೊಳ್ಳಲಾಗುವುದು. ಆ ಮೂಲಕ ಬೆಂಗಳೂರಿನ ಜನರ ದಾಹ ತಣಿಸುವ ಕಾವೇರಿ ತಾಯಿಗೆ ಕೃತಜ್ಞತೆ ಸಲ್ಲಿಸಲಾಗುವುದು.
* ಕಾವೇರಿ ಆರತಿ ಜತೆಗೆ ನೀರು ಉಳಿತಾಯ, ನೀರಿನ ಸಮರ್ಪಕ ನೀರಿನ ಉಳಿತಾಯ, ಸಂಸ್ಕರಿಸಿದ ನೀರಿನ ಮರು ಬಳಕೆ, ಅಂತರ್ಜಲ ಮರುಪೂರಣ ಹಾಗೂ ಮಳೆ ನೀರು ಕೊಯ್ಲು ಬಗ್ಗೆ ಸಂದೇಶಗಳನ್ನು ಸಾರಲಾಗುವುದು.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications